ಸ್ವಚ್ಚತೆಯ ಜೊತೆಗೆ ಮಾಸ್ಕನ್ನು ಧರಿಸಿ

Share on facebook
Share on twitter
Share on linkedin
Share on whatsapp
Share on email

ಕುರುಗೋಡು:   ಕರೋನ ಎಂಬ ಮಹಾಮಾರಿ ರೋಗಕ್ಕೆ  ಭಯ ಪಡದೆ ಸ್ವಚ್ಚತೆಯ ಜೊತೆಗೆ  ಮಾಸ್ಕನ್ನುಧರಿಸಿ  ಜಾಗ್ರತೆಯಿಂದ ಇದ್ದರೆ  ಯಾವುದೇ ರೋಗ ಹರಡುವುದಿಲ್ಲಾ ಎಂದು  ಕುರುಗೋಡು ಘಟಕ ಅಧಿಕಾರಿ  ಬಿ. ನಾಗರಾಜ್ ಅವರು ಗೃಹ ರಕ್ಷಕದಳ ಸಿಬ್ಬಂದಿಯವರಿಗೆ ಸೂಚಿಸಿದರು.

ತಾಲ್ಲೂಕಿನ ನಾಡಗೌಡರ ಮರಿಬಸವನಗೌಡರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಗೃಹರಕ್ಷಕ ದಳ ಕವಾಯತು  ಅಭ್ಯಾಸಿಸುವ ವೇಳೆ ಮಾತನಾಡಿದ ಅವರು ಈ ಗಾಗಲೆ  ಕರೋನ ಎಂಬ ರೋಗದಿಂದ ಕರ್ನಾಟಕ ದಲ್ಲಿ  10ಜನ ಮೃತಪಟ್ಟಿರುವುದು ತಿಳಿದುಬಂದಿದೆ.

ಅದ್ದರಿಂದ ಮುಂಜಾಗ್ರತಾ  ಕ್ರಮಗಳಾಗಿ ತಮ್ಮ ತಮ್ಮ ಗ್ರಾಮಗಳಲ್ಲಿ ಗೃಹರಕ್ಷಕ ದಳ ಸಿಬ್ಬಂದಿ ಯವರು ಸ್ವಯಂ ಪ್ರೇರಿತರಾಗಿ   ಹಳ್ಳಿಗಳಲ್ಲಿರುವ ಆರೋಗ್ಯ ಇಲಾಖೆ ಯ ಸಿಬ್ಬಂದಿಯ ಜೊತೆಗೂಡಿ ಸಾರ್ವಜನಿಕ ರಿಗೆ ಸ್ಚಚ್ಚೆ ಹಾಗು ಜಾಗ್ರತೆ ಮೂಡಿಸಬೇಕು  ಎಂದು ತಿಳಿಸಿದರು.

ಗೃಹರಕ್ಷಕ ದಳದ ಸಿ.ಇ.ಒ ಓಬಳೇಶ್,ಸಿಬ್ಬಂದಿ ಗಳಾದ ಗಿರಿಧರರೆಡ್ಡಿ, ಲೋಕೇಶ್, ಪೂಜಾರಿ ಬಸವರಾಜ್, ನಾಗರಾಜ್  ಇದ್ದರು.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter