ಸೌಹಾರ್ದಯುತ ವಾತಾವರಣ ಸೃಷ್ಠಸಿ : ಸಿಪಿಐ

ಸೌಹಾರ್ದಯುತ ವಾತಾವರಣ ಸೃಷ್ಠಸಿ : ಸಿಪಿಐ


ಬೆಳಗಾಯಿತು ವಾರ್ತೆ

ಹಟ್ಟಿ : ಮೊಹರಂ ಹಾಗೂ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಪಟ್ಟಣದ ಜನತೆಯು ಆಚರಿಸಿರುವುದು ಜಿಲ್ಲೆಗೆ ಮಾದರಿಯಾಗಿದೆ ಎಂದು ಲಿಂಗಸುಗೂರು ಸಿಪಿಐ ಯಶವಂತ ಬೀಸನಹಳ್ಳಿ ಬಣ್ಣಿಸಿದರು. .

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಣೇಶ ಉತ್ಸವದಲ್ಲಿ ಅತ್ಯುತ್ತಮವಾಗಿ ಆಚರಿಸಿದ ಗಣೆಶ ಮಂಡಳಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮೊಹರಂ ಹಾಗೂ ಗಣೇಶ ವಿಸರ್ಜನೆ 9ನೇ ದಿನ ಕೂಡಿ ಬಂದಿದ್ದು ಅಂದು ಗಣೇಶ ವಿಸರ್ಜನೆ ಮಾಡಬಾರದೆಂಬ ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸಿದ ಪಟ್ಟಣ ಮುಖಂಡರು 11ನೇ ದಿನ ಇಲಾಖೆಯೊಂದಿಗೆ ಸಾರ್ವಜನಿಕರು ಪೊಲೀಸ್‍ರೊಂದಿಗೆ ಶಾಂತಿ ಸಂಯಮವನ್ನು ಕಾಪಾಡಿಕೊಂಡು ಯಶಸ್ವಿಗೊಳಿಸಿದರು. ಯಶಸ್ಸಿಗೆ ಊರಿನ ಪ್ರತಿಯೊಬ್ಬ ಧರ್ಮದ ಮುಖಂಡರು ಕಾರಣವೆಂದರು.

ಹಟ್ಟಿ ಪಟ್ಟಣ ಸರ್ವ ಧರ್ಮ ಸಮನ್ವಯತೆ ಪ್ರದೇಶವಾಗಿದ್ದು ಪ್ರತಿಯೊಬ್ಬರು ಅನ್ಯಧರ್ಮಿಯರ ಹಬ್ಬಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ನಮ್ಮ ಸಂಪ್ರದಾಯವಾಗಿದೆ ಎಂದು ಹಿರಿಯ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ್ ಹೇಳಿದರು. ಪಿಎಸೈ ಗಂಗಪ್ಪ ಬುರ್ಲಿ, ಅಂಜುಮನ ಕಮಿಟಿಯ ಕೌಸರ ಸಿದ್ಧಿಕಿ ಮಾತನಾಡಿದರು.
ಪ್ರತಿಯಾಗಿ ಸಿದ್ಧಾರೂಡ ನಗರದ ಗಣೆಶ ಭಕ್ತಿ ಮಂಡಳಿ ವತಿಯಿಂದ ಸಿಪಿಐ ಹಾಗೂ ಪಿಎಸೈರಿಗೆ ಕ.ವಿ ಕಳ್ಳಿಮಠ, ಮೌನೇಶ ಕಾಕಾನಗರ, ಶ್ರೀನಿವಾಸ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಎನ್.ಸ್ವಾಮಿ ನಾಯಿಕೋಡಿ, ಬಾಲಪ್ಪ ನಾಯಕ, ಕ.ವಿ ಕಳ್ಳಿಮಠ, ಮೌನೇಶ ಕಾಕಾನಗರ, ಶ್ರೀನಿವಾಸ, ಗುಂಡಪ್ಪಗೌಡ ಗುರೀಕಾರ, ಶಿವರಾಜಗೌಡ ಗುರೀಕಾರ ಪೊಲೀಸ್ ಸಿಬ್ಬಂದಿಗಳಾದ ಹುಚ್ಚರೆಡ್ಡಿ, ಶರಣಬಸವ, ರಾಮಪ್ಪ, ನರಸಯ್ಯದೊರೆ ಇದ್ದರು.

ಗಣೇಶ ಭಕ್ತಿ ಮಂಡಳಿಯಿಂದ ಬಹುಮಾನ

ಲಾಖೆ ನಿಮಯಮಗಳನ್ನು ಪಾಲಿಸಿ ಶಾಂತಿ ಸಂಯಮದಿಂದ ಗಣೇಶ ವಿಸರ್ಜನೆ ಮಾಡಲು ಸಹಕಾರಿಯಾದ 3 ತಂಡಗಳಿಗೆ ಪೊಲೀಸ್ ಇಲಾಖೆಯಿಂದ ಬಹುಮಾನ ವಿತರಿಸಲಾಯಿತು. ಪಟ್ಟಣದಲ್ಲಿ ಒಟ್ಟು 52ಕಡೆ ಗಣೇಶ ಪ್ರತಿಷ್ಠಾಪಿಸಲಾಗಿತ್ತು. ಸಿದ್ಧಾರೂಡ ನಗರದ ಗಣೇಶ ಭಕ್ತಿ ಮಂಡಳಿ ಪ್ರಥಮ ಬಹುಮಾನ 10 ಸಾವಿರ, ವಾಲ್ಮೀಕಿ ನಗರದ ಗಣೇಶ ಮಂಡಳಿ ದ್ವಿತಿಯ ಬಹುಮಾನ 5 ಸಾವಿರ ಹಾಗೂ ತೃತಿಯ ಬಹುಮಾನವನ್ನು ಹಟ್ಟಿ ಕ್ಯಮಪಿನ ತೆಲುಗು ಕಾಲೋನಿಯ ಗಣೇಶ ಮಂಡಳಿಗೆ 2,500 ನಗದು ನೀಡಿ ಸನ್ಮಾನಿಸಲಾಯಿತು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.