ರಾಜ್ಯದಲ್ಲಿ ಒಂದೇ ದಿನ 216 ಕೊರೋನ ಪ್ರಕರಣಗಳು

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದ್ದು 2 ಸಾವಿರದ ಗಡಿ ದಾಟಿದೆ. ಶನಿವಾರ 24 ಗಂಟೆಗಳಲ್ಲಿ ಒಟ್ಟು 216 ಜನರಲ್ಲಿ ಸೊಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೇರಿಕೆಯಾಗಿದೆ.

ಬೆಂಗಳೂರು ನಿವಾಸಿಯಾಗಿದ್ದ 32 ವರ್ಷದ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಮೇ 19ರಂದು ಉಸಿರಾಟದ ತೊಂದರೆಯಿಂದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ದೀರ್ಘಕಾಲೀನ ಕ್ಷಯದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇವರು ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೋನದಿಂದ ಮೃತಪಟ್ಟ ಅತಿ ಕಿರಿಯ ರೋಗಿಯಾಗಿದ್ದಾರೆ. ಇದರಿಂದ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 43 ಕ್ಕೆ ಏರಿಕೆಯಾಗಿದೆ.

ಯಾದಗಿರಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 72 ಪ್ರಕರಣಗಳು ಪತ್ತೆಯಾಗಿವೆ.ಗದಗದಲ್ಲಿ 15 ಮಂದಿಗೆ ಸೋಂಕು ತಗುಲಿದೆ, ರಾಯಚೂರಿನಲ್ಲಿ 40 ಪ್ರಕರಣಗಳು ವರದಿಯಾಗಿವೆ.

ಚಿಕ್ಕಬಳ್ಳಾಪುರದಲ್ಲಿ 26, ಮಂಡ್ಯದಲ್ಲಿ 28, ಬೆಂಗಳೂರಿನಲ್ಲಿ 4, ಕಲಬುರಗಿಯಲ್ಲಿ 1, ಬೆಳಗಾವಿಯಲ್ಲಿ 1, ದಾವಣಗೆರೆಯಲ್ಲಿ 3, ಯಾದಗಿರಿಯಲ್ಲಿ 72, ಗದಗದಲ್ಲಿ 15, ಉತ್ತರ ಕನ್ನಡದಲ್ಲಿ 2, ಹಾಸನದಲ್ಲಿ 4, ಬೀದರ್ ನಲ್ಲಿ 3, ದಕ್ಷಿಣ ಕನ್ನಡದಲ್ಲಿ 3, ಧಾರವಾಡದಲ್ಲಿ 5. ಬಳ್ಳಾರಿಯಲ್ಲಿ 3, ಕೋಲಾರದಲ್ಲಿ 3 ಪ್ರಕರಣಗಳು ದೃಢಪಟ್ಟಿವೆ.

ಈ ಪೈಕಿ 200ಕ್ಕೂ ಸೋಂಕಿತರಿಗೆ ಮುಂಬೈ ನಂಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter