ವಿಂಡೀಸ್ ಮಣಿಸಿದ ಅಫ್ಘನ್ ಗೆ ಟಿ-20 ಸರಣಿ

Share on facebook
Share on twitter
Share on linkedin
Share on whatsapp
Share on email

ಲಖನೌ: ಮಾಜಿ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸಂಘಟಿತ ಆಟದ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ್ ಮೂರನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ 29 ರನ್ ಗೆಲುವು ದಾಖಲಿಸಿ, ಸರಣಿಯನ್ನು 2-1 ರಿಂದ ಗೆದ್ದು ಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಅಫ್ಘಾನ್ ತಂಡದ ಸ್ಟಾರ್ ಆರಂಭಿಕ ಹಜರತುಲ್ಲ ಜಜಾಯಿ (0), ಕರಿಮ್ ಜನತ್ (2), ಇಬ್ರಾಹಿಂ ಜರ್ದಾನ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.

ನಾಲ್ಕನೇ ವಿಕೆಟ್ ಗೆ ರಹಮನುಲ್ಲ ಹಾಗೂ ಅಸ್ಗರ್ ಅಫ್ಘನ್ (24) ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಅಸ್ಗರ್ 20 ಎಸೆತಗಳಲ್ಲಿ 24 ರನ್ ಬಾರಿಸಿದರು.

ನಜಿಬುಲ್ಲ ಜರ್ದಾನ್ (14), ಮೊಹಮ್ಮದ್ ನಬಿ (15) ಕೊಂಚ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ರಹಮನುಲ್ಲ 52 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 79 ರನ್ ಸಿಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 156 ರನ್ ಬಾರಿಸಿತು.

ವಿಂಡೀಸ್ ತಂಡದ ಶೆಲ್ಡಾನ್ ಕೊಟ್ರೆಲ್, ವಿಲಿಯಮ್ಸ್, ಕಿಮ್ ಪೌಲ್ ತಲಾ ಎರಡು ವಿಕೆಟ್ ಪಡೆದರು.ಗುರಿಯನ್ನು ಹಿಂಬಾಲಿಸಿದ ವಿಂಡೀಸ್ ತಂಡ 10 ರನ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೂರನೇ ವಿಕೆಟ್ ಗೆ ಏವಾನ್ ಲೂಯಿಸ್ ಹಾಗೂ ಶಾಯ್ ಹೋಪ್ ಜೋಡಿ ತಂಡಕ್ಕೆ ಕೊಂಚ ಚೇತರಿಕೆ ನೀಡಿತು. ಲೂಯಿಸ್ 24 ರನ್ ಬಾರಿಸಿ ಔಟ್ ಆದರು. ನಾಲ್ಕನೇ ವಿಕೆಟ್ ಗೆ ಹೋಪ್ ಹಾಗೂ ಹೇಟ್ಮೆಯರ್ ಜೋಡಿ ಸಹ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಆದರೆ ಅಗತ್ಯ ರನ್ ಸರಾಸರಿ ಕಲೆ ಹಾಕುವಲ್ಲಿ ಹಿಂದೆ ಬಿದ್ದಿತು.

ಶಾಯ್ ಹೋಪ್ 46 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರು. ಅಂತಿಮವಾಗಿ ವಿಂಡೀಸ್ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿ ಸೋಲು ಕಂಡಿತು. ಅಫ್ಘಾನಿಸ್ತಾನ್ ತಂಡದ ಪರ ನವೀನ್ ಉಲ್ ಹಕ್ ಮೂರು ವಿಕೆಟ್ ಕಬಳಿಸಿದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter