ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ!

ಬಸ್ಸಿನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ತಾಯಿ!


ಬಳ್ಳಾರಿ: ದಿಢೀರನೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಬಸ್ಸಿನಲ್ಲೇ ಗರ್ಭೀಣಿ ಮಹಿಳೆಯೋರ್ವಳು ಗಂಡು ಮಗುವೊಂದಕ್ಕೆ ಜನ್ಮನೀಡಿದ ಪ್ರಕರಣ ಬುಧವಾರ ಘಟಿಸಿದೆ.

ಜಿಲ್ಲೆಯ ಸಂಡೂರು ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರೇ ಬಸ್ಸಿನೊಳಗೆ
ಮಗುವಿಗೆ ಜನ್ಮವಿತ್ತ ಬಾಣಂತಿ ಮಹಿಳೆ. ಸಂಡೂರು ಪಟ್ಟಣದಿಂದ ನೆರೆಯ ಚಿತ್ರದುರ್ಗ ಜಿಲ್ಲೆಯ ರಾಂಪುರಕ್ಕೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಾಗ ರಾಂಪುರ ಬಳಿ ಮಹಿಳೆಗೆ ವಿಪರೀತ ಹೆರಿಗೆ ನೋವು ಕಾಣಿಸಿಕೊಂಡಿದೆ. ಆ ನೋವನ್ನು ತಾಳಲಾರದೇ ನರಳಾಡುತ್ತಿದ್ದ ಗರ್ಭಿಣಿ ಮಹಿಳೆಯ ಸ್ಥಿತಿಯನ್ನು ಗಮನಿಸಿದ ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರು, ಆಕೆ ಕುಳಿತಿದ್ದ ಸೀಟಿನ ಸುತ್ತಲೂ ಸೀರೆಯೊಂದನ್ನು ಕಟ್ಟಿ, ಬಸ್ಸಿನಲ್ಲೇ ಹೆರಿಗೆ ಮಾಡಿಸಿದ್ದಾರೆ.

ತಾಯಿ, ಮಗು ಆರೋಗ್ಯದಿಂದ ಇದ್ದಾರೆಂದು ತಿಳಿದುಬಂದಿದ್ದು, ರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಬಸ್ಸಿನ ಚಾಲಕರು, ನಿರ್ವಾಹಕರು ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.