ಕಾರ್ಮಿಕರು 8 ಗಂಟೆ ಬದಲು 10 ಗಂಟೆ ದುಡಿಮೆ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದ ಕೈಗಾರಿಕಾ ಉತ್ಪಾದನೆ, ವಿತರಣೆ ಹಾಗೂ ಕಾರ್ಮಿಕರ ಕೊರೆತೆಯನ್ನು ನೀಗಿಸುವ ಸಲುವಾಗಿ ಕಾರ್ಮಿಕರನ್ನು ಕಾರ್ಖಾನೆಗಳಲ್ಲಿ 8 ಗಂಟೆ ಬದಲಿಗೆ 10 ಗಂಟೆ ದುಡಿಸಿಕೊಳ್ಳಲು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಕಳೆದ ಎರಡು ತಿಂಗಳಿನಿಂದ ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಕಾರ್ಖಾನೆಗಳು ಮುಚ್ಚಲ್ಪ ಟ್ಟಿದ್ದು ಉತ್ಪಾದನಾ ವಲಯ ಬಹುತೇಕ ಸ್ಥಗಿತವಾಗಿದೆ. ಹೀಗಾಗಿ ಲಾಕ್‌ಡೌನ್ ಅವಧಿ ಮುಗಿದ ನಂತರ ಕಾರ್ಮಿ ಕರನ್ನು 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.ಅದರಂತೆ ಮಹಾರಾಷ್ಟ್ರ ,ಉತ್ತರ ಪ್ರದೇಶ,ಮಧ್ಯ ಪ್ರದೇಶ, ಪಂಜಾಬ್ ರಾಜ್ಯಗಳು ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿವೆ.ಅಂತೆಯೇ ಕರ್ನಾಟಕ ಸರ್ಕಾರವೂ ಅದೇ ನೀತಿ ಯನ್ನು ಅನುಸರಿಸಿದೆ.ಆದರೆ ಹೊರ ರಾಜ್ಯಗಳಲ್ಲಿ 12 ಗಂಟೆ ಕೆಲಸಅವಧಿ ಇದ್ದರೆ ರಾಜ್ಯದಲ್ಲಿ 10 ಗಂಟೆಗಳು ಕಾರ್ಮಿಕರು ದುಡಿದು 8 ಗಂಟೆಗಳ ವೇತನ ಪಡೆಯು ವಂತೆ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಕೈಗಾರಿಕಾ ಅಧಿನಿಯಮ 1948 ಅಡಿಯಲ್ಲಿ ಆದೇಶ ಹೊರಡಿಸಲಾಗಿದ್ದು, ಸಮಯ ಬದಲಾವಣೆಯ ನ್ನ ಇಂದಿನಿಂದ ಆಗಸ್ಟ್ ವರೆಗೂ ಮುಂದುವರಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ. ಇದಲ್ಲದೆ, ಕೆಲ‌ ಷರತ್ತುಗಳನ್ನೂ ವಿಧಿಸಿರುವ ರಾಜ್ಯ ಸರ್ಕಾರ 10 ಗಂಟೆ ಕೆಲಸ ಮಾಡುವವರಿಗೆ ಆಯಾ ಕಂಪನಿಗಳು ಹೆಚ್ಚುವರಿ ಸಂಬಳವನ್ನೂ ನೀಡಬೇಕು ಎಂದು ಆದೇಶಿಸಲಾಗಿದೆ.


ಹೊರ ರಾಜ್ಯಗಳಲ್ಲಿ ಇರುವಂತೆ ರಾಜ್ಯದಲ್ಲಿಯೂ ಕೈಗಾರಿಕಾ ಸ್ನೇಹಿ ಹಾಗೂ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿ ನಲ್ಲಿ ಮಧ್ಯಪ್ರದೇಶ ಸರ್ಕಾರಿ ಜಾರಿಗೆ ತಂದಿರುವ ಕಾರ್ಮಿಕ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿತ್ತು.ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ವಿರೋಧದಿಂದಾಗಿ ಅಧ್ಯಾದೇಶ ಹೊರಡಿಸದೆ ಅಧಿಸೂಚನೆ ಮೂಲಕ ಕಾರ್ಮಿಕರಿಗೆ ರಾಜ್ಯ ಸರ್ಕಾರ ಹೊಡೆತ ನೀಡಿದೆ.

ಸರ್ಕಾರ ಆದೇಶ ಹೊರಡಿಸುವ ಮುನ್ನ ವಿವಿಧ ಕಾರ್ಮಿಕ ಸಂಘಟನೆಗಳು,ಹಾಗೂ ಕೈಗಾರಿಕೆಗಳ ಸಂಘಟನೆ, ಮಾಲೀಕರ ಜೊತೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದರು.ಆದರೂ ಯಾವುದೇ ಕಾರ್ಮಿಕ ಸಂಘಟನೆಗಳು ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿರಲಿಲ್ಲ.ಆದರೂ ಕೈಗಾರಿಕೆ ಉಳಿಸಲು ಹಾಗೂ ಕಾರ್ಮಿಕರನ್ನು ರಕ್ಷಿಸುವ ದೃಷ್ಟಿಯಿಂದ ಅಧಿಸೂಚನೆ ಹೊರಡಿಸಲಾಗಿದೆ.ಕೈಗಾರಿಕೆಗಳು ಉಳಿದರೆ ಕಾರ್ಮಿಕರು ಉಳಿಯುತ್ತಾರೆ. ಕೈಗಾರಿಕೆ ಗಳಿಲ್ಲದಿದ್ದಲ್ಲಿ ಕಾರ್ಮಿಕರು ಬದುಕ ಅಂತಂತ್ರವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ಕನಿಷ್ಟ 6 ತಿಂಗಳು ಕಾಯ್ದೆ ಜಾರಿಗೆ ತಂದಿದ್ದಾರೆ.ಆದರೆ ಕರ್ನಾಟಕದಲ್ಲಿ ಕಾರ್ಮಿಕರು ಹಾಗೂ ಕೈಗಾರಿಕೆಗಳ ಹಿತ ದೃಷ್ಠಿಯಿಂದ ಕೇವಲ ಮೂರು ತಿಂಗಳ ಅವಧಿಗೆ ಈ ತೀರ್ಮಾನ ಕೈಗೊಳ್ಳಲಾಗಿದೆ.ಈ ಬಗ್ಗೆ ಸಚಿವ ಸಂಪುಟದಲ್ಲಿ ಸುಧೀರ್ಘವಾಗಿ ಚೆರ್ಚಿಸಿ ಆದಷ್ಟು ಶೀಘ್ರದಲ್ಲಿ ಕಾಯ್ದೆಗೆ ಸುಗ್ರೀವಾಜ್ಞೆ ತರುವುದಾಗು ಸಚಿವರು ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *