ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇಂದು ಮರೆಯಲಾಗದ ದಿನ?

Share on facebook
Share on twitter
Share on linkedin
Share on whatsapp
Share on email


ನವದೆಹಲಿ : 2007ರ ಸೆ. 19ರ ದಿನಾಂಕವನ್ನು ಭಾರತೀಯ ಕ್ರಿಕೆಟ್‌ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ. ಇದೇ ದಿನ ಅಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರು ಟಿ-20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಸತತ ಆರು ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಮಾಡಿದ್ದರು.

ಈ ಸಾಧನೆಗೆ ಇಂದಿಗೆ 12 ವರ್ಷಗಳ ಪೂರ್ಣಗೊಂಡಿವೆ. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮೊದಲ ಟಿ-20 ವಿಶ್ವಕಪ್ ಅದಾಗಿತ್ತು. 2007ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲೇ ರಾಹುಲ್‌ ದ್ರಾವಿಡ್‌ ನಾಯಕತ್ವದ ಭಾರತ ಸೋತು ಆಘಾತಕ್ಕೆ ಒಳಗಾಗಿತ್ತು.

ಇದಾದ ಕೆಲವೇ ದಿನಗಳ ನಂತರ ಭಾರತ ತಂಡದ ನಾಯಕತ್ವ ಪಡೆದ ಮಹೇಂದ್ರ ಸಿಂಗ್‌ ಧೋನಿ ದೇಶಕ್ಕೆ ಚೊಚ್ಚಲ ಟಿ-20 ವಿಶ್ವಕಪ್ ಸಮರ್ಪಿಸಿದ್ದರು.

ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್‌ ತಂಡದ ವಿರುದ್ಧ ಗದ್ದು ಸೆಮಿಫೈನಲ್‌ ಹಾದಿಯನ್ನು ಜೀವಂತವಾಗಿರಿಕೊಂಡಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 18 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಈ ವೇಳೆ ಕ್ರೀಸ್‌ನಲ್ಲಿ ಯುವರಾಜ್‌ ಸಿಂಗ್‌ ಹಾಗೂ ಮಹೇಂದ್ರ ಸಿಂಗ್‌ ತಂಡದ ಮೊತ್ತವನ್ನು ಏರಿಸುವ ಯೋಜನೆಯಲ್ಲಿದ್ದರು.

ಆ್ಯಂಡ್ರೆ ಫ್ಲಿಂಟಾಪ್‌ ಅವರ 18ನೇ ಓವರ್‌ನಲ್ಲಿ ಯುವರಾಜ್‌ ಸಿಂಗ್‌ ಎರಡು ಬೌಂಡರಿ ಸಿಡಿಸಿದರು. ಈ ವೇಳೆ ಆ್ಯಂಡ್ರೆ ಫ್ಲಿಂಟಾಪ್‌ ಹಾಗೂ ಯುವರಾಜ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ, ಅಂಪೈರ್‌ಗಳ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು.

ಇದಾದ ಮುಂದಿನ ಓವರ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ ಅವರು ಬೌಲಿಂಗ್‌ ಮಾಡಲು ಮುಂದಾದರು. ಈ ವೇಳೆ ಕೆಂಡಾಮಂಡಲರಾಗಿದ್ದ ಯುವರಾಜ್‌ ಸಿಂಗ್‌, ಬ್ರಾಡ್‌ ಅವರ ಆರೂ ಎಸೆತಗಳನ್ನು ಕ್ರೀಡಾಂಗಣದ ಎಲ್ಲ ದಿಕ್ಕುಗಳಲ್ಲಿ ಆರು ಸಿಕ್ಸರ್‌ ಬಾರಿಸಿ ಆರ್ಭಟಿಸಿದರು.

ಆ ಮೂಲಕ ನೆರೆದಿದ್ದ ಅಪಾರ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. ಈ ಪಂದ್ಯದಲ್ಲಿ ಅವರು ಕೇವಲ 12 ಎಸೆತಗಳ್ಲಲಿ ಸ್ಪೋಟಕ ಅರ್ಧ ಶತಕ ಬಾರಿಸಿದರು.

ಅತಿ ವೇಗವಾಗಿ ಅರ್ಧ ಶತಕ ಸಿಡಿಸಿದ ವಿಶ್ವ ಮೊದಲ ಬ್ಯಾಟ್ಸ್‌ಮನ್‌ ಎಂಬ ನೂತನ ದಾಖಲೆಯನ್ನು ಎಡಗೈ ಬ್ಯಾಟ್ಸ್‌ಮನ್‌ ಅಂದು ಮಾಡಿದ್ದರು.

ಒಟ್ಟಾರೆ, ಭಾರತ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 218 ರನ್‌ ದಾಖಲಿಸಿತ್ತು. ಇದಕ್ಕೆ ಉತ್ತರ ನೀಡಿದ ಇಂಗ್ಲೆಂಡ್‌, ಆರು ವಿಕೆಟ್‌ ಕಳೆದುಕೊಂಡು 200 ರನ್‌ ಗಳಿಸಿ 18 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು.

ಇದೇ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಟಿ-20 ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter