ನ್ಯೂಜಿಲೆಂಡ್ ನಲ್ಲಿ ದಾಖಲಾಗದ ಹೊಸ ಕರೋನ ಪ್ರಕರಣ

Share on facebook
Share on twitter
Share on linkedin
Share on whatsapp
Share on email

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ಶನಿವಾರ ಯಾವುದೇ ಹೊಸ ಕರೋನ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಇದರರ್ಥ ನ್ಯೂಜಿಲೆಂಡ್‌ನ ಒಟ್ಟು ದೃಡಪಡಿಸಿದ ಮತ್ತು ಸಂಭವನೀಯ ಪ್ರಕರಣಗಳ ಸಂಖ್ಯೆ 1,504 ರಷ್ಟಿದೆ, ಅದರಲ್ಲಿ 1,154 ಪ್ರಕರಣಗಳು ದೃಡಪಟ್ಟಿದೆ ಎಂದು ಹೇಳಲಾಗಿದೆ. ನ್ಯೂಜಿಲೆಂಡ್ ನಲ್ಲಿ ಪ್ರಸ್ತುತ ಈವರೆಗೆ 1,455 ಜನರು ಕರೋನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಒಬ್ಬ ವ್ಯಕ್ತಿ ಮಾತ್ರ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದಾನೆ ಮತ್ತು ಐಸಿಯುನಲ್ಲಿಲ್ಲ. ದೇಶದಲ್ಲಿ ಸಾವಿನ ಸಂಖ್ಯೆ 21 ರಷ್ಟಿದೆಇಲ್ಲಿಯವರೆಗೆ ಪೂರ್ಣಗೊಂಡ ಪರೀಕ್ಷೆಗಳ ಸಂಖ್ಯೆ 255,850, ಇದು ಹಿಂದಿಗಿಂತ ಇದು 5,604 ಹೆಚ್ಚಳವಾಗಿದೆ.
ಕರೋನ ಪ್ರಕರಣಗಳನ್ನು ಗುರುತಿಸಲು, ಪತ್ತೆಹಚ್ಚಲು, ಪರೀಕ್ಷಿಸಲು ಮತ್ತು ಪ್ರತ್ಯೇಕಿಸಲು ಸಹಾಯ ಮಾಡುವ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬುಧವಾರ ಪ್ರಾರಂಭಿಸಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *