ಫುಟ್ಬಾಲ್ ದಂತಕತೆ ಪೀಲೆ ದಾಖಲೆ ಸರಿಗಟ್ಟಿದ ಮೆಸ್ಸಿ

Share on facebook
Share on twitter
Share on linkedin
Share on whatsapp
Share on email

ಬಾರ್ಸಿಲೋನಾ: ಅಜೆರ್ಂಟೀನಾದ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಅವರು ಮತ್ತೊಬ್ಬ ಫುಟ್ಬಾಲ್ ದಿಗ್ಗಜ ಬ್ರೆಝಿಲ್‍ನ ಪೀಲೆ ಹೆಸರಿನಲ್ಲಿದ್ದ ಗೋಲ್‍ಗಳ ದಾಖಲೆ ಸರಿಗಟ್ಟಿದ್ದಾರೆ. ಬಾರ್ಸಿಲೋನಾ ಕ್ಲಬ್ ಪರ 644 ಗೋಲ್‍ಗಳನ್ನು ಬಾರಿಸುವ ಮೂಲಕ ಮೆಸ್ಸಿ ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಮಂಗಳವಾರ (ಡಿಸೆಂಬರ್ 22) ನಡೆದ ಲಾ ಲಿಗಾ ಪಂದ್ಯದಲ್ಲಿ ವಲ್ಲಾಡೋಲಿಡ್ ವಿರುದ್ಧ ಬಾರ್ಸಿಲೋನಾ 3-0ಯ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಮೆಸ್ಸಿ 65ನೇ ನಿಮಿಷದಲ್ಲಿ ಗೋಲ್ ಬಾರಿಸಿದ್ದರು. ಈ ಗೋಲ್‍ನೊಂದಿಗೆ ಮೆಸ್ಸಿ ದಾಖಲೆ ನಿರ್ಮಿಸಿದಂತಾಗಿದೆ. ಪಂದ್ಯದ ಬಳಿಕ ಮೆಸ್ಸಿ ಇನ್‍ಸ್ಟಾಗ್ರಾಮ್ ಪೆÇೀಸ್ಟ್ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ‘ನಾನು ಫುಟ್ಬಾಲ್ ಆಡಲಾರಂಭಿಸಿದಾಗ ನಾನು ಯಾವೊಂದೂ ದಾಖಲೆ ಮಾಡಬಲ್ಲದೆ ಅಂದುಕೊಂಡಿರಲಿಲ್ಲ. ಹಾಗಂತ ಇವತ್ತು ನಾನು ಸಾಧಿಸಿದ್ದೂ ದೊಡ್ಡದೇನಲ್ಲ, ಇದೂ ಕಡಿಮೆಯೆ,’ ಎಂದು ಮೆಸ್ಸಿ ಇನ್‍ಸ್ಟಾ ಪೆÇೀಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

ಶನಿವಾರ (ಡಿಸೆಂಬರ್ 19) ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ವೆಲೆನ್ಸಿಯಾ ವಿರುದ್ಧ 2-2ರ ಡ್ರಾ ಸಾಧಿಸಿದ್ದಾಗಲೇ ಮೆಸ್ಸಿ, ಪೀಲೆ ಹಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ ಸರಿದೂಗಿಸಿದ್ದರು. 33ರ ಹರೆಯದ ಮೆಸ್ಸಿ ಬಾರ್ಸಿಲೋನಾ ಪರ 749 ಪಂದ್ಯಗಳಲ್ಲಿ 644 ಗೋಲ್ ಬಾರಿಸಿದ್ದಾರೆ. 1956ರಿಂದ 1974ರ ವರೆಗೆ ಸ್ಯಾಂಟೋಸ್ ಪರ ಆಡಿದ್ದ ಪೀಲೆ 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ದಾಖಲೆ ನಿರ್ಮಿಸಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter