ಟಿ-20 ಸರಣಿ: ಭಾರತ ವನಿತೆಯರಿಗೆ ಜಯ

ಟಿ-20 ಸರಣಿ: ಭಾರತ ವನಿತೆಯರಿಗೆ ಜಯ

ನವದೆಹಲಿ:ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಮಹಿಳಾ ತಂಡ ನಾಲ್ಕನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ತಂಡವನ್ನು 5 ರನ್ ಗಳಿಂದ ಮಣಿಸಿ, ಸರಣಿಯಲ್ಲಿ 4-0 ಯಿಂದ ಮುನ್ನಡೆ ಸಾಧಿಸಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ 20 ಓವರ್ ಗಳ ಪಂದ್ಯವನ್ನು 9 ಓವರ್ ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಭಾರತ 9 ಓವರ್ ಗಳಲ್ಲಿ 7 ವಿಕೆಟ್ ಗೆ 50 ರನ್ ಸೇರಿಸಿತು. ಭಾರತ ತಂಡದ ಸ್ಟಾರ್ ಆಟಗಾರ್ತಿಯರು ರನ್ ಕಲೆ ಹಾಕುವಲ್ಲಿ ವಿಫಲರಾದರು. ವೇದಾ ಕೃಷ್ಣಮೂರ್ತಿ (5), ಜಾಮೀಮ ರೋಡ್ರಿಗಸ್ (6), ಹರ್ಮನ್ ಪ್ರಿತ್ ಕೌರ್ (6), ದೀಪ್ತಿ ಶರ್ಮಾ (4) ರನ್ ಕಲೆ ಹಾಕುವಲ್ಲಿ ವಿಫಲರಾದರು. ವಿಂಡೀಸ್ ಪರ ಹಾಯ್ ಲೆ ಮ್ಯಾಥ್ಯೂಸ್ 3, ಫ್ಲೆಟ್ಚರ್, ಶೆನೆಟಾ ಗ್ರಿಮಂಡ್ ತಲಾ ಎರಡು ವಿಕೆಟ್ ಕಬಳಿಸಿದರು.

ಗುರಿಯನ್ನು ಹಿಂಬಾಲಿಸಿದ ಮ್ಯಾಥ್ಯೂಸ್ (11), ಹೆನ್ರಿ (11) ರನ್ ಬಾರಿಸಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ವಿಂಡೀಸ್ 9 ಓವರ್ ಗಳಲ್ಲಿ 5 ವಿಕೆಟ್ ಗೆ 45 ರನ್ ಸೇರಿಸಿತು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.