ಎನ್‍ಜಿಒಗಳೊಂದಿಗೆ ಜಿಲ್ಲಾಧಿಕಾರಿ ಸಭೆ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ,: ಅನ್ಯ ಕಾರ್ಯ ನಿಮಿತ್ತ ಬಳ್ಳಾರಿ ಜಿಲ್ಲೆಯಿಂದ ಹೊರದೇಶಗಳಿಗೆ ಹೋಗಿ ಬಂದವರು ತಕ್ಷಣ ಮಾಹಿತಿ ನೀಡಬೇಕು ಅಥವಾ ಇಲ್ಲವೇ ಜಿಲ್ಲಾಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು 14 ಗೃಹಬಂಧನದ ನಿಗಾದಲ್ಲಿರಬೇಕು. ಈ ನಿಗಾದ ಸಂದರ್ಭದಲ್ಲಿಯೂ ಎಲ್ಲೆಂದಲ್ಲಿ ತಿರುಗಾಡಿದ್ದು ಕಂಡುಬಂದಲ್ಲಿ ಅಂತವರನ್ನು ಬಂಧಿಸಿದ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದ್ದಾರ   

 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋವೆಲ್ ಕರೋನಾಗೆ ಸಂಬಂಧಿಸಿದಂತೆ ಎನ್‍ಜಿಒಗಳೊಂದಿಗೆ ಗುರುವಾರ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋವೆಲ್ ಕರೋನಾ ವೈರಸ್‍ಗಳು ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ವರದಿಯಾಗಿಲ್ಲ. ಈ ಕರೋನಾ ಕುರಿತು ಭಯಬೇಡ;ಜಾಗೃತಿ ಮತ್ತು ಮುನ್ನಚ್ಚೆರಿಕೆ ಇರಲಿ ಎಂಬುದನ್ನು ವಿವರಿಸಿದ ಜಿಲ್ಲಾಧಿಕಾರಿ ನಕುಲ್ ಅವರು ಉಸಿರಾಟದ ಸಮಸ್ಯೆ ಇರುವವರಿಗೆ ಮತ್ತು 60 ವರ್ಷ ವಯಸ್ಸು ದಾಟಿದವರು ಹೈರಿಸ್ಕ್ ಎಂಬುದನ್ನು ಸಭೆಯಲ್ಲಿ ಬಿಚ್ಚಿಟ್ಟರು .

ಮದುವೆ,ಸಭೆ-ಸಮಾರಂಭಗಳು ಅತ್ಯಂತ ಕಡಿಮೆ ಜನರನ್ನು ಸೇರಿಸಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಜಾತ್ರೆಗಳನ್ನು ರದ್ದುಪಡಿಸಲಾಗಿದೆ. ಕರೋನಾ ವೈರಸ್ ಜಿಲ್ಲೆಯಲ್ಲಿ ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಈಗಾಗಲೇ ಕೈಗೊಂಡಿದೆ ಎಂದು ಅವರು ವಿವಿಧ ಉದಾರಣೆಗಳನ್ನು ಪ್ರಸ್ತಾಪಿಸುವುದರ ಮೂಲಕ ವಿವರಿಸಿದರು.
       
ಕರೋನಾವೈರಸ್‍ಗೆ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್, ವಿಮ್ಸ್‍ನಲ್ಲಿ 10 ಬೇಡ್ ಮತ್ತು ಹೊಸಪೇಟೆಯಲ್ಲಿ 3 ಬೆಡ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳನ್ನು, ಮೊರಾರ್ಜಿ ವಸತಿ ಶಾಲೆಗಳನ್ನು ಗುರುತಿಸಿ ರಿಸರ್ವ್ ಮಾಡಿಡÀಲಾಗಿದೆ ಎಂದು ಸಭೆಗೆ ವಿವರಿಸಿದ ಡಿಸಿ ನಕುಲ್ ಅವರು ಜಿಲ್ಲೆಯಲ್ಲಿರುವ ಎಲ್ ಎನ್‍ಜಿಒಗಳು ತಮ್ಮ ಸ್ವಯಂ ಸೇವಕರ ಪಟ್ಟಿ ಸಿದ್ದಪಡಿಸಿಟ್ಟುಕೊಳ್ಳಬೇಕು; ಅಗತ್ಯಬಿದ್ದಾಗ ಸೇವೆಗೆ ಸಿದ್ದರಿರಬೇಕು. ಕರಪತ್ರಗಳನ್ನು ಮುದ್ರಿಸಿ ವಿತರಿಸುವ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು.
ಬಳ್ಳಾರಿ ಜಿಲ್ಲಾಡಳಿತ ಕರೋನಾ ಜಾಗೃತಿಗೆ ಸಂಬಂಧಿಸಿದ ಐಇಸಿ ವಸ್ತುಗಳನ್ನು ಮತ್ತು ಸರಕಾರಿ ಆದೇಶಗಳನ್ನು ಇಂದು ಸಂಜೆಯೊಳಗೆ ಅಪ್ಲೋಡ್ ಮಾಡಲಾಗುತ್ತಿದ್ದು, ಅವುಗಳನ್ನು ಬಳಸಿಕೊಂಡು ತಾವು ಮುದ್ರಿಸಿ ಹಂಚಿ ಎಂದು ಅವರು ಎನ್‍ಜಿಒಗಳಿಗೆ ಹೇಳಿದರು.

ಗುಲ್ಬರ್ಗಗೆ ಬಸ್ ಸೇವೆ ರದ್ದು..?: ಕರೋನಾ ವೈರಸ್‍ನಿಂದ ಮೃತಪಟ್ಟಿರುವ ಹಾಗೂ ಎರಡು ಸೊಂಕಿತ ಪ್ರಕರಣಗಳು ಕಂಡುಬಂದಿರುವ ಕಲಬುರಗಿಗೆ ಬಳ್ಳಾರಿಯಿಂದ ಬಸ್ ಸೇವೆಯನ್ನು  ರದ್ದುಮಾಡುವುದಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ನಡೆಯಲಿರುವ ಟಾಸ್ಕ್‍ಪೋರ್ಸ್ ಸಮಿತಿಯಲ್ಲಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದರು.

ಬಳ್ಳಾರಿ ಜಿಲ್ಲಾಸ್ಪತ್ರೆ ಮತ್ತು ವಿಮ್ಸ್‍ನಲ್ಲಿ ಅವಶ್ಯಕ ಮತ್ತು ತುರ್ತುಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಒದಗಿಸಿಕೊಡುವುದನ್ನು ಮುಂದೂಡಿ ಸರಕಾರ ಆದೇಶ ಹೊರಡಿಸಿರುವುದನ್ನು ಸಭೆಯ ಗಮನಕ್ಕೆ ಜಿಲ್ಲಾಧಿಕಾರಿ ನಕುಲ್ ಅವರು ತಂದರು.
   
    ಈ ಸಂದರ್ಭದಲ್ಲಿ ಡಿಎಚ್‍ಒ ಡಾ.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎನ್‍ಜಿಒಗಳ ಪ್ರಮುಖರು,ಪ್ರತಿನಿಧಿಗಳು ಸಭೆಯಲ್ಲಿದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter