ಬಳ್ಳಾರಿ: ನಗರದಲ್ಲಿ ಅನೇಕ ವರ್ಷಗಳಿಂದ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳಾದ ಹೋಮ ಹವನಾದಿಗಳನ್ನು ನಡೆಸಿಕೊಂಡು ಬರುತ್ತಿದ್ದು, ಅನೇಕ ಸಂದರ್ಭದಲ್ಲಿ ವಿವಿಧ ಪ್ರದೇಶಗಳಿಂದ ಆಗಮಿಸುವ ಸಮಾಜದ ಭಾಂದವರಿಗೆ ಶಾಶ್ವತವಾದ ಕಚೇರಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸಿಎ ದಲ್ಲಿ ನಿವೇಶನವನ್ನು ನೀಡುವಂತೆ ಜಿಲ್ಲಾ ವೀರಶೈವ ಜಂಗಮ, ಅರ್ಚಕರ ಮತ್ತು ಪುರೋಹಿತರ ಸಂಘದ ಪದಾಧಿಕಾರಿಗಳು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ಬುಡಾ ಅಧ್ಯಕ್ಷ ದಮ್ಮೂರು ಅವರು ಈಗಾಗಲೇ ಸಿಎ ನಿವೇಶನಕ್ಕಾಗಿ ಬುಡಾದಿಂದ ಅರ್ಜಿ ಕರೆಯಲಾಗಿದ್ದು, ಸರ್ಕಾರದ ಮಾರ್ಗಸೂಚಿ, ಕಾನೂನು ರೀತ್ಯದಲ್ಲಿ ಸಿಎ ನಿವೇಶನವನ್ನು ಮಂಜೂರು ಮಾಡಲು ಕ್ರಮವಹಿಸಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

