ಉಚಿತ ಅಕ್ಕಿ ಮತ್ತು ಕಡಲೆ ಕಾಳು ವಿತರಣೆ

Share on facebook
Share on twitter
Share on linkedin
Share on whatsapp
Share on email


ಬಳ್ಳಾರಿ: ಜುಲೈ ಮಾಹೆಗೆ ಆತ್ಮ ನಿರ್ಭರ್ ಯೋಜನೆಯಡಿ ವಲಸಿಗರಿಗೆ ಉಚಿತ ಅಕ್ಕಿ ಮತ್ತು ಕಡಲೆಕಾಳು ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ರಾಮೇಶ್ವರಪ್ಪ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರಡಿಯಲ್ಲಿ ಯಾವುದೇ ಪಡಿತರ ಚೀಟಿ ಹೊಂದಿರದ ಮತ್ತು ಸರ್ಕಾರದಿಂದ ಪಡಿತರ ವಸ್ತುಗಳನ್ನು ಪಡೆಯದ ವಲಸಿಗರಿಗೆ /ಪಡಿತರ ಚೀಟಿ ಇಲ್ಲದವರಿಗೆ ಕೇಂದ್ರ ಸರ್ಕಾರವು 2020 ಮೇ ಜೂನ್ ಮತ್ತು ಜುಲೈ ಮಾಹೆಗಳಲ್ಲಿ ಉಚಿತವಾಗಿ ವಿತರಿಸಲು 10021.97 ಕ್ವಿಂಟಾಲ್ ಅಕ್ಕಿಯನ್ನು ಬಳ್ಳಾರಿ ಜಿಲ್ಲೆಗೆ ಬಿಡುಗಡೆ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ 100220 ಜನ ವಲಸಿಗರು / ಪಡಿತರ ಚೀಟಿ ಇಲ್ಲದವರು ಇರಬಹುದೆಂದು ಅಂದಾಜು ಮಾಡಲಾಗಿದೆ. ಜುಲೈ ಮಾಹೆಯಲ್ಲಿ ಉಚಿತವಾಗಿ ಅಕ್ಕಿ ವಿತರಿಸಲು ಹಂಚಿಕೆ ನೀಡಲಾಗಿದ್ದು,ಜುಲೈ 17ರವರೆಗೆ 131 ಜನರು 12.60ಕ್ವಿಂಟಾಲ್ ಆಹಾರ ಧಾನ್ಯ ಪಡೆದುಕೊಂಡಿದ್ದಾರೆ

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter