ಹೊಸ ಹುಡುಗರಿಂದ ಅರಿಷಡ್ವರ್ಗ

Share on facebook
Share on twitter
Share on linkedin
Share on whatsapp
Share on email

ಕನ್ನಡ ಅಷ್ಟೇ ಅಲ್ಲ ಭಾರತಿಯ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಪ್ರಕಾಶ್ ಬೆಳವಾಡಿ ನಿಲ್ಲುತ್ತಾರೆ. ಇವರ ಗರಡಿಯಲ್ಲಿ ಪಳಗಿದ ಒಂದಿಷ್ಟು ಹುಡುಗರು ಸೇರಿಕೊಂಡು ‘ಅರಿಷಡ್ವರ್ಗ’ ಎಂಬ ಹೊಸ ಬಗೆಯ ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಕನ್ನಡ ಸಿನಿಮಾದಿಂದ ಸ್ಯಾಂಡಲ್‍ವುಡ್‍ನಲ್ಲಿ ಬದಲಾವಣೆಯ ಗಾಳಿ ಬಿಸುವ ಲಕ್ಷಣ ಕಾಣುತ್ತಿದ್ದು, ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಈ ಟ್ರೇಲರ್ ಚಂದನವನದಲ್ಲಿ ಹೊಸ ಉತ್ಸಾಹ ಹುಟ್ಟುಹಾಕಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಪ್ರಕಾಶ್ ಬೆಳವಾಡಿ ‘ನಾನು ಪ್ರಾರಂಭದಿಂದಲೂ ಕೆಳುಗನಾಗಿ ಈ ತಂಡದಲ್ಲಿ ಇದ್ದೇನೆ. ಸಿನಿಮಾ ನೋಡಿ ತುಂಬಾ ಖುಷಿ ಆಯ್ತು. ಒಳ್ಳೆ ಸಿನಿಮಾ, ಹೊಸ ಜಾನರ್‍ನಿಂದ ಕೂಡಿದೆ. ಇದರಲ್ಲಿ ತುಂಬಾ ಬೋಲ್ಡ್ ಪಾತ್ರಗಳು ಬರುತ್ತವೆ. ಸ್ಟುಡಿಯೋನಲ್ಲಿ ಕುಳಿತು ಧ್ವನಿಗೆ ಎಫೆಕ್ಟ್ ಕೊಡುವ ಸಿನಿಮಾಗಳ ಹಾವಳಿ ಮಧ್ಯ ಇದಕ್ಕೆ ಸಿಂಕ್ ಸೌಂಡ್ ಮಾಡಲಾಗಿದೆ. ಮುಖ್ಯವಾಗಿ ಅವಿನಾಶ್ ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ. ನಾನು ಏನಾದರೂ ಪ್ರಶಸ್ತಿ ವಿಭಾಗದಲ್ಲಿ ಜ್ಯೂರಿ ಆಗಿದ್ದರೆ ಕಂಡಿತ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಕೊಡುತ್ತಿದ್ದೆ. ಇವರ ಜೊತೆ ನಟನೆಯಲ್ಲಿ ಅಂಜು ಆಳ್ವಾ ನಾಯಕ್ ಕೂಡ ಗಮನ ಸೇಳೆಯುತ್ತಾಳೆ. ನನ್ನ ಪ್ರಕಾರ ಈ ಕೊರೋನಾ ಕಾಲಕ್ಕಿಂತ ಮುಂದಿನ ದಿನಗಳಲ್ಲಿ ಸಿನಿಮಾಗಳಿಗೆ ಇನ್ನಷ್ಟು ಕಷ್ಟ ಆಗಬಹುದು. ಈಗಲೇ ಜನ ಥಿಯೇಟರ್‍ಗೆ ಬರತಾ ಇಲ್ಲ. ಮುಂದೆ ಸಿನಿಮಾ ನೋಡುವುದು ಬದಲಾವಣೆ ಆಗಲಿದೆ’ ಎಂದರು.

ಅಂದಂಗೆ ಈ ಚಿತ್ರವನ್ನು ಅರವಿಂದ್ ಕಾಮತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ಗೆಳೆಯರೊಂದಿಗೆ ಸೇರಿಕೊಂಡು ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಲಾಕ್‍ಡೌನ್‍ಗೂ ಮೊದಲೇ ರಿಲೀಸ್ ಆಗಬೆಕಿದ್ದ ಈ ಚಿತ್ರಕ್ಕೆ ಅರವಿಂದ್ ಎರಡು ವರ್ಷ ಶ್ರಮ ಹಾಕಿದ್ದಾರೆ. ಪ್ರಕಾಶ್ ಬೆಳವಾಡಿ ಗರಡಿಯಲ್ಲಿ ಪಳಗಿದ ಅರವಿಂದ್ ಆ್ಯಂಡ್ ಟೀಮ್‍ನ ಚಿತ್ರ ಇದೀಗ ರಿಲೀಸ್‍ಗೆ ಸಿದ್ದವಿದ್ದು, ಇದೇ ನವೆಂಬರ್ 27 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸಿನಿಮಾ ಬಗ್ಗೆ ಹೇಳುವುದಾದರೆ, ಇದೊಂದು ಸಂಬಂಧಗಳ ಚಾಲಿತ ನಿಗೂಢ ಹಾಗೂ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಒಬ್ಬ ಮಹತ್ವಾಕಾಂಕ್ಷಿಯುಳ್ಳ ನಟ ತನ್ನ ಹವ್ಯಾಸಿ ಗುಪ್ತ ಕೆಲಸಕ್ಕಾಗಿ ಹೊದಾಗ ಆ ಮನೆಯಲ್ಲಿ ಆಶ್ಚರ್ಯಕರವಾದ ಕೊಲೆಯ ಕೇಸಿನಲ್ಲಿ ಸಿಕ್ಕಿಕೊಳ್ಳುತ್ತಾನೆ. ಅವನ ಜೊತೆ ಸಿನಿಮಾ ಹುಚ್ಚು ಹಿಡಿದುಕೊಂಡ ಒಬ್ಬ ಹುಡುಗಿ, ಮನೆಗೆ ಕನ್ನ ಹಾಕಲು ಬಂದ ಕಳ್ಳನೂ ಸೇರಿಕೊಳ್ಳುತ್ತಾರೆ. ಇದರಲ್ಲಿ ಕೊಲೆಯಾದ ವ್ಯಕ್ತಿಗೂ ಈ ಮೂವ್ವರಿಗೂ ಇರುವ ಸಂಬಂಧವನ್ನು ತನಿಖೆ ಮಾಡುವುದೇ ಪೋಲೀಸರ ಕೆಲಸವಾಗುತ್ತದೆ. ಚಿತ್ರದ ಕಥೆ ಕಾಮ, ಕ್ರೋಧ, ಪ್ರೀತಿ, ದುರಾಸೆ, ಹಾಗೂ ಅಹಂಕಾರಗಳ ಮೇಲೆ ಸಾಗುತ್ತದೆ.

ಬಾಲಾಜಿ ಮನೋಹರ್ ಛಾಯಾಗ್ರಹಣವಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅವಿನಾಶ್, ಸಂಯುಕ್ತಾ ಹೊರನಾಡ, ಅಂಜು ಆಳ್ವಾ ನಾಯಕ್, ಮಹೇಶ್ ಬಂಗ್, ನಂದಗೋಪಾಲ್ ಇದ್ದಾರೆ. ಇವರ ಜೊತೆ ಸಹ ಕಲಾವಿಧರಾಗಿ ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್ ಕುಪ್ಳಿಕರ್ ಮುಂತಾದವರು ಇದ್ದಾರೆ. ಉಳಿದಂತೆ ಚಿತ್ರಕ್ಕೆ ಉದಿತ್ ಹರಿತಸ್ ಸಂಗೀತ ಭರತ್ ಸಂಕಲನ, ಪವನ್ ಕುಮಾರ್ ಸಾಹಿತ್ಯವಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಭಾ.ಮಾ ಹರೀಶ್ ತಂಡಕ್ಕೆ ಶುಭ ಹಾರೈಸಿದರು. ಈ ಅರಿಷಡ್ವರ್ಗದ ಟ್ರೇಲರ್, ಹಾಡುಗಳು ಸೇರಿದಂತೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಂಡದ ಅರಿಷಡ್ವಗರ್Àಕನ್ನಡಮ್ಯೂವಿ.ಕಾಮ್ ನಲ್ಲಿ ನೋಡಬಹುದು. ಚಿತ್ರ ಇದೇ ನವೆಂಬರ್ 27 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter