ಜಮೀರ್ ಅಹಮ್ಮದ್ ಗೂ ಕ್ವಾರಂಟೈನ್

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ: ಕೋವಿಡ್ 19 ಸೋಂಕು ನಿಯಂತ್ರಣ ವಿಚಾರದಲ್ಲಿ ಸಹಕಾರ ನೀಡದೇ ದುರ್ವರ್ತನೆ ತೋರಿರುವ ಹಾಗೂ ಶೋಂಕಿತ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅವರನ್ನು ಶೀಘ್ರ ಕ್ವಾರೆಂಟೈನ್ ಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಮಾರ್ಗ ಸೂಚಿ ಪ್ರಕಾರ ಜಮೀರ್ ಅವರನ್ನು ಕ್ವಾರಂಟೈನ್ ಗೆ ಒಳಪಡಿಸುವ ಅಗತ್ಯವಿದ್ದು, ಈ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದಿದ್ದಾರೆ.

ನಗರದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೊರೋನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಜಾತಿ, ಧರ್ಮ, ಬಡವರು, ಶ್ರೀಮಂತರು ಎಂಬ ಯಾವುದೇ ತಾರತಮ್ಯವಿಲ್ಲ. ಸೋಂಕು ನಿಯಂತ್ರಣವೇ ಎಲ್ಲರ ಗುರಿಯಾಗಬೇಕು. ಇಂತಹ ಸಂದರ್ಭದಲ್ಲಿ ಶಾಸಕ ಜಮೀರ್ ಅವರು ಪಾದರಾಯನಪುರದಲ್ಲಿ ಗಲಾಟೆ ಮಾಡಿದವರ ಪರವಾಗಿ ಮಾತನಾಡಿದ್ದು ಸರಿಯಲ್ಲ ಎಂದರು.

ಕೊರೋನಾ ವಾರಿಯರ್ಸ್ ಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಿರುವಾಗ ಇಂತಹ ವೀರ ಸೇನಾನಿಗಳ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ. ಮೊದಲು ವಾರಿಯರ್ಸ್ ಗಳು ಸೋಂಕಿತರನ್ನು ಕ್ವಾರೆಂಟೈನ್ ಗೆ ಒಳಪಡಿಸಲು ಹಗಲು ವೇಳೆ ಬರಬೇಕು ಎಂದು ಹೇಳಿದ್ದು ಸಹ ತಪ್ಪು ಎಂದು ಶ್ರೀರಾಮಲು ಹೇಳಿದರು.

ಏನೇ ಆಗಲಿ ದೇಶ ಅಷ್ಟೇ ಏಕೆ ಇಡೀ ವಿಶ್ವವೇ ಕೊರೋನಾ ಸಂಕಷ್ಟದಲ್ಲಿರುವಾಗ ಜಾತಿ ಧರ್ಮ ಮೀರಿ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಸರ್ಕಾರಕ್ಕೆ ಪ್ರತಿ‌ಯೊಬ್ಬ ಜನಪ್ರತಿ ನಿಧಿಗಳು, ಜನ ಸಾಮಾನ್ಯರು ಸಹಕಾರ ನೀಡಬೇಕು ಎಂದರು

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter