ಕಾಶ್ಮೀರದ ಮೂವರು ಪತ್ರಿಕಾ ಛಾಯಾಗ್ರಾಹಕರಿಗೆ ಪುಲಿಟ್ಜೆರ್ ಪ್ರಶಸ್ತಿ ಗರಿ

ಶ್ರೀನಗರ: ಕಾಶ್ಮೀರದ ಇಬ್ಬರು ಮತ್ತು ಜಮ್ಮುವಿನ ಒಬ್ಬ ಪತ್ರಿಕಾ ಛಾಯಾಗ್ರಾಹಕರು ಸೇರಿದಂತೆ ಒಟ್ಟು ಮೂವರು ಫೀಚರ್ ಫೋಟೋಗ್ರಫಿ ವಿಭಾಗದ 2020 ರ ಪುಲಿಟ್ಜೆರ್ ಪ್ರಶಸ್ತಿಗೆ ಭಾಜನರಾಗಿ ದೇಶದ…

ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ಕೊರೊನಾ ಸೊಂಕು ದೃಢ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಸೊಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ 14ಕ್ಕೇರಿದಂತಾಗಿದೆ.ಈಗಾಗಲೇ ಕೊರೊನಾದಿಂದ ಗುಣಮುಖರಾಗಿ 8 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 6ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನಗರದ ಕೌಲ್‍ಬಜಾರ್‍ನ ಪ್ರದೇಶದ 14, ನೆರೆಯ ಆಂಧ್ರದ ಅನಂತಪುರ ಜಿಲ್ಲೆಯ ಕಣೇಕಲ್ ಗ್ರಾಮದ 4 ಜನರು ಸೇರಿ ಒಟ್ಟು 18 ಜನರು ಕಳೆದ ಮಾರ್ಚ್ 16 ರಂದು ತೀರ್ಥ ಕ್ಷೇತ್ರಗಳಿಗೆ ಹೋಗಿದ್ದು, ಉತ್ತರಾಖಂಡ್ ರಾಜ್ಯದ ಲುಡಿಕಿಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದರು. ಎರಡು ದಿನಗಳ ಹಿಂದೆ ಉತ್ತರಾಖಂಡದ ಜಿಲ್ಲಾಧಿಕಾರಿಗಳ ಪಾಸ್ ಪಡೆದುಕೊಂಡು ನಗರಕ್ಕೆ ಬಂದಿದ್ದರು. ಇವರನ್ನು ತಪಾಸಣೆ ಮಾಡಿ, ಗಂಟಲು ಮತ್ತು ಮೂಗಿನ ದ್ರವ್ಯವವನ್ನು ಪಡೆದುಕೊಂಡು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಇವರಲ್ಲಿ ಕೌಲ್‍ಬಜಾರ್‍ನ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ವಿವರಿಸಿದ ಡಿಸಿ ನಕುಲ್ ಅವರು ಈಗಾಗಲೇ ಕೌಲ್‍ಬಜಾರ್ ಸುತ್ತಮುತ್ತಲಿನ 1 ಕಿ.ಮೀ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದ್ದು, ಆಶಾ-ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರ ಮೂಲಕ ಮನೆ-ಮನೆ ಸಮೀಕ್ಷೆ ಇಂದಿನಿಂದ ಆರಂಭಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಕೋವಿಡ್-19 ಸೋಂಕು ಪತ್ತೆಯಾದವರನ್ನು ಈಗಾಗಲೇ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಸೋಂಕಿತರ ಮಗಳು, ಅಳಿಯ ಸೇರಿ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 22 ಜನರನ್ನು ಸಹ ಸಾಂಸ್ಥಿಕ ಪ್ರತ್ಯೇಕವಾಸದಲ್ಲಿಡಲಾಗಿದೆ ಎಂದು ವಿವರಿಸಿದರು. ಅವರು ಉತ್ತರಾಖಂಡದಿಂದ ಬಂದ ನಂತರ ಬಳ್ಳಾರಿಯಲ್ಲಿ ತಿರುಗಾಡಿದ್ದಾನೆ ಎಂಬ ಮಾಹಿತಿ ಲಭ್ಯವಿದ್ದು,ಅವರ ಓಡಾಟದ ಮಾಹಿತಿ ಕಲೆ ಹಾಕಿ ಸಂಪರ್ಕ ಪಡೆದವರನ್ನು ಸಹ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದರು. ಅಂತರ್ ರಾಜ್ಯದಿಂದ ಬಂದರೆ ಕಡ್ಡಾಯ ಕ್ವಾರಂಟೈನ್: ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಬಂದರೂ ಅಂತಹವರನ್ನು 14 ದಿನಗಳ ಕಾಲ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿ ಇಡುವುದು ಕಡ್ಡಾಯ. ಒಂದು ವೇಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಗೆ ಬರುವವರು ಅಲ್ಲಿನ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಆಂಬ್ಯುಲೆನ್ಸ್ ನಲ್ಲಿ ಮಾತ್ರ ಬರುವವರಿಗೆ ಅವಕಾಶ ನೀಡಲಾಗುವುದು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಜಿಲ್ಲೆಗೆ ಬಂದರೆ ಅಂತಹವರನ್ನು 14 ದಿನಗಳ ಕಾಲ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿಡಲಾಗುವುದು ಎಂದು ಸ್ಪಷ್ಟಪಡಿಸಿದರು. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಮಾತನಾಡಿ, ನೆರೆ ರಾಜ್ಯದಿಂದ ಜನರು ನುಸುಳದಂತೆ ತೀವ್ರ ನಿಗಾ ವಹಿಸಲಾಗಿದ್ದು, ಮುಖ್ಯ ರಸ್ತೆ ಬಿಟ್ಟು,ಕಾಲುವೆ ದಾರಿ,ಹೊಲಗಲ ಮೂಲಕ ಬರುವವರ ಮೇಲೂ ಸಹ ಕಣ್ಣಿಡಲಾಗಿದೆ. ಆಂಧ್ರದೊಂದಿಗೆ ಗಡಿ ಸಂಪರ್ಕ ಹೊಂದಿರುವ ಸಂಡೂರು,ಬಳ್ಳಾರಿ ಮತ್ತು ಸಿರಗುಪ್ಪದ 65 ಹಳ್ಳಿಗಳಲ್ಲಿ ಪ್ರತಿನಿತ್ಯ ಮೂರು ಗಸ್ತುವಾಹನಗಳು ನಿರಂತರವಾಗಿ ಸಂಚರಿಸುತ್ತಿವೆ. ಜನರು ನುಸುಳದಂತೆ ನಿಗಾವಹಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ತಾಲೂಕಿಗೆ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಮಂಜುನಾಥ ಮತ್ತಿತರರು ಇದ್ದರು.

ಹಂತ ಹಂತವಾಗಿ ಶಿಬಿರ ಪುನರಾರಂಭಕ್ಕೆ ಸಚಿವಾಲಯ ಯೋಜನೆ: ರಿಜಿಜು

ನವದೆಹ: ಈ ತಿಂಗಳ ಕೊನೆಯಲ್ಲಿ ಹಂತ ಹಂತವಾಗಿ ರಾಷ್ಟ್ರೀಯ ಶಿಬಿರಗಳನ್ನು ಪುನಃ ತೆರೆಯಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭಾನುವಾರ ಹೇಳಿದ್ದಾರೆ. ಕೊರೊನಾ ಮತ್ತು…

ಧೋನಿಯಂತೆ ಯುವಕರಿಗೆ ಕೊಹ್ಲಿ, ರೋಹಿತ್ ಉತ್ತೇಜನ ನಿರೀಕ್ಷೆ: ಗಂಭೀರ್

ನವದೆಹ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದಡಿಯಲ್ಲಿ ಯುವ ಆಟಗಾರರನ್ನು ಸಜ್ಜುಗೊಳಿಸುತ್ತಿದ್ದ ರೀತಿಯಲ್ಲಿ ಹಾಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಸೀಮಿತ…

ಕ್ರಿಕೆಟ್‍ನಿಂದ ನಿವೃತ್ತಿ ಹೊಂದುವವರೆಗೂ ಕೆಕೆಆರ್ ಪರ ಆಡಲು ಬಯಸುತ್ತೇನೆ”

ಕೋಲ್ಕತ್ತಾ: ಕೋಲ್ಕತಾ ನೈಟ್ ರೈಡರ್ಸ್‍ನ (ಕೆಕೆಆರ್) ಸ್ಫೋಟಕ ಆಟಗಾರ ಕೆರಿಬಿಯನ್ ಆಲ್‍ರೌಂಡರ್ ಆಂಡ್ರೆ ರಸ್ಸೆಲ್ ಅವರು ಕ್ರಿಕೆಟ್‍ನಿಂದ ನಿವೃತ್ತಿ ಹೊಂದುವವರೆಗೆ ಕೆಕೆಆರ್ ಪರ ಆಡುವ ಇಂಗಿತ ವ್ಯಕ್ತ…

ಆಟೊಗ್ರಾಫ್ ಕೊಡ್ತೀನಿ, ನನ್ನ ಅಭಿಮಾನಿಗೆ ಉಚಿತ ಚಂದಾದಾರಿಕೆ ನೀಡಿ: ಚೆತ್ರಿ

ನವದೆಹ: ನೀವು ಬಯಸಿದಂತೆ ನಿಮಗೆ ನನ್ನ ಆಟೊಗ್ರಾಫ್ ನೀಡಲು ನನ್ನ ಒಪ್ಪಿಗೆ ಇದೆ; ಆದರೆ, ಅದಕ್ಕೆ ಪ್ರತಿಯಾಗಿ ನೀವು ನನ್ನ ಪುಟಾಣಿ ಅಭಿಮಾನಿಗೆ ನಿಮ್ಮ 2 ತಿಂಗಳ…

ಎಸ್ಸೆಸ್ಸೆಲ್ಸಿ ಪರೀಕ್ಷೆ : ಜೂನ್ 2 ಅಥವಾ 3ನೇ ವಾರ

ಬೆಂಗಳೂರು : ಜೂನ್ ಎರಡನೇ ಅಥವಾ ಮೂರನೇ ವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್…

ಆನ್‍ಲೈನ್ ಪಾಠಗಳು ಪ್ರಾರಂಭ

ಬಳ್ಳಾರಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2019-20ನೇ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಎ ಹಾಗೂ ಬಿ.ಕಾಂ…

ಕೌಲ್‍ಬಜಾರ್ ಪ್ರದೇಶದಲ್ಲಿ ಕೊರೋನಾದ ಜಾಗೃತಿ

ಬಳ್ಳಾರ ಕರೋನಾ ವೈರಾಣವನ್ನು ನಿಯಂತ್ರಣ ಮಾಡಲು ಸಾರ್ವಜನಿಕರು ತಪ್ಪದೇ ಮಾಸ್ಕ್‍ನ್ನು ಬಳಸಿ, ಅಂತರ ಕಾಪಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ ಅವರು ಹೇಳಿದರು.  …

ಬಳ್ಳಾರಿಯಲ್ಲಿ ಮತ್ತೊಂದು ಪಾಸಿಟಿವ್

ಬೆಳಗಾಯಿತು ವಾರ್ತೆಬಳ್ಳಾರಿ: ಬಳ್ಳಾರಿ ನಗರದಲ್ಲಿ ಮಂಗಳವಾರ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯ ಕೊರೋನಾ ಪಾಸಿಟಿವ್ ಪ್ರಕರಣ ಸಂಖ್ಯೆ 14 ಕ್ಕೇರಿದೆ. ನಗರದ ಕೌಲ್‍ಬಜಾರ್…