ಹಟ್ಟಿ : ಕುಡಿಯುವ ನೀರಿಗಾಗಿ ಬಂದ್   ಯಶಸ್ವಿ

ಹಟ್ಟಿ : ಕುಡಿಯುವ ನೀರಿಗಾಗಿ ಬಂದ್ ಯಶಸ್ವಿ

ಬೆಳಗಾಯಿತು ವಾರ್ತೆ

ಹಟ್ಟಿ : ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಪಟ್ಟಣದ ಸಂಘಟನೆಗಳು ಸಂಯುಕ್ತವಾಗಿ ಬುಧವಾರ ಕರೆ ನೀಡಿದ ಹಟ್ಟಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.

 ಎಲ್ಲಾ ಸಂಘಟನೆಗಳ ಕಾರ್ಯಕರ್ತರು ಹಟ್ಟಿ ಪಟ್ಟಣದ ಪಾಮನಕಲ್ಲೂರು ಕ್ರಾಸ್‍ನಿಂದ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್‍ಗಳು ಸೇರಿದಂತೆ ಖಾಸಗಿ ವಾಹನಗಳು ಸಂಚಾರ ಸ್ಥಗಿತಗೊಂಡಿತು. ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿದ್ದವು.

ಹಟ್ಟಿ ಪಟ್ಟಣದಲ್ಲಿ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಸುಮಾರು 1500 ಜನ ಕಾರ್ಮಿಕರು ನೆಲೆಸಿದ್ದಾರೆ. ಪಟ್ಟಣಕ್ಕೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಿಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಘೋಷಣೆಗಳು ಕೂಗಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಕೇವಲ ಮೋಟರ್ ದುರಸ್ತಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದರೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡಿಲ್ಲ.

ಕಳೆದ ಜುಲೈ 28ರಂದು ಕೃಷ್ಣ ನದಿಯಲ್ಲಿ ಪ್ರವಾಹದಿಂದ ಪಂಪ್‍ಸೆಟ್‍ಗಳು ಹಾಗೂ ಪೈಪ್‍ಲೈನ್ ಕೊಚ್ಚಿಹೋಗಿದ್ದರಿಂದ ದುರಸ್ತಿ ಮಾಡದೆ ಹಾಗೇ ಬಿಡಲಾಗಿದೆ ಇದರಿಂದಾಗಿ 2 ತಿಂಗಳಿಂದ ಪಟ್ಟಣದ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 ತಾತ್ಕಾಲಿಕವಾಗಿ ಇನ್ನೂ 2ರಿಂದ 3 ದಿನಗಳಲ್ಲಿ ಎನ್‍ಆರ್‍ಬಿಸಿ ಮುಖ್ಯ ಕಾಲುವೆಯಿಂದ ಪಟ್ಟಣಕ್ಕೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಚರ್ಚಿಸಲಾಗಿದೆ. ಈ ಕುರಿತು ಬೆಂಗಳೂರಿನ ಕಂಪೆನಿಯ ಕಚೇರಿಯಲ್ಲಿ ಚರ್ಚಿಸಲು ಕರೆದಿದ್ದಾರೆ. ಜೊತೆಯಲ್ಲಿ ಟಣಮಕಲ್ ಪಂಪ್ ಗೌಸ್ ನಲ್ಲಿ ದುರಸ್ತಿ ಕಾರ್ಯ ನಡೆದಿದೆ.

5ರಿಂದ 6 ದಿನಗಳಲ್ಲಿ  ಕೆಲಸ ಮುಗಿಯು ಸಾಧ್ಯತೆ ಇದೆ. ಪ್ರತ್ಯೇಕವಾಗಿ ಹಟ್ಟಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಜಮೀನು ಖರೀದಿಸಿ ಕೆರೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.  ಕುರಿತು ಜಿಲ್ಲಾಧಿಕಾರಗಳ ಅನುಮೋದನೆ ಪಡೆದು ಆದಷ್ಟು ಬೇಕೆ ಕೆಲಸ ಆರಂಭಿಸುವುದಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹಟ್ಟಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ಲಿಂಗಸುಗೂರು ತಾಲ್ಲೂಕು ತಹಶೀಲ್ದಾರ್ ಚಾಮರಾಜಪಾಟೀಲ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ಕನಕರಾಜ, ರೈತ ಸಂಘದ ಮುಖಂಡರ ವೀರನಗೌಡ, ದಲಿತ ಸಂಘರ್ಷ ಸಮಿತಿ ಮುಖಂಡರಾದ ದುರಗಪ್ಪ ಅಗ್ರಹಾರ, ಚಿನ್ನಪ್ಪ ಕಂದಳ್ಳಿ, ಬಿ.ಎಂಸ್ ರಾಜುಗೌಡ ಗುರಿಕಾರ್, ಬಸಲಿಂಗಪ್ಪ ನಗನೂರು, ಬಾಲಪ್ಪ ನಾಯಕ, ಸಂಗಯ್ಯ ಸ್ವಾಮಿ ಹಾಗೂ ಇತರರು ಇದ್ದರು.

ಸಂಘದ ಪದಾಧಿಕಾರಿಗಳು 

ಹಟ್ಟಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗುಂಡಪ್ಪ ಗೌಡ ಪೊಲೀಸ್ ಪಾಟೀಲ್, ಸಂಚಾಲಕ ಎನ್. ಸ್ವಾಮಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರ್ ಅಲಿ, ಕನ್ನಡ ಪರ ಸಂಘಟನೆಗಳ ಮುಖಂಡರಾದ ಕೆ.ವಿ. ಕಳ್ಳಿ ಮಠ, ಮೌನೇಶ ಕಾಕಾನಗರ, ಶ್ರೀನಿವಾಸ ಮಧು ಶ್ರೀ, ಚಂದ್ರಶೇಖರ ನಾಯಕ, ಜೈಭೀಮ್ ಸೇನೆ ಮುಖಂಡ ಮಲ್ಲಿಕಾರ್ಜುನ್ ಚಿತ್ರನಾಳ ಇದ್ದರು.

ಪಟ್ಟಣದ ಅಭಿವೃದ್ಧಿಯ ಹೊಣೆ ಹಟ್ಟಿ ಚಿನ್ನದ ಗಣಿ ವಹಿಸಿಕೊಳ್ಳಬೇಕು. ಪಟ್ಟಣದಲ್ಲಿ ಗಣಿ ಕಾರ್ಮಿಕರ ವಾಸವಾಗಿದ್ದಾರೆ. ಅವರು ಮಾನಸಿಕವಾಗಿ ಸದೃಢರಾಗಿದ್ದಾರೆ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ = ಎಂ.ಡಿ. ಅಮೀರ ಅಲಿ,  ಪ್ರಧಾನ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘ

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.