ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 66,550 ಮಂದಿ ಚೇತರಿಕೆ; 24 ಲಕ್ಷ ದಾಟಿದ ಒಟ್ಟು ಸಂಖ್ಯೆ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 66,550 ಕೋವಿಡ್ -19 ರೋಗಿಗಳು ಚೇತರಿಸಿಕೊಂಡು ಬಿಡುಗಡೆಯಾಗುವುದರೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.


ಇದರೊಂದಿಗೆ ಒಟ್ಟು ಚೇತರಿಕೆ ಸಂಖ್ಯೆ 24,04,585 ಕ್ಕೆ ಏರಿದೆ.
ಸದ್ಯ, ದೇಶದಲ್ಲಿ 7,04,348 ಸಕ್ರಿಯ ಪ್ರಕರಣಗಳಿದ್ದು, ಚೇತರಿಸಿಕೊಂಡವರ ಸಂಖ್ಯೆ ಇದಕ್ಕಿಂತ 17 ಲಕ್ಷಕ್ಕೂ ಅಧಿಕವಾಗಿದೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತ 3.41 ಪಟ್ಟು ಹೆಚ್ಚಿದೆ ಎಂದು ಅಧಿಕೃತ ಪ್ರಕಟಣೆ ಮಂಗಳವಾರ ತಿಳಿಸಿದೆ.


ಇದರೊಂದಿಗೆ, ಕೋವಿಡ್ -19 ರೋಗಿಗಳಲ್ಲಿ ಚೇತರಿಕೆ ಪ್ರಮಾಣ ದೇಶದಲ್ಲಿ ಶೇ 76 ಕ್ಕೆ ತಲುಪಿದೆ (ಶೇ 75.92 ).
ಕಳೆದ 25 ದಿನಗಳಲ್ಲಿ ಚೇತರಿಕೆಗೊಂಡ ರೋಗಿಗಳಲ್ಲಿ ಶೇ 100 ಕ್ಕಿಂತ ಹೆಚ್ಚಳವಾಗಿದೆ.
ಮರಣ ಪ್ರಮಾಣ ಮಂಗಳವಾರ ಶೇ 1.84ಕ್ಕೆ ಇಳಿದಿದೆ .

ಸದ್ಯ, ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ 22.24ರಷ್ಟಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter