ನವದೆಹಲಿ: ಮುಷ್ಕರ , ಸಾಲು ರಜೆಯ ಕಾರಣ ಬ್ಯಾಂಕ್ ಕೆಲಸ ಕಾರ್ಯಗಳನ್ನು ಇಂದೇ ಮಾಡಿ ಮುಗಿಸಿ ಕೊಳ್ಳಬೇಕು .
ಗುರುವಾರ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮುಷ್ಕರ ನಡೆಸಲು ನಿರ್ಧರಿಸಿವೆ. ಹಲವು ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿವೆ.
ನ. 27ರಂದು ಬ್ಯಾಂಕ್ ಗಳು ತಮ್ಮ ಸೇವೆಯನ್ನು ಪುನರಾರಂಭಿಸಲಿವೆ. ಇದಾದ ನಂತರ, ನವೆಂಬರ್ 29 ರಂದು ನಾಲ್ಕನೇ ಶನಿವಾರ ಮತ್ತು ನವೆಂಬರ್ 29, ಭಾನುವಾರ ಮತ್ತೆ ಬ್ಯಾಂಕ್ ಗೆ ರಜೆಯಿದೆ.
ನವೆಂಬರ್ 26ರ ಮುಷ್ಕರ ಡಿಜಿಟಲ್ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಬಳಕೆದಾರರು ಇನ್ನೂ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ವಹಿವಾಟು ನಡೆಸಬಹುದು. ಇದೇ ವೇಳೆ, ನೀವು ಎಟಿಎಂಗಳಿಂದ ಹಣ ವನ್ನು ಡ್ರಾ ಮಾಡಬಹುದಾಗಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳು ಕೇಂದ್ರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನವೆಂಬರ್ 26ರಂದು ಕರೆ ನೀಡಿರುವ ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ತಿಳಿಸಿದೆ. ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ವನ್ನು ಆಚರಿಸಲಿವೆ.