ಗಾನಗಂಧರ್ವ ಎಸ್ ಪಿ ಬಿ ಇನ್ನಿಲ್ಲ

Share on facebook
Share on twitter
Share on linkedin
Share on whatsapp
Share on email

ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕ, ಗಾನ ಗಾರುಡಿ ಎಸ್‍ ಪಿ ಬಾಲಸುಬ್ರಹ್ಮಣ್ಯಂ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆ, ಕೊರೋನಾ ಸೋಂಕಿನಿಂದಾಗಿ ಆಗಸ್ಟ್ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು.

ಕಳೆದ 51 ದಿನಗಳಿಂದ ಜೀವನ್ಮರಣದ ಹೋರಾಟವನ್ನು ತಂದೆ ಮುಕ್ತಾಯಗೊಳಿಸಿದ್ದಾರೆ. ಮಧ್ಯಾಹ್ನ 01. 05 ನಿಮಿಷಕ್ಕೆ ಕೊನೆಯುಸಿರೆಳೆದಿರುವುದಾಗಿ ಪುತ್ರ ಎಸ್ ಪಿ ಚರಣ್ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ್ದ ನಿರ್ದೇಶಕ ಭಾರತಿರಾಜ ಪ್ರಕಟಿಸಿದ್ದು, “ನನ್ನ ದುಃಖವನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯುತ್ತಿಲ್ಲ. ಪ್ರಕೃತಿಯ ಮುಂದೆ ನಾವೇನೂ ಅಲ್ಲ. ಅವರು 50 ವರ್ಷ‍ಗಳ ಕಾಲ ಗಾನ ಲೋಕದ ಅದ್ಭುತವಾಗಿದ್ದರು. ಎಲ್ಲವೂ ದೇವರ ಕೈಯಲ್ಲಿದೆ” ಎಂದು ಭಾವುಕರಾಗಿ ನುಡಿದಿದ್ದರು.

ದೇಶ ವಿದೇಶದಲ್ಲಿರುವ ಕೋಟ್ಯಂತರ ಅಭಿಮಾನಿಗಳು ಎಸ್‍ಪಿಬಿ ಚೇತರಿಕೆಗಾಗಿ ಮಾಡಿದ ಪ್ರಾರ್ಥನೆ ಫಲಿಸದೆ ಉಸಿರು ಹೊರಚೆಲ್ಲಿದ್ದಾರೆ.

-:ಜೀವನ್ಮರಣದ ನಡುವೆ ಹೋರಾಟ:-

ಕೊರೋನಾ ಸೋಂಕಿನಿಂದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಆಗಸ್ಟ್​ 5ರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೆಲ ದಿನಗಳ ಹಿಂದೆ ಚೇತರಿಕೆ ಕಂಡಿದ್ದರು. ಆದರೆ ಗುರುವಾರದಿಂದ ಅವರ ದೇಹಸ್ಥಿತಿ ಬಿಗಡಾಯಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಅವರ ಚಿಕಿತ್ಸೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿತ್ತು.

ಗುರುವಾರವೇ ಖ್ಯಾತ ನಟ ಕಮಲಹಾಸನ್ ಆಸ್ಪತ್ರೆಗೆ ಭೇಟಿಯಿತ್ತು, ವೈದ್ಯರೊಡನೆ ಸಮಾಲೋಚಿಸಿ ಮಾಹಿತಿ ಪಡೆದಿದ್ದರು. ಶುಕ್ರವಾರ ಬೆಳಗ್ಗೆ ಎಸ್‍ ಪಿ ಬಿ ಸೋದರಿ ಶೈಲಜಾ, ಪುತ್ರಿ ಪಲ್ಲವಿ, ಪುತ್ರ ಚರಣ್, ನಿರ್ದೇಶಕ ಭಾರತಿರಾಜಾ ಸೇರಿದಂತೆ ರಾಜಕೀಯ ಮುಖಂಡರುಗಳು ಭೇಟಿ ನೀಡಿದ್ದರು.

ಕಳೆದೆರಡು ದಿನಗಳ ಹಿಂದೆ ಎಸ್​ಪಿ ಬಿ ಆರೋಗ್ಯದ ಕುರಿತು ಮಾಹಿತಿ ನೀಡಿದ ಅವರ ಮಗ ಚರಣ್​, ತಂದೆ ಆರೋಗ್ಯ ಸುಧಾರಿಸುತ್ತಿದೆ ಎಂದಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ಸ್ಥಿರವಾಗಿದ್ದಾರೆ ಎಂದು ಇನ್ಸ್​ಟಾಗ್ರಾಂನಲ್ಲಿ ತಿಳಿಸಿದ್ದರು.

ಸೆ.7ರಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಎಸ್​ಪಿ ಅವರಿಗೆ ಸೋಂಕಿಲ್ಲ ಎಂಬುದಾಗಿ ವರದಿ ಬಂದಿತ್ತು. ಅವರ ಶ್ವಾಸಕೋಶ ಕೊಂಚ ಸುಧಾರಿಸುವ ಅವಶ್ಯಕತೆ ಇದ್ದುದರಿಂದ ಕೃತಕ ಶ್ವಾಸಕೋಶದ ಮೂಲಕ ರಕ್ತಚಲನೆಗೆ ವ್ಯವಸ್ಥೆ ಮಾಡಲಾಗಿತ್ತು.

ಏತನ್ಮದ‍್ಯೆ ಕಳೆದವಾರ ಆಸ್ಪತ್ರೆಯಲ್ಲಿಯೇ ಎಸ್‍ ಪಿಬಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಆಸ್ಪತ್ರೆಯ ಬೆಡ್​ ಮೇಲೆ ಮಲಗಿಯೇ ಥಮ್ಸ್​ ಅಪ್​ ತೋರಿದ್ದ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಮತ್ತೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter