ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದವನ ಬಂಧನ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜು ಶಂಕರಪ್ಪ ಕಳಸದ್ ಬಂಧಿತ ಆರೋಪಿ.


ಬಂಧಿತ ಕೆಲಸದ ಆಮಿಷದ ನೆಪವೊಡ್ಡಿ, ನಂಬಿಸಿ ಅನ್ಯರಾಜ್ಯಗಳ ಯುವತಿಯರನ್ನು ಕರೆತಂದು ನಂತರ ಯುವತಿಯರನ್ನು ಡಾನ್ಸ್ ಬಾರ್​ಗಳಿಗೆ ಸರಬರಾಜು ಮಾಡುತ್ತಿದ್ದನು.‌ ಯುಎಇ, ಫ್ಯುಜಾರಿಯಾಗಳಿಗೆ ಅಕ್ರಮ ಸಾಗಾಣಿಕೆ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.


ಸದ್ಯ ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ, 9 ಯುವತಿಯರನ್ನು ರಕ್ಷಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪಿಐ ಹಜ್ರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter