ಅಮೆರಿಕದಲ್ಲಿ ಕೋವಿದ್ ಸೋಂಕು ನಿಯಂತ್ರಣದಲ್ಲಿದೆ

Share on facebook
Share on twitter
Share on linkedin
Share on whatsapp
Share on email

ವಾಷಿಂಗ್ಟನ್,: ಅಮೆರಿಕದಲ್ಲಿ ಕೋವಿದ್ -19 ಸೋಂಕು ಹರಡುವಿಕೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಯ ನೀಡಿದ್ದಾರೆ.

ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕದಲ್ಲಿ ಕೊರೋನಾ ವೈರಾಣು ಬಹಳಷ್ಟು ನಿಯಂತ್ರಣದಲ್ಲಿದೆ. ಈ ಸಂಬಂಧ ನಾವು ಎಲ್ಲಾ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.

ಅಮೆರಿಕದ ರೋಗ ನಿಯಂತ್ರಣ ಮತ್ರು ನಿವಾರಣಾ ಕೇಂದ್ರಗಳು (ಸಿಡಿಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯು ಎಚ್ ಒ) ನಿರಂತರ ಪ್ರಯತ್ನವನ್ನು ಶ್ಲಾಘಿಸಿರುವ ಮೋದಿ, ‘ಸಿಡಿಸಿ ಮತ್ತು ಡಬ್ಲ್ಯು ಎಚ್ ಒ ಸೋಂಕು ತಡೆಗೆ ಚತುರತೆಯಿಂದ ಕೆಲಸ ಮಾಡುತ್ತಿವೆ. ಷೇರು ಮಾರುಕಟ್ಟೆ ಕೂಡ ಉತ್ತಮವಾಗಿಯೇ ಇದೆ ‘ ಎಂದಿದ್ದಾರೆ.

ಆದರೆ, ಅಮೆರಿಕದಲ್ಲಿ ಸಾವಿರಕ್ಕೂ ಹೆಚ್ಚು ಕೋವಿದ್ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಭಾರಿ ಕುಸಿತ ಕಂಡುಬಂದಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter