ಸೋಮವಾರದಂದು ಸಂಸತ್‍

Share on facebook
Share on twitter
Share on linkedin
Share on whatsapp
Share on email


ನವದೆಹಲಿ, : ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರ ನಡುವೆ ವಿಮಾನಯಾನ ಸಂಸ್ಥೆಗಳು ವಿಮಾನಗಳ ಸಮಯವನ್ನು ಬದಲಿಸಿರುವುದರಿಂದ ಸಂಸತ್‍ ನ ಉಭಯ ಸದನಗಳು ಸೋಮವಾರದಂದು ಮಧ್ಯಾಹ್ನ 2 ಗಂಟೆಗೆ ಸಮಾವೇಶಗೊಳ್ಳಲಿವೆ.

ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ಸದನಗಳಲ್ಲಿ ಈ ಕುರಿತು ಪ್ರಕಟಿಸಿದ್ದಾರೆ

ಗುರುವಾರ ಸದನದಲ್ಲಿ ಚರ್ಚೆಯನ್ನು ಕೈಗೆತ್ತಿಕೊಂಡಾಗ ವಿಮಾನಗಳ ಸಮಯದ ಬದಲಾವಣೆಯಿಂದ ಬೆಳಿಗ್ಗೆ 11 ಗಂಟೆಗೆ ಸದನಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಸದಸ್ಯರು ಹೇಳಿದ್ದಾರೆ ಎಂದು ಸ್ಪೀಕರ್‍ ಓಂ ಬಿರ್ಲಾ ಲೋಕಸಭೆಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಸೋಮವಾರ 2 ಗಂಟೆಗೆ ಸಮಾವೇಶಗೊಳ್ಳಲು ಸ್ಪೀಕರ್ ನಿರ್ಧರಿಸಿದರು. ಸಮಯ ಬದಲಾವಣೆ ಒಂದು ದಿನಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಅವರು ಹೇಳಿದರು. ಮೇಲ್ಮನೆಯಲ್ಲೂ ವೆಂಕಯ್ಯನಾಯ್ಡು ಇದೇ ಘೋಷಣೆ ಹೊರಡಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter