ವಾರಾಣಾಸಿಯಿಂದ ಪ್ರಧಾನಿ ಮೋದಿ ಸ್ಪರ್ಧೆ ಪ್ರಶ್ನಿಸಿದ್ದ ಅರ್ಜಿ ವಜಾ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದನ್ನು ಪ್ರಶ್ನಿಸಿ ಬಿಎಸ್‌ಎಫ್‌ ಯೋಧ ತೇಜ್‌ ಬಹದ್ದೂರ್‌ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.
ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್‌ ಹೈಕೋರ್ಟ್ ತೀರ್ಪು ಸರಿಯಾಗಿದೆ ಎಂಬುದು ನಮ್ಮ ಅಭಿಪ್ರಾಯ. ಆದ್ದರಿಂದ ಸಿವಿಲ್‌ ಮೇಲ್ಮನವಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಮತ್ತು ನ್ಯಾ. ಎ.ಎಸ್‌.ಬೋಪಣ್ಣ ಮ ತ್ತು ವಿ.ರಾಮಸುಬ್ರಹ್ಮಣಿಯನ್‌ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಬಿಎಸ್‌ಎಫ್‌ ಯೋಧ ಬಹದೂರ್‌, 2019ರ ವಾರಾಣಾಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷವನ್ನು ಪ್ರತಿನಿಧಿಸಲು ಬಯಸಿದ್ದರು. ಆದರೆ, ಅವರ ನಾಮಪತ್ರಗಳನ್ನು ಈ ಸಂಬಂಧ ಬಿಎಸ್‌ಎಫ್‌ ಇಂದ ಅನುಮತಿ ಪಡೆದಿರುವ ಪ್ರಮಾಣಪತ್ರ ಒದಗಿಸಿಲ್ಲ ಎಮಬ ಕಾರಣಕ್ಕೆ ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ಅವರು ಬಿಎಸ್‌ಎಫ್‌ ಪಡೆಯಿಂದ ಭ್ರಷ್ಟಾಚಾರ ಅಥವಾ ಅಪ್ರಾಮಾಣಿಕತೆಯ ಆರೋಪದ ಮೇಲೆ ವಜಾಗೊಂಡಿಲ್ಲ ಎಂಬ ಸ್ಪಷ್ಟನೆ ನೀಡಿರಲಿಲ್ಲ.


ಬಹದೂರ್‌ ಈ ನಿರ್ಧಾರವನ್ನು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪರವಾಗಿ ಕೆಲಸ ಮಾಡುವ ಸಲುವಾಗಿ ತಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದರು.
ನಂತರ, ಅವರು 2020ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *