ಹೊಸ ಆವಿಸ್ಕಾರದ 3 ಟೆಸ್ಲಾ ಎಮ್‍ಆರ್‍ಐ ಮಷಿನ್ ಪ್ರಾರಂಭ

ಹೊಸ ಆವಿಸ್ಕಾರದ 3 ಟೆಸ್ಲಾ ಎಮ್‍ಆರ್‍ಐ ಮಷಿನ್ ಪ್ರಾರಂಭ

ಬೆಳಗಾಯಿತು ವಾರ್ತೆ

ಹುಬ್ಬಳ್ಳಿ: ಟೆಸ್ಲಾ ಎಮ್‍ಆರ್‍ಐ ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾದ ವೈದ್ಯಕೀಯ ಉಪಕರಣವಾಗಿದೆ ಬೆಂಗಳೂರಿನಲ್ಲಿ ಎರಡೂ ಮೂರು ಸ್ಥಳಗಳಲ್ಲಿ ಈ ಎಮ್‍ಆರ್‍ಐ ಸ್ಕ್ಯಾನ್ ಸೆಂಟರ್ ಉಪಯೋಗಿಸಲಾಗುತ್ತಿದೆ.

ಆದರೆ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಇದೇ ಪ್ರಪ್ರಥಮ ಬಾರಿಗೆ ಯಂತ್ರವನ್ನು ಸೆ.21 ರಂದು ನಗರದ ಮಹಾರಾಷ್ಟ್ರ ಮಂಡಳ ಬಿಲ್ಡಿಂಗ್ ಕ್ಲಬ್ ರೋqನ ಎನ್‍ಎಮ್‍ಆರ್ ಸ್ಕ್ಯಾನ್ ಸೆಂಟರ್‍ನಲ್ಲಿ ಪ್ರಾರಂಭಿಸಲಾಗಿದೆ ಎಂದು ಡಾ. ಆರ್ ಆರ್ ಕಲಘಟಗಿ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಹೊಸ ವ್ಯವಸ್ಥೆಯನ್ನು ಎಲ್ಲರು ಸದುಪಯೋಗ ಪಡಿಸಿಕೊಳ್ಳಬೇಕು, ಈ ಸ್ಕ್ಯಾನ್‍ನ ಮುಖ್ಯ ಲಕ್ಷಣ ಎಂದರೆ ಮೂರ್ಚೆ ರೋಗ, ಬೆನ್ನು ಹುರಿಗಳು ಕಾಯಿಲೆ, ಮೆದುಳಿನ ರೋಗ, ಎಲುಬು, ಸಂಧಿ ಈ ತರಹದ ಎಲ್ಲ ನರರೋಗ ಹೃದಯ ಸಂಬಂಧಿ ಕಾಯಿಲೆಗಳು, ಅರ್ಭುದ ರೋಗ ಇಂತಹ ಹಲವಾರು ರೋಗಗಳ ಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿಯೇ ಕಂಡು ಹಿಡಿಯುವ ಏಕೈಕ ದೊಡ್ಡ ಸಾಧನವೇ ಈ 3 ಟೆಸ್ಲಾ ಎಮ್‍ಆರ್‍ಐ. ಇಲ್ಲಿ ಬಡವರಿಗೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ವಿಶೇಷವಾಗಿ ಕಡಿಮೆಯಲ್ಲಿ ನೋಡಲಾಗುತ್ತದೆ ಎಂದರು.

ಈ ಸುದ್ದಿಗೋಷ್ಠಿಯಲ್ಲಿ ಡಾ. ಎಸ್ ಎಮ್ ದುಗ್ಗಾಣಿ, ಡಾ. ಎ ಬಿ ಕಲಮದಾನಿ, ಡಾ. ಆರ್ ಎಫ್ ತೋಫಖಾನೆ, ವೀಣಾ ಮಂಗಳವೇಡೆ ಇದ್ದರು.

ಕಾರ್ಯಕ್ರಮದ ಉದ್ಘಾಟಕರು
ಸಂಸದರಾದ ಪ್ರಲ್ಹಾದ ಜೋಶಿ, ಜಗದೀಶ್ ಶೆಟ್ಟರ್, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಸಚಿವರಾದ ಪ್ರಸಾದ ಅಬ್ಬಯ್ಯ, ಎನ್ ಎಮ್ ಆರ್ ಸ್ಕ್ಯಾನ್ ಸೆಂಟರ್ ನಿರ್ದೇಶಕರಾದ ಡಾ. ಎಮ್ ಎಮ್ ಜೋಶಿ ಭಾಗವಹಿಸುವವರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.