ನೋಡಿದವರು ಏನಂತಾರೆ ಎನ್ನುತ್ತಿದ್ದಾರೆ ಗುಳ್ಟು ನವೀನ್

Share on facebook
Share on twitter
Share on linkedin
Share on whatsapp
Share on email

ಕಳೆದ ಎರಡು ವರ್ಷಗಳ ಹಿಂದೆ ಗಾಂಧಿನಗರದಲ್ಲಿ ಸದ್ದು ಮಾಡಿದ ಸಿನಿಮಾಗಳ ಸಾಲಿನಲ್ಲಿ ಗುಳ್ಟು ಸಿನಿಮಾ ಸೇರುತ್ತದೆ. ಆ ಚಿತ್ರದಲ್ಲಿ ನಾಯಕನಾಗಿ ಗಮನ ಸೇಳೆದಿದ್ದ ನವೀನ್ ಶಂಕರ್ ಈಗ ‘ನೋಡಿದವರು ಏನಂತಾರೆ’ ಎನ್ನುತ್ತಿದ್ದಾರೆ. ಅಂದರೆ ಅವರಿಗ ‘ನೋಡಿದರು ಏನಂತಾರೆ’ ಎಂಬ ಹೊಸ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ‘ಮದಗಜ’ ತಂಡ ಅಂದರೆ, ನಿರ್ದೇಶಕ ಮಹೇಶ್ ಕುಮಾರ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ನಟ ಶ್ರೀಮುರಳಿ ರಿಲೀಸ್ ಮಾಡಿದರು. ಈ ಚಿತ್ರವನ್ನು ಉದ್ಯಮಿಗಳಾದ ನಾಗೇಶ್ ಹಾಗೂ ಮೋನಿಷಾ ಮೊದಲಬಾರಿ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಚಿತ್ರವನ್ನು ಪ್ರಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ ಕುಲದೀಪ್ ಕಾರ್ಯಪ್ಪ.

ಫಸ್ಟ್ ಲುಕ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀಮುರಳಿ ‘ಗುಳ್ಟು ರಿಲೀಸ್ ಆದಾಗ ಸಾಮಾಜಿಕ ಜಾಲತಾನದಲ್ಲಿ ಅದರದ್ದೆ ಸದ್ದು, ಚಿತ್ರ ನೋಡಿದಾಗ ನವೀನ್ ಒಳ್ಳೆ ನಟ ಅನಿಸಿತ್ತು. ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರೆ ನವೀನ ಅಂತ ನಟರು ಹೆಚ್ಚಾಗಿ ಬರಬೇಕು. ಚಿತ್ರದ ಟೈಟಲ್ ಅಟ್ರ್ಯಾಕ್ಟ್ ಆಗಿದ್ದು, ನೋಡಿದವರು ಏನಂದ್ದಾರು’ ಎಂದರು. ಇದೇ ಸಂದರ್ಭದಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ತಂಡ ನಮ್ಮನ್ನು ಬೇಟಿ ಆದಾಗ ಕಥೆ ಕೇಳಿದೇವು ನಂತರ ವರ್ಕ್ ನೋಡಿದಾಗ ಖುಷಿ ಆಯ್ತು. ಹಾಗಾಗಿ ತಂಡಕ್ಕೆ ಸಪೆÇೀರ್ಟ್ ಮಾಡಲು ಇಲ್ಲಿಗೆ ಬರಲಾಗಿದೆ. ಹೊಸಬರು ಹೆಚ್ಚಾಗಿ ಬಂದಾಗ ಇಂಡಸ್ಟ್ರಿ ಬೆಳೆಯುತ್ತೆ ಎಲ್ಲರು ಒಗ್ಗಟ್ಟಿನಿಂದ ಇದ್ದರೆ ಒಳ್ಳೆ ಚಿತ್ರ ಬರಲು ಸಾದ್ಯ’ ಎಂದರು. ಇನ್ನು ಮಹೇಶ್ ‘ಈ ಚಿತ್ರದ ಟೈಟಲ್ ನಂಗೆ ತುಂಬಾ ಇಷ್ಟವಾಯ್ತು’ ಎನ್ನುವರು.

ಇನ್ನು ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಕುಲದೀಪ್ ಕಾರ್ಯಪ್ಪ ‘ಎರಡುವರೆ ವರ್ಷದ ಶ್ರಮ ಈ ಚಿತ್ರಕ್ಕಿದೆ. ಗೆಳೆಯರು ನಿರ್ಮಾಣ ಮಾಡಿರುವುದು ಖುಷಿ ವಿಷಯ. ಇದು ಸಿದ್ದಾರ್ಥ ಎಂಬ ವ್ಯಕ್ತಿ ಸುತ್ತ ಸಾಗುವ ಜರ್ನಿ ಕಥೆ ಒಳಗೊಂಡಿದೆ. ಟೈಟಲ್ ಬಗ್ಗೆ ಹೇಳುವುದಾದರೆ ಈ ವರ್ಡ್‍ನ್ನು ನಾವು ಜೀವನವಿಡಿ ಕೇಳುತ್ತಾ ಇದ್ದೆವೆ. ‘ಹಾಗೆ ಮಾಡಿದರೆ ನೋಡಿದವರು ಏನಂತಾರೆ? ಹಿಂಗೆ ಮಾಡಿದರೆ ನೋಡಿದವರು ಏನಂತಾರೆ? ಇಂಜಿನಿಯರಿಂಗೇ ಸೇರ್ಕೋ, ಎಂಬಿಬಿಎಸ್ಸೇ ಮಾಡು.. ಇಲ್ದಿದ್ರೆ ನೋಡಿದವರು ಏನಂತಾರೆ? ಹೆಣ್ಣು ಮಕ್ಕಳಿಗೆ ಕಾಲು ಸೇರಿಸಿ ಕೂತ್ಕೋ, ನೋಡಿದವರು ಏನಂತಾರೆ? ಸಾಲ ಮಾಡಿಯಾದರೂ ಕಾರು ತಗೊಳ್ಬೇಕು, ಇಲ್ಲಾಂದ್ರೆ ನೋಡಿದವರು ಏನಂತಾರೆ? … ಹೀಗೆ ಹುಟ್ಟಿನಿಂದ ಸಾಯೋತನಕ ಪ್ರತಿಯೊಂದಕ್ಕೂ ನೋಡಿದವರು ಏನಂತಾರೆ ಅಂದುಕೊಳ್ಳುತ್ತಾ ಸಮಾಜಕ್ಕಾಗಿ ಬದುಕುತ್ತಿರುತ್ತೇವೆ. ಕಡೆಗೊಂದು ದಿನ ನಿಜಕ್ಕೂ ಯಾರಾದರೂ ನಮ್ಮನ್ನು ನೋಡ್ತಿದ್ದಾರಾ ಅನ್ನೋ ಡೌಟು ಬರುತ್ತೆ. ನಮಗಾಗಿ ನಾವು ಬದಕಬೇಕಾ ಆಥವಾ ನೋಡುವವರಿಗಾಗಿ ಬದುಕಬೇಕಾ ಎಂಬ ಕಂಪೆÇ್ಯೀಸ್ ನಲ್ಲಿ ಸಿದ್ದಾರ್ಥ ಇರುತ್ತಾನೆ. ಇದು ಟ್ರಾವೆಲ್ ಸ್ಟೋರಿ ಆದ್ದರಿಂದ ಕೊಡಗು, ಮಂಗಳೂರು, ಬೆಂಗಳೂರು, ಮುಂಬೈ ಮುಂತಾದ ಕಡೆ ಚಿತ್ರೀಕರಣ ಮಾಡಲಾಗುದು.

ಚಿತ್ರದಲ್ಲಿ 4 ಹಾಡುಗಳು ಇದ್ದು ಜಯಂತ್ ಕಾಯ್ಕಿಣಿ ಬರೆಯುತ್ತಿದ್ದಾರೆ. ಸಕ್ರೆಡ್ ಗೇಮ್ಸ್ ನಂಥಾ ವೆಬ್ ಸಿರೀಸ್ ಗೆ ಕೆಲಸ ಮಾಡಿದ್ದ, ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್ ಅಧಿಕಾರಿ ಸಂಗೀತ, ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಸುನಿಲ್ ವೆಂಕಟೇಶ್ ಮತ್ತು ನಿರ್ದೇಶಕರ ಸಂಭಾಷಣೆ ಈ ಚಿತ್ರಕ್ಕಿದೆ. ನಮ್ಮ ಜೀವನದಲ್ಲಿ ನಡೆದ ಸಂಗತಿಗಳನ್ನು ಸೇರಿಸಿ ಈ ಕಥೆ ಮಾಡಲಾಗಿದೆ’ ಎನ್ನುವರು.ನಾಯಕ ನವೀನ ಶಂಕರ್ ಮಾತನಾಡಿ ಕೊರೋನಾ ಆದಮೇಲೆ ಮಾದ್ಯಮದ ಮುಂದೆ ಬಂದಿದ್ದೇನೆ. ಪ್ರೇಕ್ಷಕರು ಮೊದಲ ಸಿನಿಮಾದμÉ್ಟೀ ಈ ಚಿತ್ರಕ್ಕೂ ಪ್ರೀತಿ ಕೊಡಬೇಕು. ನನಗೆ ಹತ್ತಿರವಾದ ಕಥೆ ಇದರಲ್ಲಿ ಇದೆ. ಕಂಟೆಂಟ್ ಬೆಸ್ದ್ ಸಿನಿಮಾ ಇದು ಎಂದರು. ನಾಯಕಿ ಅಪೂರ್ವ ಸೀರಿಯಲ್, ಆರ್ಟ್ ಸಿನಿಮಾ ಬಿಟ್ಟು ಇದು ನನ್ನ ಮೊದಲ ಕಮರ್ಷಿಯಲ್ ಸಿನಿಮಾ. ಇಲ್ಲಿ ಸುಂದರವಾದ ಕಥೆ ಇದೆ ಎನ್ನುವರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter