ಪ್ರಕೃತಿ ವಿಕೋಪ: ಭಾರತದಲ್ಲಿ ಕಳೆದ ವರ್ಷ 5 ದಶಲಕ್ಷ ಮಂದಿ ಸ್ಥಳಾಂತರ

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಅಂಫಾನ್ ಚಂಡಮಾರುತದಿಂದಾಗಿ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ಜನರ ಸ್ಥಳಾಂತರವಾಗಿದೆ.
ಈ ವರದಿಗಳ ಮಧ್ಯೆ, ನೈಸರ್ಗಿಕ ವಿಪತ್ತುಗಳು, ಸಂಘರ್ಷ ಮತ್ತು ಹಿಂಸಾಚಾರದಿಂದಾಗಿ 2019 ರಲ್ಲಿ ಭಾರತದಲ್ಲಿ 5 ದಶಲಕ್ಷಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಈ ಅಂಕಿ ಅಂಶವು ವಿಶ್ವದಲ್ಲೇ ಅತಿ ಹೆಚ್ಚು ಆಂತರಿಕ ಸ್ಥಳಾಂತರಗಳನ್ನು ಹೊಂದಿದೆ. ಭಾರತದ ನಂತರ ಫಿಲಿಪೈನ್ಸ್, ಬಾಂಗ್ಲಾದೇಶ ಮತ್ತು ಚೀನಾ ದೇಶಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಯುಎನ್ ಚಿಲ್ಡ್ರನ್ಸ್ ಫಂಡ್ –ಯುನಿಸೆಫ್ ನ ವರದಿ ‘ಲಾಸ್ಟ್ ಅಟ್ ಹೋಮ್’ 2019 ರಲ್ಲಿ ಸುಮಾರು 33 ಮಿಲಿಯನ್ ಹೊಸ ಸ್ಥಳಾಂತರಗಳನ್ನು ವಿಶ್ವದಾದ್ಯಂತ ದಾಖಲಿಸಲಾಗಿದೆ ಎಂದು ಹೇಳಿದೆ.

ಈ ಪೈಕಿ ಸುಮಾರು 25 ದಶಲಕ್ಷ ಜನರು ನೈಸರ್ಗಿಕ ವಿಪತ್ತಿನಿಂದ, 8.5 ದಶಲಕ್ಷ ಮಂದಿ ಸಂಘರ್ಷ ಮತ್ತು ಹಿಂಸಾಚಾರದ ಪರಿಣಾಮದಿಂದಾಗಿ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *