ಪ್ರಿಯಾಂಕ ಬರ್ತಡೇಗೆ ಅತ್ಯುತ್ತಮ ಗಿಫ್ಟ್ ಖೈಮರಾ ನಿರ್ದೇಶಕ ಪಿ. ವಾಸು ಸಹೋದರ ಪಿ. ವಿಮಲ್ ಅವರ ಮಗ ಗೌತಮ್ ಈ ಚಿತ್ರದ ನಿರ್ದೇಶಕ

Share on facebook
Share on twitter
Share on linkedin
Share on whatsapp
Share on email

ಲ್ಟಿಸ್ಟಾರ್ ಸಿನಿಮಾಗಳು ಅಪರೂಪಕೊಂದು ಸೆಟ್ಟೇರುತ್ತವೆ. ಅದಕ್ಕೂ ಹೆಚ್ಚಾಗಿ ಮಲ್ಟಿಸ್ಟಾರ್ ನಟಿಯರ ಸಿನಿಮಾಗಳು ತಯಾರಾಗುವುದು ತುಂಬಾ ವಿರಳ. ಆದರೆ ಒಬ್ಬ ಸ್ಟಾರ್ ನಟನ ಚಿತ್ರದಲ್ಲಿ ಇಬ್ಬರು ಮೂವರು ನಾಯಕಿಯರಾಗಿರುವುದು ನೋಡುತ್ತೇವೆ. ಇಂತಹ ಚಿತ್ರಗಳು ನಮಗೆ ಬೆರಳೆನಿಕೆಯಷ್ಟು ಸಿಗುತ್ತವೆ. ನಾವೀಗ ಹೇಳ ಹೊರಟಿರುವುದು ಅಂತ ಸಿನಿಮಾದ ಬಗ್ಗೆಯೇ ಹೌದು ಪ್ರಿಯಾಂಕ ಉಪೇಂದ್ರ, ಛಾಯಾ ಸಿಂಗ್ ಹಾಗೂ ಪ್ರಿಯಾಮಣಿ ಅಭಿನಯದ ಸಿನಿಮಾವೊಂದು ಸಿದ್ದವಾಗುತ್ತಿದೆ. ಮೊನ್ನೆಯμÉ್ಟೀ ಈ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ‘ಖೈಮರಾ’ ಎಂದು ಹೆಸರಿಡಲಾಗಿದೆ. ತಂಡ ಪ್ರಿಯಾಂಕ ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ 3ಡಿ ಆ್ಯನಿಮೇಷನ್ ಮೋಷನ್ ಪೆÇೀಸ್ಟರ್‍ನ್ನು ರಿಯಲ್ ಸ್ಟಾರ್ ಉಪೇಂದ್ರ ಕೈನಿಂದ ರಿಲೀಸ್ ಮಾಡಿಸಿದೆ. ಈ ಸಂದರ್ಭದಲ್ಲಿ ‘ಚಿತ್ರ ಚನ್ನಾಗಿ ಸಿದ್ದವಾಗುತ್ತಿದ್ದು, ಮೋಷನ್ ಪೆÇಸ್ಟರ್ ಸುಂದರವಾಗಿ ಬಂದಿದೆ. ಇದರಲ್ಲಿ ಗ್ಲಾಮರ್, ಹಾರರ್, ಥ್ರಿಲ್ಲರ್ ಸೇರಿದ್ದು, ತಂಡಕ್ಕೆ ಒಳ್ಳೆಯದಾಗಲಿ’ ಎಂದರು ಉಪ್ಪಿ.

ಹಾರರ್, ಸೈಕಾಲಜಿಕಲ್ ಥ್ರಿಲ್ಲರ್ ಅಂಶವನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪಿ. ವಾಸು ಅವರ ಸಹೋದರ ಪಿ. ವಿಮಲ್ ಅವರ ಮಗ ಗೌತಮ್ ವಿ.ಪಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇವರಿಗಿದು ಮೊದಲ ಚಿತ್ರವಾಗಿದ್ದು, ಇವರ ಫ್ಯಾಮಿಲಿಗೆ ಕನ್ನಡ ಚಿತ್ರರಂಗ ಅದೃಷ್ಟ ತಂದು ಕೊಡುತ್ತದೆ ಎಂಬ ವಿಶ್ವಾಸವಿದೆ. ಗೌತಮ್ ಅವರ ತಾತ ಎಂ. ಪೀತಾಂಬರಂ ಕನ್ನಡದ ‘ಕಥಾನಾಯಕ’ ಸಿನಿಮಾ ನಿರ್ಮಿಸಿದ್ದರು. ಆದ್ದರಿಂದಲೇ ತಮಿಳಿನ ತಂಡವಾದರೂ ಮೊದಲ ಸಿನಿಮಾ ‘ಖೈಮರಾ’ವನ್ನು ಕನ್ನಡದಲ್ಲೇ ಪ್ರಾರಂಭ ಮಾಡಿದ್ದಾರೆ. ಈ ಮೊದಲು ಇವರ ತಂದೆ ಹಾಗೂ ಪಿ. ವಾಸು ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದು ಕೂಡ ಇದೇ ಸ್ಯಾಂಡಲ್‍ವುಡ್‍ನಿಂದ ಎನ್ನುವುದು ವಿಶೇಷ. ಹಾಗಾಗಿ ಗೌತಮ್ ಕೂಡ ತಮ್ಮ ಸಿನಿಮಾ ಜರ್ನಿಯನ್ನು ಕನ್ನಡದಿಂದಲೇ ಪ್ರಾರಂಭ ಮಾಡುತ್ತಿದ್ದಾರೆ. ಈ ಚಿತ್ರವನ್ನು ತಮಿಳು ಮೂಲದ ಮತಿಯಾಲಗಾನ್ ನಿರ್ಮಿಸುತ್ತಿದ್ದು, ಮತಿ ಹೆಸರಿನಲ್ಲಿ ನಾಯಕನಾಗಿಯೋ ನಟನೆ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ ಕೂಡ ಹೌದು.

ಕಾರ್ಯಕ್ರಮದಲ್ಲಿ ಹಾಜರಾಗಿ ಮಾತನಾಡಿದ ಪ್ರಿಯಾಂಕ ‘ನಾನಿಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದೇನೆ. ಒಂದು ವರ್ಷದ ಹಿಂದೆ ಕಥೆ ಕೆಳಿದಾಗ ತುಂಬಾ ಇಷ್ಟ ಆಯ್ತು. ಮತಿ ನನ್ನ ಸಹ ನಟನಾಗಿ ನಮ್ಮ ಇಂಡಸ್ಟ್ರಿಗೆ ಬರುತ್ತಿದ್ದಾರೆ. ಈ ಖೈಮರಾ ಮೋಷನ್ ಪೆÇೀಸ್ಟರ್ ನನಗೆ ಒಳ್ಳೆ ಬರ್ತಡೇ ಗಿಫ್ಟ್’ ಎಂದರು. ಇದೇ ಸಂದರ್ಭದಲ್ಲಿ ಛಾಯಾ ಸಿಂಗ್ ‘ತುಂಬಾ ವರ್ಷ ಆದಮೇಲೆ ಕನ್ನಡ ಸಿನಿಮಾ ಮಾಡುತ್ತಿದ್ದೇನೆ. ಹೊಸ ಪ್ರತಿಭೆಗಳು ಸೇರಿ ಹೊಸದೊಂದು ಪ್ರಪಂಚ ತೋರಿಸಲು ಹೊರಟಿದ್ದಾರೆ. ಚಿತ್ರ ಚನ್ನಾಗಿ ಬರುತ್ತಿದೆ’ ಎಂದರು.
ಕಾರ್ಯಕ್ರಮಕ್ಕೆ ಹಾಜರಾಗದ ಪ್ರಿಯಾಮಣಿ ವಿಡಿಯೋ ಮೂಲಕ ‘ಈ ಚಿತ್ರದಲ್ಲಿ ನಾನೊಂದು ಪಾತ್ರ ಮಾಡಿದ್ದು, ಇಲ್ಲಿಯವರೇಗೆ ಇಂತ ಪಾತ್ರ ಮಾಡಿಲ್ಲ. ಉಪ್ಪಿ ಜೊತೆ ಎರಡು ಸಿನಿಮಾ ಮಾಡಿದ್ದೆ ಆದರೆ ಪ್ರಿಯಾಂಕ ಜೊತೆ ಮಾಡಿರಲಿಲ್ಲ ಈಗ ಅದು ಇಡೇರಿದೆ’ ಎಂದರು. ಸಂಗೀತ ಸಂಯೋಜಿಸುತ್ತಿರುವ ಗುರುಕಿರಣ್ ಮಾತನಾಡಿ ‘ಇದರಲ್ಲಿ ಕಥೆ ಹೈಲೈಟ್ ಆಗಿದೆ. ಅದಕ್ಕೆ ತಕ್ಕಂತೆ ಸಂಗೀತಕ್ಕೂ ಹೆಚ್ಚು ಮಹತ್ವ ಇದೆ. ನಾನು 20 ವರ್ಷ ಆದಮೇಲೆ ಪ್ರಿಯಾಂಕ ಅವರ ಚಿತ್ರವೊಂದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದೇನೆ’ ಎಂದರು. ಅಂದಂಗೆ ಚಿತ್ರಕ್ಕೆ ವಿಷ್ಣು ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಹಾಗೂ ಆರ್.ಆರ್.ಆರ್, ಬಾಹುಬಲಿಗೆ ವಿಎಫೆಕ್ಸ್ ಮಾಡಿರುವ ಜೈ ಈ ಚಿತ್ರಕ್ಕೆ ವಿಎಫೆಕ್ಸ್ ಮಾಡುತ್ತಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter