ಪಾಕಿಸ್ತಾನ ದುಷ್ಟ ಹುನ್ನಾರಗಳು ಹೆಚ್ಚು ಕಾಲ ನಡೆಯುವುದಿಲ್ಲ

ಪಾಕಿಸ್ತಾನ ದುಷ್ಟ ಹುನ್ನಾರಗಳು ಹೆಚ್ಚು ಕಾಲ ನಡೆಯುವುದಿಲ್ಲ

ನವದೆಹಲಿ : ನೆರೆಯ ದೇಶ ಪಾಕಿಸ್ತಾನದ ದುಷ್ಟ ಹುನ್ನಾರಗಳು ಇನ್ನೂ ಬಹಳ ದಿನಗಳು ನಡೆಯುವುದಿಲ್ಲ. ತನ್ನ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಸಿಂಗಪುರದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್, ಅಲ್ಲಿನ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ನೆರೆಯ ದೇಶದ ಹೆಸರು ಪಾಕಿಸ್ತಾನ ಎಂಬುದಾದರೂ, ಅದು ತನ್ನ ದುಷ್ಕೃತ್ಯಗಳನ್ನು ಮುಂದುವರಿಸಿರುವ “ದುರ್ಮಾರ್ಗ ಪ್ರೇರಕ” ರಾಷ್ಟ್ರವಾಗಿದ್ದು, ಅದರ ಆಟಗಳು ಇನ್ನೂ ಹೆಚ್ಚು ಕಾಲ ನಡೆಯುವುದಿಲ್ಲ ಎಂದು ರಕ್ಷಣಾ ಸಚಿವರು ಎಚ್ಚರಿಕೆ ನೀಡಿದರು.

ಕಾಶ್ಮೀರಕ್ಕೆ 370 ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷಾಧಿಕಾರ ರದ್ದುಪಡಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೂರ್ಣ ಪ್ರಮಾಣದ ರಾಜ್ಯವೊಂದು ದೇಶದ ಉಳಿದ ಪ್ರಾಂತ್ಯಗಳೊಂದಿಗೆ ಮಿಳಿತಗೊಳ್ಳದಿರುವುದು ದುರದೃಷ್ಟಕರ ಎಂದು ವಿಶ್ಲೇಷಿಸಿದ ರಕ್ಷಣಾ ಸಚಿವರು, ನಿರ್ದಿಷ್ಟ ಪರಿಸ್ಥಿತಿಯ ಕಾರಣದಿಂದ 370 ನೇ ವಿಧಿಯನ್ನು ಅಲ್ಲಿ ಜಾರಿಗೊಳಿಸಲಾಗಿತ್ತು. “ ಬಿಜೆಪಿ ಪಕ್ಷ ಮೊದಲಿನಿಂದಲೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಿಶೇಷಾಧಿಕಾರ ರದ್ದತಿಯ ಭರವಸೆ ನೀಡಿಕೊಂಡು ಬಂದಿತ್ತು ಎಂದರು.. ಅದರಂತೆ, ಆಗಸ್ಟ್ 5 ರಂದು ಸಂವಿಧಾನ ಕಲಂ 370 ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದರು.

ಭಾರತದ ನಿರ್ಧಾರದ ನಂತರ ಪಾಕಿಸ್ತಾನ, ಭಾರತದೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿಕೊಂಡಿದೆ. ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನ ನಿಷೇಧಿಸಿದೆ. ಥಾರ್ ಮತ್ತು ಸಂಜೌತಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ನಿಲ್ಲಿಸಿದೆ ಎಂದರು. ಅಕ್ಟೋಬರ್ 31 ರಂದು ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿವೆ ಅಸ್ತಿತ್ವಕ್ಕೆ ಬಂದಿವೆ ಎಂದು ರಾಜನಾಥ್ ಸಿಂಗ್ ವಿವರಿಸಿದರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.