ಭಾರಿ ಮಳೆ, ಸಾವಿರಾರು ಎಕರೆ ಬೆಳೆ ಹಾನಿ

Share on facebook
Share on twitter
Share on linkedin
Share on whatsapp
Share on email

ಕಲಬರಗಿ : ಕಳೆದ ಮೂರು ದಿನಗಳಿಂದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್ ಮತ್ತು ರಾಯಚೂರು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು ಮಳೆ ಅನಾಹುತಕ್ಕೆ ಒಬ್ಬರು ಜೀವ ಕಳದುಕೊಂಡಿದ್ದು ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆ ವ್ಯಾಪಕ ಹಾನಿಯಾಗಿದೆ.
ಶುಕ್ರವಾರ ರಾತ್ರಿ ಅಳಂದ ತಾಲ್ಲೂಕಿನ ಬೊಮನಹಳ್ಳಿ ಗ್ರಾಮದ ಬಳಿ ತುಂಬಿ ಹರಿಯುವ ಸೇತುವೆ ದಾಟಲು ಯತ್ನಿಸುತ್ತಿದ್ದಾಗ 55 ವರ್ಷದ ವ್ಯಕ್ತಿಯೊಬ್ಬನನ್ನು ತನ್ನ ಕಾರಿನ ಸಮೇತ ಕೊಚ್ಚಿ ಹೋಗಿದ್ದಾರೆ. ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ ಮೃತನನ್ನು ಯಲಸಂಗಿ ಮೂಲದ ಸಿದ್ದಾರಂ ಅವತಿ ಎಂದು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗುರುವಾರ ದಿನವಿಡೀ ಭಾರಿ ಮಳೆಯು ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆಗಳು ಹಾನಿಯಾಗಿದೆ. ಸೆಡಮ್ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಮುಚ್ಚಲಾಗಿದೆ.


ಪ್ರವಾಹದ ನೀರಿನಿಂದ ಪಾರಾಗಲು ಮರದಲ್ಲೆ ಮೂರು ಗಂಟೆ ಕಳೆದಿದ್ದ ಯಾದ್ಗೀರ್ ತಹಶೀಲ್ದಾರ್ ಪಂಡಿತ್ ಬಿರಾದಾರ್ ಅವರನ್ನು ಪರಿಹಾರ ತಂಡ ರಕ್ಷಿಸಿದೆ.ಅವರು ಸಹಾಯಕ್ಕಾಗಿ ಮೊರೆಯಿಟ್ಟ ನಂತರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ಅವರನ್ನು ರಕ್ಷಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter