ಡಾಲಿ ಧನಂಜಯ್‍ರ ಡಾನ್ ಜಯರಾಜ್ ಪಾತ್ರದ ಚಿತ್ರದ ಶೀರ್ಷಿಕೆ ‘ಹೆಡ್ ಬುಷ್’

Share on facebook
Share on twitter
Share on linkedin
Share on whatsapp
Share on email

ಅಗ್ನಿ ಶ್ರೀಧರ್ ರವರ ದಾದಾಗಿರಿಯ ದಿನಗಳು ಕಾದಂಬರಿ ಆಧಾರಿತ ಸಿನಿಮಾ ಬರುತ್ತಿದೆ. ಚಿತ್ರಕ್ಕೆ ಡಾಲಿ ಧನಂಜಯ ನಾಯಕನಾಗಿ ಡಾನ್ ಜಯರಾಜನ ಪಾತ್ರ ನಿರ್ವಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಹೆಡ್ ಬುಷ್ ಎಂದು ಇಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗಲಿದೆ. ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಚಿತ್ರದ ಪೆÇೀಸ್ಟರ್‍ನ್ನು ಪವರ್‍ವಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಅವರ ಕುರಿತಾದ ಚಿತ್ರವಿದು. ಕೋವಿಡ್-19 ಇಲ್ಲದಿದ್ದರೆ ಚಿತ್ರದ ಶೂಟಿಂಗ್ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್ ಡೌನ್‍ನಿಂದ ಪ್ರಾರಂಭವಾಗಲಿಲ್ಲ. ಚಿತ್ರದ ಪ್ರೀ-ಪೆÇ್ರಡಕ್ಷನ್ ಕೆಲಸಗಳು ಒಂದು ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆಯುತ್ತಿದ್ದಾರೆ. 80ರ ದಶಕದಲ್ಲಿ ಬೆಂಗಳೂರಿನ ಅಂಡರ್‍ವಲ್ರ್ಡ್‍ಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಇಟ್ಟುಕೊಂಡು ಚಿತ್ರ ತಯಾರಾಗುತ್ತಿದೆ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter