‘ನಿವಾರ್’ ಚಂಡಮಾರುತ: ಭಾರೀ ಮಳೆ

Share on facebook
Share on twitter
Share on linkedin
Share on whatsapp
Share on email

ಚೆನ್ನೈ: ನಿವಾರ್ ಚಂಡಮಾರುತ ಕರಾವಳಿಗೆ ಸಮೀಪಿಸುತ್ತಿದ್ದಂತೆ ಚೆನ್ನೈ ಮತ್ತು ಅದರ ಉಪನಗರಗಳ ಹಲವಾರು ಪ್ರದೇಶಗಳಲ್ಲಿ ನಿನ್ನೆ ಸಂಜೆಯಿಂದ ಎಡಬಿಡದೆ ಭಾರೀ ಮಳೆಯಾಗುತ್ತಿದೆ.
ನಿನ್ನೆ ಬೆಳಿಗ್ಗೆ ಶುರವಾದ ಮಳೆ ಕೆಲವೊಮ್ಮೆ ತೀವ್ರವಾಗಿದ್ದು, ರಾತ್ರಿಯಿಡೀ ನಿರಂತರವಾಗಿ ಸುರಿದಿದೆ. ಇಂದು ಬೆಳಿಗ್ಗೆಯೂ ಮುಂದುವರೆದ ಮಳೆಯಿಂದ ಚೆನ್ನೈ ಮತ್ತು ಸುತ್ತಮುತ್ತಲಿನ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ.

ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನಗರದ ಅಪಾರ್ಟ್‍ ಮೆಂಟ್ ಗಳು ಮತ್ತು ಮನೆಗಳಿಗೂ ನೀರು ನುಗ್ಗಿದೆ.
ನೀರನ್ನು ಹೊರಹಾಕುವ ಕಾರ್ಯಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿರತರಾಗಿದ್ದಾರೆ. ಅಲ್ಲದೆ, ನಗರದಲ್ಲಿ ಉರುಳಿಬಿದ್ದ ಮರಗಳು ಮತ್ತು ಮರದ ಕೊಂಬೆಗನ್ನು ಯಂತ್ರಗಳ ಮೂಲಕ ಕತ್ತರಿಸಿ ತೆರವುಗೊಳಿಸಲಾಗುತ್ತಿದೆ..

ನಗರದ ಅನೇಕ ಸುರಂಗಮಾರ್ಗಗಳು ಸಹ ನೀರಿನಿಂದ ತುಂಬಿ ಹೋಗಿವೆ. ಸೇವಾ ರಸ್ತೆಗಳು ನೀರಿನಿಂದ ತುಂಬಿಕೊಂಡಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಸರ್ಕಾರ ಇಂದು ಸರ್ಕಾರಿ ರಜೆಯನ್ನು ಘೋಷಿಸಿದ್ದು, ಜನರು ಮನೆಗಳಲ್ಲೇ ಇರುವಂತೆ ಮನವಿ ಮಾಡಿದೆ.
ನಗರದಲ್ಲಿ ರಸ್ತೆಗಳು ನಿರ್ಜನವಾಗಿದ್ದು ಮಹಾನಗರ ಸಾರಿಗೆ ನಿಗಮ(ಎಂಟಿಸಿ) ನಗರದಲ್ಲಿ ಸೀಮಿತ ಸೇವೆಗಳನ್ನು ಒದಗಿಸುತ್ತಿದೆ. ದಕ್ಷಿಣ ಭಾಗಕ್ಕೆ ಅನೇಕ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಪಡಿಸಲಾಗಿದೆ ಉಪನಗರದ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter