ಭಾರಿ ಬೆಂಕಿ, 3 ಸಾವಿರ ಜನ ಅಪಾಯದಿಂದ ಪಾರು

Share on facebook
Share on twitter
Share on linkedin
Share on whatsapp
Share on email

ಮುಂಬೈ: ದಕ್ಷಿಣ ಮುಂಬೈನ ಸಿಂಟಿ ಸೆಂಟರ್ ಮಾಲ್ ನಲ್ಲಿ ಗುರುವಾರ ರಾತ್ರಿ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಮೂರು ಸಾವಿರ ಜನರನ್ನು ರಕ್ಷಣೆ ಮಾಡಿದ್ದು ಭಾರಿ ಪ್ರಮಾಣದ ಜೀವ ಹಾನಿ ದುರಂತ ತಪ್ಪಿದೆ.

ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.ರಾತ್ರಿ ನಾಲ್ಕು ಮಹಡಿಯ ಮಾಲ್ ನಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತ್ತು. ದಟ್ಟ ಹೊಗೆ ಮಾಲ್ ಒಳಭಾಗ ಹಾಗೂ ಹೊರಗೆ ಆವರಿಸಿತ್ತು. ಇದರಿಂದ ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲಾರಂಭಿಸಿದ್ದರು.
ಕೂಡಲೇ 20 ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಿಂದಿಸುವ ಕಾರ್ಯ ಆರಂಭಿಸಿದವು. ಅಗ್ನಿಶಾಮಕ ದಳದ ಒಬ್ಬ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೊದಲ ಹಂತದಲ್ಲಿ ಮಾತ್ರ ಆವರಿಸಿದ್ದ ಬೆಂಕಿ, ನಂತರ ಮೂರನೇ ಹಂತದವರೆಗೂ ಭುಗಿಲೆದ್ದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನೂ ಪೊಲೀಸರು ಸ್ಥಳಾಂತರಗೊಳಿಸಿದ್ದರು.

ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಮಾಲ್ ನಲ್ಲಿ ಹೆಚ್ಚಿನ ಅಂಗಡಿಗಳು ಮೊಬೈಲ್ ಬಿಡಿಭಾಗಗಳ ಮಾರಾಟ ಮಾಡುತ್ತಿದ್ದವು. ಅಗ್ನಿಯ ಜ್ವಾಲೆಗೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿದ್ದು,ಕೋಟ್ಯಂತರರೂ. ಆಸ್ತಿ- ಪಾಸ್ತಿಗೆ ಹಾನಿಯಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter