ಬಳ್ಳಾರಿಯಲ್ಲಿ ಬೇರೆ ಜಿಲ್ಲೆಗಳ ಲಾಕ್‍ಡೌನ್ ಪರಿಸ್ಥಿತಿ ಆಧರಿಸಿ ತೀರ್ಮಾನ

Share on facebook
Share on twitter
Share on linkedin
Share on whatsapp
Share on email

ಬಳ್ಳಾರಿ:ಜಿಲ್ಲೆಯಲ್ಲಿ ಸದ್ಯಕ್ಕೆ ನೋ ಲಾಕ್‍ಡೌನ್; ಲಾಕ್‍ಡೌನ್ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಈ ಲಾಕ್‍ಡೌನ್‍ನಿಂದ ಕೊರೊನಾ ಸೊಂಕಿನ ಹರಡುವಿಕೆಯಲ್ಲಾದ ಪ್ರಮಾಣದಲ್ಲಾದ ಬದಲಾವಣೆಗಳನ್ನು ಪರಿಶೀಲಿಸಿ ನಮ್ಮಲ್ಲಿ ಅದನ್ನು ಜಾರಿಗೆ ತರಬೇಕೇ ಅಥವಾ ಬೇಡ್ವೆ ಎಂಬುದನ್ನು ಇನ್ನೊಂದು ವಾರಗಳ ಕಾಲ ಕಾಯ್ದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅರಣ್ಯ,ಪರಿಸರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಅವರು ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಕೊರೊನಾ ಸ್ಥಿತಿಗತಿ ಮತ್ತು ಸೊಂಕು ಪ್ರಮಾಣ ಹರಡುವಿಕೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಭಾಗವಹಿಸಿದ್ದ ಶಾಸಕರ ಅಭಿಪ್ರಾಯಗಳನ್ನು ಆಲಿಸಿ ನಿರ್ಧಾರ ಪ್ರಕಟಿಸಿದರ ಬಳ್ಳಾರಿ ಜಿಲ್ಲೆಯನ್ನು ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೇ ಇನ್ನೂ 15 ದಿನಗಳ ಕಾಲ ಕೊರೊನಾ ಸೊಂಕಿತರ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಸಚಿವ ಸಿಂಗ್ ಅವರು ಈಗಾಗಲೇ ಕೊರೊನಾ ಸಂಬಂಧಿಸಿದಂತೆ ಲಾಕ್‍ಡೌನ್ ವಿಧಿಸಿದ ಸಂದರ್ಭದಲ್ಲಿ ಜನರು ಅನುಭವಿಸಿದ ಪಾಡು ದೇವರೇ ಬಲ್ಲ ಎಂಬಂತಾಗಿತ್ತು; ಮತ್ತೇ ಪ್ರತಿನಿತ್ಯ ದುಡಿದು ತಮ್ಮ ಜೀವನ ನಡೆಸುವ ಜನರನ್ನು ಕಷ್ಟಕ್ಕೆ ತಳ್ಳಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಅತಿಹೆಚ್ಚು ಕೊರೊನಾ ಪಸರಿಸುತ್ತಿರುವ ಬಳ್ಳಾರಿ,ಹೊಸಪೇಟೆ,ಸಿರಗುಪ್ಪ ಮತ್ತು ಸಂಡೂರು ನಗರ ವ್ಯಾಪ್ತಿಯಲ್ಲಿ 14 ದಿನಗಳ ಕಾಲ ಲಾಕ್‍ಡೌನ್ ವಿಧಿಸುವುದಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಸಂಸದರಾದ ಸಂಗಣ್ಣ ಕರಡಿ, ಸೈಯದ್ ನಾಸೀರ್ ಹುಸೇನ್, ಶಾಸಕರಾದ ಕರುಣಾಕರರೆಡ್ಡಿ,ಸೋಮಶೇಖರ ರೆಡ್ಡಿ, ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಸೋಮಲಿಂಗಪ್ಪ ಅವರು ಲಾಕ್‍ಡೌನ್ ವಿಧಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.


ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಬಂದ್ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವ ಆನಂದಸಿಂಗ್ ಅವರು, ಇದೇ 21ರಂದು ಬೆಳಗ್ಗೆ 11ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಟ್ರಾಮಕೇರ್ ಸೆಂಟರ್ ಉದ್ಘಾಟಿಸಲಿದ್ದಾರೆ ಎಂದರು.
*ಜಿಂದಾಲ್‍ನಲ್ಲಿ ತಪಾಸಣಾ ಪ್ರಮಾಣ ಹೆಚ್ಚಳಕ್ಕೆ ಖಡಕ್ ಸೂಚನೆ: ಜಿಂದಾಲ್‍ನಲ್ಲಿ ಇದುವರೆಗೆ 5500 ಸಿಬ್ಬಂದಿಗಳಿಗೆ ಮಾತ್ರ ತಪಾಸಣೆ ಮಾಡಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಚಿವ ಸಿಂಗ್ ಅವರು ಕೂಡಲೇ ಜಿಂದಾಲ್‍ನಲ್ಲಿ ತಪಾಸಣಾ ಪ್ರಮಾಣ ಹೆಚ್ಚಿಸಬೇಕು. 10 ಸಾವಿರ ಆ್ಯಂಟಿಜೆನ್ ಕಿಟ್‍ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಖರೀದಿಸಿ ತಪಾಸಣೆ ನಡೆಸಿ ಎಂದು ಖಡಕ್ ಸೂಚನೆ ನೀಡಿದರು.
ತಮ್ಮ ಎಲ್ಲ ಸಿಬ್ಬಂದಿಗಳನ್ನು ತಪಾಸಣೆ ಮಾಡಿಸಿ ಅಗತ್ಯ ಚಿಕಿತ್ಸೆ ಕೊಡಿಸಿ ಎಂದರು
ಜಿಂದಾಲ್‍ನಲ್ಲಿ ಜೂನ್ ತಿಂಗಳಲ್ಲಿ ಅಧಿಕ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು; ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಪ್ರಮಾಣ ಪ್ರಕರಣಗಳು ಕಡಿಮೆಯಾಗಿವೆ. ಇದುವರೆಗೆ 609 ಜನರಿಗೆ ಸೊಂಕು ದೃಢಪಟ್ಟಿದೆ ಎಂದರು.
ಜಿಂದಾಲ್ ಪ್ರತಿನಿಧಿ ಮಂಜುನಾಥ ಪ್ರಭು ಅವರು ಜಿಂದಾಲ್‍ನಲ್ಲಿ ಅಧಿಕ ಕಾಯಿಲೆ ಇರುವವರನ್ನು ಗುರುತಿಸಿ ಅವರಿಗೆ ಅವರರವರ ಮನೆಯಲ್ಲಿಯೇ ಇರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದ್ಯ 11 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಟಾಟಾ ಸ್ಟೀಲ್ ಮಾದರಿಯಲ್ಲಿ ಸಿಬ್ಬಂದಿಯನ್ನು 4 ವಿಭಾಗಗಳನ್ನಾಗಿ ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಂದಾಲ್‍ನಲ್ಲಿರುವ ಎಲ್ಲರಿಗೂ ತಮ್ಮ ಸೂಚನೆಯಂತೇ ತಪಾಸಣೆ ಮಾಡಲಾಗುವುದು ಎಂದರು.
*125 ಆರೋಗ್ಯಸೇವಕರಿಗೆ ಮತ್ತು 27 ಜನ ಪೊಲೀಸರಿಗೆ ಕೊರೊನಾ: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯರು,ನರ್ಸ್ ಸೇರಿದಂತೆ 125 ಆರೋಗ್ಯ ಸೇವಕ ಕೊರೊನಾ ವಾರಿಯರ್ಸ್‍ಗಳಿಗೆ ಹಾಗೂ ಸದಾ 24 ಗಂಟೆಗಳ ಕಾಲ ಜನರ ಸೇವೆ ಸಲ್ಲಿಸುತ್ತಿರುವ 27 ಜನ ಪೊಲೀಸ್ ಪೇದೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಸೊಂಕು ತಗುಲಿದೆ.
ಇವರಲ್ಲಿ 38 ಜನರು ಡಿಸ್ಚಾರ್ಜ್ ಆಗಿದ್ದು, 114 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಕುಲ್ ಸಭೆಗೆ ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 848 ಕಂಟೈನ್ಮೆಂಟ್ ಝೋನ್‍ಗಳು ಮಾಡಲಾಗಿದ್ದು, 498 ಸಕ್ರಿಯವಾಗಿವೆ ಮತ್ತು 350 ಡಿನೋಟಿಫೈ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 2200 ಕೊರೊನಾ ಸೊಂಕು ದೃಢಪಟ್ಟಿದ್ದು,939 ಪ್ರಕರಣಗಳು ಸಕ್ರಿಯವಾಗಿವೆ. 54ಜನರು ಸಾವನ್ನಪ್ಪಿದ್ದಾರೆ ಮತ್ತು 142 ಜನರು ಹೋಂ ಐಸೋಲೇಶನ್‍ನಲ್ಲಿರಿಸಲಾಗಿದೆ ಎಂದು ಡಿಸಿ ನಕುಲ್ ಅವರು ಸಚಿವರ ಗಮನಕ್ಕೆ ತಂದರು.
*ಆರೋಗ್ಯ ಸುರಕ್ಷಾ ಅಭಿಯಾನ ಇತರೆಡೆ ವಿಸ್ತರಣೆ: ಸಂಡೂರಿನಲ್ಲಿ ಆರಂಭಿಸಲಾಗಿರುವ ಆರೋಗ್ಯ ಸುರಕ್ಷಾ ಅಭಿಯಾನದ ಮೂಲಕ ಮನೆ-ಮನೆಗೆ ತೆರಳಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ನಡೆಸಲಿರುವ ಆರೋಗ್ಯ ತಪಾಸಣೆಯನ್ನು ಬಳ್ಳಾರಿ,ಸಿರಗುಪ್ಪ,ಹೊಸಪೇಟೆ ನಗರಿಗಳಿಗೂ ವಿಸ್ತರಿಸಲಾಗುವುದು ಎಂದರು.
ಈಗಾಗಲೇ  ಸಂಡೂರು ತಾಲೂಕಿನಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಈ ನಗರಗಳಲ್ಲಿಯೂ ಸಿಬ್ಬಂದಿಗೆ ತರಬೇತಿ ನೀಡಿ ಆರಂಭಿಸಲಾಗುವುದು ಎಂದು ಅವರು ವಿವರಿಸಿದರು.
ಬಳ್ಳಾರಿ ನಗರದಲ್ಲಿ 50 ಮತ್ತು 60 ಬೆಡ್‍ಗಳ ಎರಡು ಖಾಸಗಿ ಆಸ್ಪತ್ರೆಗಳನ್ನು ಹಾಗೂ ಹೊಸಪೇಟೆಯಲ್ಲಿ 30 ಬೆಡ್‍ಗಳ ಖಾಸಗಿ ಆಸ್ಪತ್ರೆಯನ್ನು ಪಾವತಿಸಿ ಕೊರೊನಾ ಚಿಕಿತ್ಸೆ ಪಡೆಯುವ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಕೊರೊನಾ ಸೊಂಕಿತರಾದವರು ತಮ್ಮ ಸ್ವಂತ ಖರ್ಚಿನಲ್ಲಿ ಪಾವತಿ ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತೇವೆ ಎನ್ನುವವರನ್ನು ಅಲ್ಲಿಗೆ ಕಳುಹಿಸಿಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆಗಳು ನಡೆದವು.
ಸಭೆಯಲ್ಲಿ ಸಂಸದರಾದ ಸಂಗಣ್ಣ ಕರಡಿ,ಸೈಯದ್ ನಾಸೀರ್ ಹುಸೇನ್, ಶಾಸಕರಾದ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ,ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್ ಮತ್ತಿತರರು ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter