ನಂದಿನಿ ಶುಭಂ ಹಾಲು ಪೌಚ್ ಬದಲಾವಣೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ : ದೇಶದ್ಯಾಂತ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಂದಿನಿ ಶುಭಂ 500 ಎಂ.ಎಲ್. ಹಾಲಿನ ಪಾಲಿಥೀನ್ ಫಿಲಂ (ಪೌಚ್ ಫಿಲಂ) ದಾಸ್ತಾನು ಖಾಲಿಯಾಗಿರುವುದರಿಂದ ತಾತ್ಕಾಲಿಕವಾಗಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಪಾಲಿಥೀನ್ ಪೌಚ್‍ನಲ್ಲಿ ನಂದಿನಿ ಶುಭಂ 500 ಎಂಎಲ್ ಹಾಲಿನ ಪ್ಯಾಕಿಂಗ್ ಮಾಡಲಾಗುತ್ತಿದೆ ಎಂದು ರಾಬಕೊಹಾಒ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಏ.24 ರಿಂದ ತಾತ್ಕಾಲಿಕ ಅವಧಿಗೆ ಒಕ್ಕೂಟದ ಪಾಲಿಥೀನ್ ಫಿಲಂ ದಾಸ್ತಾನು ಬರುವವರೆಗೆ ನಂದಿನಿ ಶುಭಂ 500 ಎಂಎಲ್ ಹಾಲಿನ ಪ್ಯಾಕಿಂಗ್‍ನ್ನು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಪಾಲಿಥೀನ್ ಪೌಚ್‍ನಲ್ಲಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಹಾಲಿನ ಪ್ಯಾಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಪ್ರಯುಕ್ತ ಎಲ್ಲಾ ನಂದಿನಿ ಅಧಿಕೃತ ಡೀಲರ್‍ಗಳು ಹಾಗೂ ಗ್ರಾಹಕರು ಒಕ್ಕೂಟಕ್ಕೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter