ನಿಮ್ಮೂರಲ್ಲೆ ನಿಮಗೆ ನೂರು ದಿನಗಳ ಕೆಲಸ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ : ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ರೈತರ ಜಮೀನಿನಲ್ಲಿ “ಬದು ನಿರ್ಮಾಣದ ಮಾಸಾಚರಣೆ ಹಾಗೂ ಅಭಿಯಾನ”ಕ್ಕೆ ಬಳ್ಳಾರಿ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರ ಅವರು ಚಾಲನೆ ನೀಡಿದರು. ಕೂಲಿ ಕಾರ್ಮಿಕರಿಗೆ ಮಾಸ್ಕ್‍ಗಳನ್ನು ಮತ್ತು ರೋಗ ನಿವಾರಕ ದ್ರಾವಣಗಳನ್ನು ಇದೇ ಸಂದರ್ಭದಲ್ಲಿ ವಿತರಿಸಿದರು.

ಪ್ರತಿ ಹೊಲದಲ್ಲಿ ಬದು ರೈತನ ಮುಖದಲ್ಲಿ ನಗು, ಪ್ರತಿ ಕುಟುಂಬಕ್ಕೂ ಕೆಲಸ ಪ್ರತಿ ಹೊಲಕ್ಕೂ ಬದು ಎಂಬ ಉದ್ದೇಶದಲ್ಲಿ ಈ ಬದು ನಿರ್ಮಾಣದ ಮಾಸಾಚರಣೆ ಮತ್ತು ಅಭಿಯಾನವನ್ನು ಕೈಗೊಳ್ಳಲಾಗಿದೆ.

ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ನಿಯಂತ್ರಣ, ತೇವಾಂಶ ಹೆಚ್ಚಾಗುವುದರಿಂದ ಶೇ.10 ರಿಂದ 15ರಷ್ಟು ಅಧಿಕ ಬೆಳೆ ಇಳುವರಿ, ಕಂದಕ ಬದು ನಿರ್ಮಿಸಿಕೊಳ್ಳಲು ಪ್ರತಿ ಎಕರೆಗೆ ಗರಿಷ್ಟ 13 ಸಾವಿರ ಆರ್ಥಿಕ ನೆರವು, ಒಂದು ಎಕರೆ ಪ್ರದೇಶದಲ್ಲಿ 100 ಮೀ. ಬದು ನಿರ್ಮಾಣದಿಂದ ಪ್ರತಿ ಹದ ಮಳಿಗೆ ಅಂದಾಜು 2 ಲಕ್ಷ ಲೀ. ಮಳೆ ನೀರು ಸಂಗ್ರಹ, ಬದುವಿನ ಮೇಲೆ ಹುಲ್ಲು, ತೋಟಗಾರಿಕೆ/ಅರಣ್ಯ ಸಸಿಗಳನ್ನು ನಾಟಿಮಾಡಿದಲ್ಲಿ ಬದುಗಳ ಸ್ವೀಕರಣ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.ನಿಮ್ಮೂರಲ್ಲೆ ನಿಮಗೆ ನೂರು ದಿನಗಳ ಕೆಲಸ, ಗಂಡು-ಹೆಣ್ಣಿಗೆ ಸಮಾನ ಕೂಲಿ, ಪ್ರತಿ ದಿನಕ್ಕೆ 275 ರೂ.ಗಳನ್ನು ನೀಡಲಾಗುತ್ತದೆ ಎಂದರು

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಪಿಡಿಒ, ಕೂಲಿ ಕಾರ್ಮಿಕರು ಸೇರಿದಂತೆ ಇತರರು ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *