ಉದ್ಯಾನವನ ನಿರ್ಮಾಣಕ್ಕೆ ಬುಡಾ ಅಧ್ಯಕ್ಷರ ಸೂಚನೆ

Share on facebook
Share on twitter
Share on linkedin
Share on whatsapp
Share on email


ಬಳ್ಳಾರಿ: ನಗರದ ಅಲ್ಲಿಪುರ ಬಳಿರುವ 30ನೇ ವಾರ್ಡಿನ ರಾಮೇಶ್ವರ ನಗರದ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದ ಪ್ಲಾಟ್ ನಂ-273ರಲ್ಲಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸದರಿ ಸ್ಥಳದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸೂಚಿಸಿದ್ದಾರೆ.


    ಅಕ್ರಮ ಒತ್ತುವರಿಗೆ ಸಂಬAಧಿಸಿದAತೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಮಹೇಶ್ ಅಗರ್ ವಾಲ್ ಹಾಗೂ ವೆಂಕಟೇಶ್ ದೇವಸ್ಥಾನದ ಆಡಳಿತ ಮಂಡಳಿ ಅವರಿಂದ 25*15 ಚದರಡಿ ಸ್ಥಳದಲ್ಲಿ ಬುನಾದಿ ಹಾಕಿ ವೇದಿಕೆ ಹಾಗೂ ಶೆಡ್ ನಿರ್ಮಾಣ ಮಾಡಲಾಗಿರುವುದನ್ನು ತೆರವುಗೊಳಿಸಿ ಈ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ಅಗತ್ಯಕ್ರಮ ಜರುಗಿಸುವಂತೆ ಬುಡಾ ಎಂಜನಿಯರ್ ರವಿಶಂಕರ್ ಮತ್ತು ಮಹಾನಗರ ಪಾಲಿಕೆ ಎಂಜನಿಯರ್ ವಿರೇಶ್ ಅವರಿಗೆ ಸೂಚಿಸಿದರು.


       ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಬುಡಾ ಸಿಬ್ಬಂದಿ ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter