ದ್ವಿತೀಯ ಪಿಯುಸಿ ಫಲಿತಾಂಶ : ಬಳ್ಳಾರಿಯ ಬಾಲೆಗೆ ಮೊದಲ ರ್ಯಾಂಕ್

ರ್ಯಾಂಕ್‍ ಕೊಳ್ಳೆಹೊಡೆದ ಇಂದು ಕಾಲೇಜು

ಬೆಳಗಾಯಿತು ವಾರ್ತೆ

ಬಳ್ಳಾರಿ(ಕೊಟ್ಟೂರು): ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜ್ ನ ಕುಸುಮಾ ಉಜ್ಜಿನಿ 594 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಒಟ್ಟು 9 ರ್ಯಾಂಕ್ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಹೊಸ್ಮನಿ ಚಂದ್ರಪ್ಪ 591 ಅಂಕ ಪಡೆದು ದ್ವಿತೀಯ ಸ್ಥಾನ, ನಾಗರಾಜ್ ಸಿದ್ದಪ್ಪಾ ಮೂರನೇ (591) ಸ್ಥಾನ, ಎಸ್.ಓಮೇಶ ನಾಲ್ಕನೇ (591) ಸ್ಥಾನ, ಸಚಿನ್ ಕೆಜಿ ಐದನೇ (589) ಸುರೇಶ್.ಎಚ್ ಆರನೇ ಸ್ಥಾನ (589) ಹರಿಜನಸೊಪ್ಪಿನ ಹುಚ್ಚೆಂಗಮ್ಮ ಏಳನೇ (588) ಸ್ಥಾನ, ನಂದೀಶ ಮಠದ ಎಂಟನೇ(588)ಸ್ಥಾನ, ಮತ್ತು ಸರಸ್ವತಿ ಅಂಗಡಿ ಒಂಬತ್ತನೇ(587)ಸ್ಥಾನ ಪಡೆದಿದ್ದಾರೆ.

ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಅತಿಹೆಚ್ಚು ಅಂಕಪಡೆದು ಮೊದಲ ಒಂಬತ್ತು ರ್ಯಾಂಕ್‍ಗಳನ್ನು ಗಳಿಸಿರುವ ಸಾಧನೆ ಮೆರೆದಿದ್ದಾರೆ.

ಸತತ 5 ವರ್ಷಗಳಿಂದ ರ್ಯಾಂಕ್

ಸತತ 5 ವರ್ಷಗಳಿಂದ ಕೊಟ್ಟೂರಿನ ಇಂದೂ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳೇ ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆಯುತ್ತಿದ್ದಾರೆ. ಕಳೆದ ಬಾರಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಇಲ್ಲಿನ ವಿದ್ಯಾರ್ಥಿಗಳೇ ಪಡೆದಿದ್ದಾರೆ.
ಎಸ್. ಸ್ವಾತಿ 595 ಅಂಕ ಪಡೆದರೆ, ಎಸ್.ವಿ. ರಮೇಶ ಹಾಗೂ ಗೊರವರ ಕಾವ್ಯಾಂಜಲಿ ಅವರು ಕ್ರಮವಾಗಿ 593 , 588 ಅಂಕ ಗಳಿಸಿದ್ದರು.

 

 

Leave a Reply

Your email address will not be published. Required fields are marked *