ತುಂಗಭದ್ರಾ ಜಲಾಶಯದಿಂದ ಮತ್ತೆ ನದಿಗೆ ನೀರು ಬಿಡುಗಡೆ ; ಹಂಪಿ ಸ್ಮಾರಕ ಜಾಲವೃತ: ಬೋಟ್ ಸಂಚಾರ ಸ್ಥಗಿತ

Share on facebook
Share on twitter
Share on linkedin
Share on whatsapp
Share on email


ಹೊಸಪೇಟೆ:ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ಒಳಹರಿವು ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದ್ದು, ಜಲಾಶಯದಿಂದ 33 ಕ್ರಷ್ಟ್ ಗೇಟ್‍ಗಳಿಂದ 1.55ಲಕ್ಷ ಕ್ಯೂಸೆಕ್ಸ್‍ಗೂ ಆಧಿಕ ನೀರನ್ನು ಮಂಗಳವಾರ ನದಿಗೆ ಹರಿಬಿಡಲಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಆಧಿಕ ಮಳೆಗೆ ಪರಿಣಾಮ ಜಲಾಶಯಕ್ಕೆ ಹರಿದು ಬರುವ ಒಳ ಹರಿವಿನ ಪ್ರಮಾಣದಲ್ಲಿ ದ್ವಿಗುಣಗೊಂಡಿದೆ. ಪ್ರಸ್ತುತ 1.55ಲಕ್ಷ ಕ್ಯೂಸೆಕ್ಸ್‍ಗೂ ಆಧಿಕ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಅಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಳೆದ ಆಗಷ್ಟ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿತ್ತು. ಆಗ ಹಂಪಿ ಸ್ಮಾರಕ ಹಾಗೂ ವಿರೂಪುರಗಡ್ಡೆ ಪ್ರದೇಶ ಜಲಾವೃತವಾಗಿತ್ತು. ಇದೀಗ ಮತ್ತೆ ನದಿಗೆ ನೀರು ಹರಿಸುತ್ತಿರುವು ಪರಿಣಾಮ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

ನೀರಿನ ಮಟ್ಟ:ಜಲಾಶಯದ ಗರಿಷ್ಟ ಮಟ್ಟ 1633 ಅಡಿ, 1632.95, ಸಾಮಾರ್ಥ್ಯ 100.663 ಟಿಎಂಸಿ, ಒಳ ಹರಿವು 155431 ಕ್ಯೂಸೆಕ್ಸ್ ಇದೆ. 145943 ಕ್ಯೂಸೆಕ್ಸ್ ನದಿಗೆ ಹಾಗೂ 9308 ಕ್ಯೂಸೆಕ್ಸ್ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ.
ಕಳೆದ ವರ್ಷ: ಈ ದಿನಾಂಕದಲ್ಲಿ 1625.85. ಸಾಮಾರ್ಥ್ಯ 75.633 ಟಿಎಂಸಿ, ಒಳಹರಿವು 15606 ಕ್ಯೂಸೆಕ್, ಹೊರಹರಿವು 8857 ಕ್ಯೂಸೆಕ್ಸ್ ದಾಖಲಾಗಿತ್ತು.

10 ವರ್ಷದ ಹಿಂದೆ: ಈ ದಿನಾಂಕದಲ್ಲಿ ಸಾಮಾರ್ಥ್ಯ 83.905 ಟಿಎಂಸಿ, ಒಳ ಹರಿವು 14270 ಕ್ಯೂಸೆಕ್ಸ್ ಇತ್ತು. ಕಳೆದ 10 ವರ್ಷದ ಅವಧಿಯಲ್ಲಿ ಜಲಾಶಯಕ್ಕೆ ಹರಿದು ಬರುವ ಒಳ ಹರಿವು ವಾಡಿಕೆಗಿಂತಲೂ ಆಧಿಕವಾಗಿದೆ.
ಹಂಪಿಯಲ್ಲಿ ಪ್ರವಾಹ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಐತಿಹಾಸಿಕ ಹಂಪಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಪ್ರವಾಹ ಉಂಟಾದ ಹಿನ್ನಲೆಯಲ್ಲಿ ನದಿ ತಟದ ಐತಿಹಾಸಿಕ ಸ್ಮಾರಕಗಳಾದ ವೈದಿಕ ಮಂಟಪ, ಸ್ನಾನಘಟ್ಟ, ಪುರದಂರದಾಸರ ಮಂಟಪ, ಕೋಟಿಲಿಂಗ ಸೇರಿದಂತೆ ಅನೇಕ ಸ್ಮಾರಕಗಳು, ಜಲಾವೃತವಾಗಿವೆ. ಚಕ್ರತೀರ್ಥ ಕೋದಂಡರಾಮಸ್ವಾಮಿ, ಯಂತ್ರೊದ್ಧಾರಕ ಆಂಜನೇಯ ಹಾಗೂ ಅಚ್ಯುತ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗ ಜಲಾವೃತವಾಗಿದ್ದು, ಸಂಪರ್ಕ ಕಡಿತವಾಗಿದೆ. ನದಿಯ ಪ್ರವಾಹ ಹೆಚ್ಚಾಗುತ್ತಿದಂತೇ, ನದಿ ಮೂಲಕ ಪ್ರವಾಸಿಗರನ್ನು ಪಕ್ಕದ ವಿರೂಪಾಪುರ ಗಡ್ಡೆಗೆ ಕರೆದೊಯ್ಯುವ ಬೋಟ್‍ಗಳ ಸಂಚಾರ ಸ್ಥಗಿತಗೊಂಡಿದೆ. ಯಾತ್ರಾರ್ಥಿಗಳು ನದಿಯ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಸ್ಥಳದಲ್ಲಿ ಸೂಕ್ತ ಪೆÇಲೀಸ್ ಹಾಗೂ ಹೋಮ್‍ಗಾರ್ಡ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ನದಿಯ ನೀರು ಹೆಚ್ಚಾಗುತ್ತಿದ್ದಂತೇ, ನದಿದಡ ಬಾಳೆ ಹಾಗೂ ಕಬ್ಬಿನ ಬಾಳೆ ತೋಟಗಳಿಗೆ ನೀರು ನುಗ್ಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter