ವಲಸೆ ಗ್ರೀನ್ ಕಾರ್ಡ್ ತಡೆಗೆ ನಿರ್ಧಾರ

Share on facebook
Share on twitter
Share on linkedin
Share on whatsapp
Share on email

ವಾಷಿಂಗ್ಟನ್: ಗ್ರೀನ್ ಕಾರ್ಡ್ ಹೊಂದಿರುವವರ ವಲಸೆಯನ್ನು 60 ದಿನಗಳವರೆಗೆ ತಡೆಯಲಾಗುವುದು ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಲಸೆರಹಿತ ವೀಸಾ ಹೊಂದಿರುವ ಕಾರ್ಮಿಕರಿಗೆ ಪ್ರವೇಶಕ್ಕೆ ಅವಕಾಶ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಶ್ವೇತಭವನದ ಈ ಕ್ರಮ ಕರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕದ ಉದ್ಯೋಗಗಳನ್ನು ಕಾಪಾಡಲಿದೆ ಎಂದು ಟ್ರಂಪ್‍ ಟ್ವೀಟ್‌ನಲ್ಲಿ ಹೇಳಿದ್ದಾರೆ.
‘ಅಮೆರಿಕಕ್ಕೆ ವಲಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.’ಎಂದು ಕರೋನವೈರಸ್ ಉಲ್ಬಣ ಮತ್ತು ಉದ್ಯೋಗಗಳ ಕೊರತೆಯನ್ನು ಉಲ್ಲೇಖಿಸಿ ಟ್ರಂಪ್ ಶ್ವೇತಭವನದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರ್ಕಾರದ ಈ ಕ್ರಮದಿಂದ ನಿರುದ್ಯೋಗಿ ಅಮೆರಿಕನ್ನರಿಗೆ ಮೊದಲು ಉದ್ಯೋಗ ದೊರಕಲು ಸಹಾಯವಾಗಲಿದೆ. ಅಮೆರಿಕನ್ನರ ಜಾಗಗಳಿಗೆ ವಿದೇಶದಿಂದ ಬಂದ ವಲಸೆ ಕಾರ್ಮಿಕರನ್ನು ನೇಮಿಸುವುದು ತಪ್ಪಾಗುತ್ತದೆ ಎಂದು ಟ್ರಂಪ್‍ ಹೇಳಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.

ಅಮೆರಿಕದಲ್ಲಿ ಶಾಶ್ವತ ನೆಲೆ ಬಯಸುವ ಜನರಿಗೆ ಈ ಆದೇಶವು ಅನ್ವಯಿಸುತ್ತದೆ. ಆದರೆ ವಲಸೆ ಕೃಷಿ ಕಾರ್ಮಿಕರಿಗೆ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಕುರಿತ ಆದೇಶಕ್ಕೆ ಬುಧವಾರ ಸಹಿ ಮಾಡುವುದಾಗಿ ಟ್ರಂಪ್ ಹೇಳಿದ್ದು, 60 ದಿನಗಳ ಅವಧಿ ನಂತರ ಆದೇಶವನ್ನು ಪರಿಶೀಲಿಸಿ ನವೀಕರಿಸಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧರಿಸುವುದಾಗಿ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter