ಗಡಿಯಾರ ಬಿಡುಗಡೆಗೆ ಕ್ಷಣಗಣನೆ ಜಾಲತಾನದಲ್ಲಿ ಟ್ರೇಲರ್‍ಗೆ ಒಳ್ಳೆ ರೆಸ್ಪಾನ್ಸ್

Share on facebook
Share on twitter
Share on linkedin
Share on whatsapp
Share on email

ಸದ್ಯ ಸಾಮಾಜಿಕ ಜಾಲತಾನದಲ್ಲಿ ‘ಗಡಿಯಾರ’ದ್ದೆ ಮಾತು. ಹೌದು ಯುವ ಪ್ರತಿಭೆ ಪ್ರಬೀಕ್ ಮೊಗವೀರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ವಸ್ತ್ರವಿನ್ಯಾಸದ ಜೊತೆಗೆ ಬಂಡವಾಳವನ್ನೂ ಹೂಡಿ ನಿರ್ದೇಶನದ ಹೊಣೆಯನ್ನು ಹೊತ್ತಿದ್ದರೆ. ನಿರ್ಮಾಣದಲ್ಲಿ ಪ್ರಬೀಕ್‍ಗೆ ಸಾಥ್ ನೀಡಿದ್ದಾರೆ ಲಾವಣ್ಯ ಲೀಲಾ ಮೋಹನ್ ಮತ್ತು ದೀಪಾ ವಿನಯ್ ಕುಮಾರ್. ಈ ಚಿತ್ರದ ಟ್ರೇಲರ್ ಕಳೆದವಾರವಷ್ಟೇ ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದು, ಟ್ರೇಲರ್‍ಗೆ ಯುವ ಜನ ಫಿದಾ ಆಗಿದ್ದಾರೆ. ಹೊಸತನದಿಂದ ಕೂಡಿರುವ ಟ್ರೇಲರ್ ನೋಡಿದವರು ಚಿತ್ರದಲ್ಲಿ ಸಮಾಜಕ್ಕೆ ಏನೋ ವಿಶ್ಯ ಇದೆ ಎನ್ನುತ್ತಿದ್ದಾರೆ. ಇದೇ ನವೆಂಬರ್ 27 ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ಈ ‘ಗಡಿಯಾರ’ದಲ್ಲಿ ಗಂಟೆ, ನಿಮಿಷ, ಸೆಕೆಂಡ್ ಮುಳ್ಳುಗಳು ಇರುವಂತೆ ನಮ್ಮ ಸಮಾಜದಲ್ಲೂ ಅನೇಕ ಗುಣಗಳನ್ನು ಹೊಂದಿರುವ ಮನುಷ್ಯರು ಇರುತ್ತಾರೆ. ಅದರಲ್ಲೂ ಯುವಕರು ಸಮಾಜದ ಆಸ್ತಿ ಅವರು ಡ್ರಗ್ಸ್ ಎಂಬ ಮಾಫಿಯಾದ ಜಾಲಕ್ಕೆ ಬಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ ನಿರ್ದೇಶಕರು.

ಈ ಚಿತ್ರದಲ್ಲಿ ನಾಯಕನನ್ನು ವಿಜೃಂಭಿಸುವ ಬದಲು ಕಥೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ‘ಸಂತ’ ಚಿತ್ರದಲ್ಲಿ ನಟಿಸಿದ್ದ ನಂತರ ಎಸ್. ಪಿ ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷ. ಇವರೊಂದಿಗೆ ಮಲೆಯಾಳಂ ಖ್ಯಾತ ನಟ ರಿಯಾಜ್, ಮರಾಠಿ ಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ಗೌರಿಶಂಕರ್ ಇದ್ದಾರೆ. ಅಲ್ಲದೆ ಕನ್ನಡದ ಮೇರು ಪ್ರತಿಭೆಗಳಾದ ಶರತ್ ಲೋಹಿತಾಶ್ವ, ಸುಚಿಂದ್ರ ಪ್ರಸಾದ್, ಯಶ್ ಶೆಟ್ಟಿ, ಗಣೇಶ್ ರಾವ್, ಮನ್ ದೀಪ್ ರಾಯ್, ರಾಧಾ ರಾಮಚಂದ್ರ, ಪ್ರದೀಪ್ ಪೂಜಾರಿ, ರಾಜ್ ದೀಪಕ್ ಶೆಟ್ಟಿ, ನಿವೃತ್ತ ಡಿಸಿಪಿ ಛಬ್ಬಿ ಸೇರಿದಂತೆ ಕಿರಿಯರು ಹಾಗೂ ಹಿರಿಯರ ದೊಡ್ಡ ಬಳಗವೇ ಈ ಚಿತ್ರದಲ್ಲಿದೆ. ಚಿತ್ರದ ಇನ್ನೊಂದು ವಿಶೇಷ ಎಂದರೆ, ನಟಿ ಶೀತಲ್ ಶೆಟ್ಟಿ ಈ ಚಿತ್ರದ ನಾಯಕಿಯಾಗಿರುವುದು. ರಾಘವ್ ಸುಭಾಷ್ ಸಂಗೀತ, ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಜಾಗ್ವಾರ್ ಸಣ್ಣಪ್ಪ ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ಈ ಚಿತ್ರಕ್ಕಿದೆ.

ಚಿತ್ರರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದ ಪ್ರಬೀಕ್ ತಮ್ಮ ಮೊದಲ ಚಿತ್ರವಾದ ‘ಗಡಿಯಾರ’ವನ್ನು ವಿಶೇಷವಾಗಿ ಸಿದ್ದ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಪ್ರೀತಿ, ಪ್ರೇಮದೊಂದಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ನಡೆಯುವ ಕಥೆಯಾಗಿದ್ದು, ಚಿತ್ರವು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ. ಚಿತ್ರದ ಶೇ. 65 ರಷ್ಟು ಚಿತ್ರೀಕರಣವು ಬೆಂಗಳೂರಿನ ಸುತ್ತಮುತ್ತಲೇ ನಡೆದಿದೆ. ಇನ್ನುಳಿದ 35 ರಷ್ಟು ಚಿತ್ರೀಕರಣವನ್ನು ಕನಕಪುರ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter