ತಾಂತ್ರಿಕವಾಗಿ ಶ್ರೀಮಂತನಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ 27ಕ್ಕೆ ಸಿನಿಮಾ ರಿಲೀಸ್

ತಾಂತ್ರಿಕವಾಗಿ ಶ್ರೀಮಂತನಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ 27ಕ್ಕೆ ಸಿನಿಮಾ ರಿಲೀಸ್

ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದ್ದಾನೆ. ಕೆಜಿಎಫ್, ಪೈಲ್ವಾನ್ ಆದಮೇಲೆ ಇದೀಗ ‘… ಶ್ರೀಮನ್ನಾರಾಯಣ’ ಸರದಿ. ಈ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ತರೆಗೆ ಸಿದ್ದವಾಗಿದ್ದು, ಎಲ್ಲಾ ಭಾಷೆಯಲ್ಲಿ ಏಕಕಾಲಕ್ಕೆ ಫ್ಯಾನ್ ಇಂಡಿಯಾ ಡಿಸೆಂಬರ್ 27ರಂದು ರಿಲೀಸ್ ಆಗಲಿದೆ. ಇದೀಗ ‘… ಶ್ರೀಮನ್ನಾರಾಯಣ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿವೆ. ಚಿತ್ರವನ್ನು ಇದೇ ವರ್ಷ ಪ್ರೇಕ್ಷಕರ ಮುಂದೆ ತರಲೇಬೇಕು ಎನ್ನುವ ಆಲೋಚನೆಯಲ್ಲಿ ಚಿತ್ರತಂಡ, ಹಗಲು-ರಾತ್ರಿ ಎನ್ನದೆ ಚಿತ್ರದ ಕೆಲಸಗಳಲ್ಲಿ ನಿರತವಾಗಿದೆ.
ಇನ್ನು “ಅವನೇ ಶ್ರೀಮನ್ನಾರಾಯಣ’ ಕೆಲಸಗಳು ಹೇಗೆ ನಡೆಯುತ್ತಿದೆ ಎನ್ನುವುದ ಬಗ್ಗೆ ನಾಯಕ ರಕ್ಷಿತ್ ಶೆಟ್ಟಿ ಅವರೆ ವಿವರಣೆ ನೀಡಿದ್ದಾರೆ. ಇತ್ತೀಚೆಗೆ (ಸೋಮವಾರ) ತಮ್ಮ ಫೇಸ್‍ಬುಕ್ ಖಾತೆಯ ಮೂಲಕ ಲೈವ್ ಬಂದ ರಕ್ಷಿತ್ ಶೆಟ್ಟಿ, ಸೋಶಿಯಲ್ ಮೀಡಿಯಾ ಮೂಲಕವೇ, ವಿದೇಶದಲ್ಲಿ ನಡೆಯುತ್ತಿರುವ ತಮ್ಮ ಚಿತ್ರದ ಮ್ಯೂಸಿಕ್, ಬ್ಯಾಕ್‍ಗ್ರೌಂಡ್ ಸ್ಕೋರ್‍ನ ಲೈವ್ ರೆಕಾಡಿರ್ಂಗ್ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

“ಇಲ್ಲಿಯವರೆಗೆ ನಮ್ಮ ಚಿತ್ರದ ರೀ-ರೆಕಾಡಿರ್ಂಗ್ ಸಾಮಾನ್ಯವಾಗಿ ಮುಂಬೈ, ಚೆನ್ನೈನಲ್ಲಿ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮೆಸಿಡೋನಿಯಾದಲ್ಲಿ ಲೈವ್ ರೆಕಾಡಿರ್ಂಗ್ ನಡೆಯುತ್ತಿದೆ. ಅಜನೀಶ್ ಲೋಕನಾಥ್ ಇಲ್ಲಿಂದಲೇ ಸ್ಕೈಪ್ ಮೂಲಕ ರೆಕಾಡಿರ್ಂಗ್ ಮಾಡುತ್ತಿದ್ದಾರೆ’ ಎಂದರು. ಇನ್ನೂ ಮುಂದುವರೆದು, ‘ಅವನೇ ಶ್ರೀಮನ್ನಾರಾಯಣ ಏಕ ಕಾಲಕ್ಕೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮೊದಲು ಈ ಚಿತ್ರ ಮಾಡೋದು ತುಂಬ ದೊಡ್ಡ ಪ್ರೋಸೆಸ್ ಅಲ್ಲ ಅಂಥ ಅಂದುಕೊಂಡಿದ್ದೆವು. ಆದ್ರೆ ಈಗ ಅದು ಎಷ್ಟು ದೊಡ್ಡ ಪ್ರೋಸಸ್ ಅಂತ ಗೊತ್ತಾಗುತ್ತಿದೆ. ನಮ್ಮ ಗಡಿಯನ್ನು ದಾಟಿ ಹೋಗಿ ಸಿನಿಮಾ ಮಾಡೋದು ಸಣ್ಣ ಮಾತಲ್ಲ. ಮೂರು ವರ್ಷದ ಕೆಲಸ ನಿಮಗೆ ಇಷ್ಟವಾಗುತ್ತದೆ ಅನ್ನೋ ನಂಬಿಕೆ ಇದೆ’ ಎಂದಿದ್ದಾರೆ.

ಅಂದಹಾಗೆ, “ಅವನೇ ಶ್ರೀಮನ್ನಾರಾಯಣ’ ಚಿತ್ರ ಬರೋಬ್ಬರಿ 200 ದಿನ ಚಿತ್ರೀಕರಣ ಮಾಡಿದೆ. 200 ದಿನ ಚಿತ್ರೀಕರಣ ಮಾಡಿದ ಮೊದಲ ಚಿತ್ರ ಎಂಬ ಮಾತೂ ಇದೆ. ಎಲ್ಲಾ ಓಕೆ, ಇಷ್ಟೊಂದು ಚಿತ್ರೀಕರಣ ಮಾಡಲು ಕಾರಣವೇನು ಎಂದರೆ ಚಿತ್ರದ ಗುಣಮಟ್ಟ ಎಂಬ ಉತ್ತರ ರಕ್ಷಿತ್‍ರಿಂದ ಬರುತ್ತದೆ. “ನಾವು ಕೆಲವೇ ಕೆಲವು ದೃಶ್ಯಗಳನ್ನಷ್ಟೇ ಫೋಕಸ್ ಮಾಡಿ, ಅದನ್ನಷ್ಟೇ ಚೆನ್ನಾಗಿ ತೆಗೆದಿಲ್ಲ. ಪ್ರತಿ ಫ್ರ್ಪೆಮ್ ಬಗ್ಗೆಯೂ ಗಮನಹರಿಸಿದ್ದೆವೆ. “ಕಿರಿಕ್ ಪಾರ್ಟಿ’ಯಲ್ಲಿ ಒಂದು ದಿನಕ್ಕೆ ಎರಡ್ಮೂರು ಸೀನ್ ತೆಗೆದರೆ, ಇಲ್ಲಿ ಒಂದೊಂದು ಸೀನ್ ಶೂಟ್‍ಗೆ ಮೂರ್‍ನಾಲ್ಕು ದಿನ ಬೇಕಾಗಿತ್ತು. ಒಂದು ದಿನಕ್ಕೆ 8-9 ಶಾಟ್ಸ್ ಅಷ್ಟೇ ತೆಗೆಯುತ್ತಿದ್ದೆವು. ಮೊದಲ ಬಾರಿಗೆ ದೊಡ್ಡ ಸೆಟ್ ಹಾಕಿ. ಎಲ್ಲವೂ ನಮಗೆ ಹೊಸ ಅನುಭವ’ ಎನ್ನುವರು.

ಶಾನ್ವಿ ಶ್ರೀವಾತ್ಸವ ನಾಯಕಿಯಾಗಿರುವ ಈ ಚಿತ್ರಕ್ಕೆ ಸಚಿನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಪುಷ್ಕರ್ ಫಿಲ್ಮ್ಸ ಹಾಗೂ ದೇವಿ ಎಂಟರ್‍ಟೈನರ್ಸ್ ಬ್ಯಾನರ್‍ನಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಹೆಚ್.ಕೆ. ಪ್ರಕಾಶ್ ಅವರುಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ಸಂಗೀತ, ಕರಮ್ ಚಾವ್ಲಾ ಛಾಯಾಗ್ರಹಣ, ಸಚೀನ್ ಸಂಕಲನ, ವಿಕ್ರಮ್ ಸಾಹಸವಿದೆ. ತಾರಾಗಣದಲ್ಲಿ ಬಾಲಾಜಿ ಮನೋಹರ್, ಅಚ್ಚುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಧುಸೂದನ್ ರಾವ್ ಮುಂತಾದವರಿದ್ದಾರೆ.

ಸಿನಿಮಾ ವಿತರಣೆ ಆರಂಭಿಸಿದ ಪುಷ್ಕರ್
‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ನಿರ್ಮಾಪಕರಾಗಿ ಗಾಂಧಿನಗರಕ್ಕೆ ಬಂದ ಪುಷ್ಕರ್ ಮಲ್ಲಿಕಾರ್ಜುನಯ್ಯ ನಂತರ ‘ಕಿರಿಕ್ ಪಾರ್ಟಿ’ ಸಿನಿಮಾವನ್ನು ಖರೀದಿ ಮಾಡಿ ಜಯಣ್ಣ ಕಂಬೈನ್ಸ್ ಮೂಲಕ ರಿಲೀಸ್ ಮಾಡಿಸಿದರು. ಇದೀಗ ಪುಷ್ಕರ್ ನಿರ್ಮಾಪಕ ಕಮ್ ವಿತರಕರಾಗುತ್ತಿದ್ದು, ಅವರ ವಿತರಣಾ ಆಫೀಸನ್ನು ಗಾಂಧಿನಗರದಲ್ಲಿ ಆರಂಭಿಸಿದ್ದಾರೆ. ಇತ್ತೀಚೆಗೆ ನಟ ರಕ್ಷಿತ್ ಶೆಟ್ಟಿ ಈ ಹೊಸ ಕಛೇರಿಯನ್ನು ಉದ್ಘಾಟನೆ ಮಾಡಿದರು. ಆರ್ಕಿಟೆಕ್ ಉಲ್ಲಾಸ್ ಅವರು ರೂಪಿಸಿರುವ ಈ ಕಛೇರಿಯ ವಿನ್ಯಾಸವನ್ನು ಬಂದಿದ್ದ ಗಣ್ಯರು ಮೆಚ್ಚಿಕೊಂಡಿದ್ದಾರೆ. ನಟರಾದ ನಿಖಿಲ್ ಕುಮಾರ್ ಶರಣ್, ವಿನಯ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ನಿರ್ದೇಶಕ ಹೇಮಂತ್ ರಾವ್, ಸಿಂಪಲ್ ಸುನಿ, ವಿತರಕ ಜಯಣ್ಣ, ನಟಿ ಆಶಿಕಾ ರಂಘನಾಥ್ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿ ಶುಭ ಕೋರಿದರು. ಸದ್ಯ ಅವರ ನಿರ್ಮಾಣದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಈ ಸಂಸ್ಥೆಯಿಂದ ವಿತರಣೆಯಾಗುವ ಮೊದಲ ಚಿತ್ರವಾಗಲಿದೆ.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.