ಸೆಟ್ಟೇರಲು ಸಿದ್ದವಾದ ಕರ್ವ-3

Share on facebook
Share on twitter
Share on linkedin
Share on whatsapp
Share on email

ಈ ಹಿಂದೆ 6-5 =2’ ಮತ್ತು ‘ದಿಯಾ’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೃಷ್ಣ ಚೈತನ್ಯ ಈಗ ಮತ್ತೊಂದು ಹೊಸಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ. ಸ್ವರ್ಣಲತಾ ಪೆÇ್ರಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮುಂದಿನ ಚಿತ್ರಕ್ಕೆ ಕರ್ವ-3 ಎಂದು ಟೈಟಲ್ ಇಡಲಾಗಿದ್ದು, ಸ್ಯಾಂಡಲ್‍ವುಡ್ ಹಿಟ್ ಚಿತ್ರವಾಗಿದ್ದ ಕರ್ವ’ಚಿತ್ರದ ಮುಂದುವರಿದ ಭಾಗದೊಡನೆ ಚಿತ್ರವನ್ನು ತೆರೆಗೆ ತರುವ ಯೋಜನೆ ನಿರ್ಮಾಪಕರದ್ದು.

ಕರ್ವ 3’ಮೂಲಕ ವಿಶಾಲ್ ಶೇಖರ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿ ಅದೃಷ್ಟ ಪರೀಕ್ಷಿಸಲಿದ್ದಾರೆ. ಹಾರರ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರದ ತಾರಾಂಗಣದಲ್ಲಿ ತಿಲಕ್ ಶೇಖರ್ ಮತ್ತು ಮೇಘನಾ ಗಾಂವ್ಕರ್ ಮೊದಲ ಬಾರಿಗೆ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಯಾಂಡಲ್‍ವುಡ್‍ಗೆ ಹೊಸಬರಾಗಿರುವ ವಿಶಾಲ್ ಶೇಖರ್ ಅದ್ಭುತವಾದ ಸ್ಕ್ರಿಪ್ಟ್ ಅನ್ನು ತಂದಿದ್ದಾರೆ, ಇದು ಹಾರರ್ ಕಮ್ ಥ್ರಿಲ್ಲರ್ ಗೆ ವಿಶಿಷ್ಟ ವಿಷಯವಾಗಿದೆ ಎಂದು ನಾನು ಭಾವಿಸಿದೆ. ಅವರು ಈಗ ಸ್ಟೋರಿ ತಯಾರಾಗುತ್ತಿದೆ. ಇದೇ ನನ್ನ ಮುಂದಿನ ಚಿತ್ರವಾಗಿರಲಿದೆ. ಲಾಕ್ ಡೌನ್ ಮುಗಿದು ಶೂಟಿಂಗ್ ಪ್ರಾರಂಭವಾದಾಗ ಈ ಚಿತ್ರ ಸೆಟ್ಟೇರುತ್ತದೆ. ಚಿತ್ರದಲ್ಲಿ ಹಿಂದಿನ ಕರ್ವ ಚಿತ್ರದಲ್ಲಿದ್ದ ಸಾಕಷ್ಟು ಕಲಾವಿದರು ಇರಲಿದ್ದಾರೆ. ಉಳಿದ ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಇನ್ನೂ ಅಂತಿಮ ಮಾಡಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ.

ಲಲಿತಕಲೆ ಮತ್ತು ಆನಿಮೇಷನ್ ಹಿನ್ನೆಲೆಯಿಂದ ಬಂದಿರುವ ವಿಶಾಲ್ ಪ್ರಸ್ತುತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ಚೈತನ್ಯ ನಾನು ಪ್ರಸ್ತುತಪಡಿಸಿದ ಕಿರುಚಿತ್ರವನ್ನು ನೋಡಿದ್ದಾರೆ. ಮತ್ತು ನಾನೊಂದು ಕಥೆ ನಿರೂಪಿಸಲು ಹೇಳಿದ್ದರು. ಇದು ನನ್ನ ಬಹುನಿರೀಕ್ಷೆಯ ಕಥೆಯಾಗಿತ್ತು’ವಿಶಾಲ್ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter