ಹರಪನಹಳ್ಳಿ ತಾಲೂಕು ಎಂದೋ ಜಿಲ್ಲಾ ಕೇಂದ್ರವಾಗಬೇಕಿತ್ತು

Share on facebook
Share on twitter
Share on linkedin
Share on whatsapp
Share on email

ಬೆಳಗಾಯಿತು ವಾರ್ತೆ
ಹರಪನಹಳ್ಳಿ:ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳು ಯಾವಾಗಲೂ ಹರಪನಹಳ್ಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಹರಪನಹಳ್ಳಿ ಜಿಲ್ಲೆಯಾಗಲು ಸರ್ವ ರೀತಿಯಿಂದ ಸೂಕ್ತವಾಗಿದೆ ಎಂದು ಎಲ್.ಐ.ಸಿ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಹೇಮಣ್ಣ ಮೋರಿಗೇರಿ ಹೇಳಿದರು.

ಪಟ್ಟಣದ ಐ.ಬಿ ವೃತ್ತದಲ್ಲಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಹಾಕಲಾಗಿರುವ ತಾತ್ಕಾಲಿಕ ಟೆಂಟಿನಲ್ಲಿ ಎಲ್.ಐ.ಸಿ ಪ್ರತಿನಿಧಿಗಳ ಜೊತೆ ಆಗಮಿಸಿ ಜಿಲ್ಲಾ ಹೋರಾಟಕ್ಕೆ ಬೆಂಬಲ ಸೂಚಿಸಿದ ಬಳಿಕ ಮಾತನಾಡಿದ ಅವರು ಹರಪನಹಳ್ಳಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬೇಕಾಗುವ ಎಲ್ಲಾ ಮೂಲ ಸೌಕರ್ಯಗಳ ಅನುಕೂಲವಿದೆ. ಹರಪನಹಳ್ಳಿ ಜಿಲ್ಲಾ ಕೇಂದ್ರವಾದರೆ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಿಗೆ ಕೇವಲ 25 ರಿಂದ 40 ಕಿ.ಮೀ.ದೂರದಲ್ಲಿಯೇ ಜಿಲ್ಲಾ ಕೇಂದ್ರವಾದಂತಾಗಿ ಅವರಿಗೆ ಆಡಳಿತದ ದೃಷ್ಠಿಯಿಂದ ಅನುಕೂಲವಾಗುತ್ತದೆ ಎಂದರು.

ಗೊಂದಲಿ ಗೋಪಾಲ್, ಸಾಸ್ವಿಹಳ್ಳಿ ಬಸವರಾಜ್, ಮಾತನಾಡಿದರು. ಧರಣಿಯಲ್ಲಿ ಗುಡಿಹಳ್ಳಿ ಶಿವಕುಮಾರ್, ಕೋಡಿಹಳ್ಳಿ ರೇವಣ್ಣ, ಮುಲಾಲಿ ಬಸವರಾಜ್, ಕಂಭಟ್ರಳ್ಳಿ ಹಾಲೇಶ್, ಹುಲಿಕಟ್ಟಿ ಮಂಜಪ್ಪ, ಮರಾಠ ಲಕ್ಷ್ಮಣ, ರಮೇಶ್‍ಕಲ್ಲೂರ ಡಿ.ಬಸವರಾಜ್, ಸಲಾವುದ್ದೀನ್, ಓ.ದೇವರಾಜ್, ಲೋಕೇಶ್‍ಗೌಡ, ಯರಬಳ್ಳಿ ಮಂಜುನಾಥ, ಡಿ.ಕೊಟ್ರಪ್ಪ, ಶಿಕಾರಿ ಬಾಲಪ್ಪ, ಕೆ.ಪಿ.ಸುರೇಶ,ದ್ವಾರಕೇಶ್, ವೈ.ಆರ್.ಬಸವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter