ಎಟಿಪಿ ಕಪ್ ಡ್ರಾ ಪ್ರಕಟ   ಸಿಡ್ನಿಗೆ ಫೆಡರರ್, ಪರ್ತ್‍ಗೆ ನಡಾಲ್

ಎಟಿಪಿ ಕಪ್ ಡ್ರಾ ಪ್ರಕಟ ಸಿಡ್ನಿಗೆ ಫೆಡರರ್, ಪರ್ತ್‍ಗೆ ನಡಾಲ್

ಲಂಡನ್: ವೃತ್ತಿಪರ ಟೆನಿಸ್ ಅಸೋಸಿಯೇಷನ್ 2020ರ ಆವೃತ್ತಿಯ ಎಟಿಪಿ ಕಪ್ ಟೂರ್ನಿ ಡ್ರಾ ಪ್ರಕಟಿಸಲಾಗಿದ್ದು ಸಿಡ್ನಿಯಲ್ಲಿ ಸ್ವಿಜರ್‍ಲೆಂಡ್‍ನ ರೋಜರ್ ಫೆಡೆರರ್, ಪರ್ತ್‍ನಲ್ಲಿ ಸ್ಪೇನ್‍ನ ರಫೆಲ್ ನಡಾಲ್ ಹಾಗೂ ಬ್ರಿಸ್ಬೇನ್‍ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಸೆಣಸಲಿದ್ದಾರೆ.

ಮುಂದಿನ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯಾ ಓಪನ್ ತಯಾರಿಗೆ ಜನವರಿ 3 ರಿಂದ 12ರವರೆಗೆ ನಡೆಯುವ ಎಟಿಪಿ ಕಪ್ ಸೂಕ್ತ ವೇದಿಕೆಯಾಗಲಿದೆ. ಸಿಡ್ನಿ, ಪರ್ತ್ ಹಾಗೂ ಬ್ರಿಸ್ಬೇನ್‍ನಲ್ಲಿ ಒಟ್ಟು ಆರು ಗುಂಪುಗಳಲ್ಲಿ 24 ದೇಶದ ಆಟಗಾರರು ಎಟಿಪಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ಆಸ್ಟ್ರೇಲಿಯಾದಲ್ಲಿ ನಡೆಯುವ ಎಟಿಪಿ ಕಪ್ ಟೂರ್ನಿಯಲ್ಲಿ ವಿಶ್ವದ ಅಗ್ರ 30 ಶ್ರೇಯಾಂಕದ ಆಟಗಾರು ಭಾಗವಹಿಸಲಿದ್ದಾರೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದರು.

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಬ್ರಿಸ್ಬೇನ್‍ನ ‘ಎ’ ಗುಂಪಿನಲ್ಲಿ ಫ್ರಾನ್ಸ್, ದಕ್ಷಿಣ ಆಫ್ರಿಕಾ, ಜರ್ಮನಿ, ಗ್ರೀಸ್, ಕೆನಡಾ ಹಾಗೂ ವೈಲ್ಡ್‍ಕಾರ್ಡ್ ಆಸ್ಟ್ರೇಲಿಯಾದೊಂದಿಗೆ ಸ್ಥಾನ ಪಡೆದಿದ್ದಾರೆ. ಸ್ಪೇನ್‍ನ ರಫೆಲ್ ನಡಾಲ್ ಅವರು ಪರ್ತ್ “ಬಿ” ಗುಂಪಿನಲ್ಲಿ ಜಪಾನ್, ಜಾರ್ಜಿಯಾ,ರಷ್ಯಾ, ಇಟಲಿ ಅಮೆರಿಕಾದೊಂದಿಗೆ ಆಡಲಿದ್ದಾರೆ.

ಗುಂಪು ‘ಎ’ (ಬ್ರಿಸ್ಬೇನ್)-ಸರ್ಬಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಟಿಬಿಎ
ಗುಂಪು’ಬಿ’ (ಪರ್ತ್)- ಸ್ಪೇನ್, ಜಪಾನ್, ಜಾರ್ಜಿಯಾ, ಟಿಬಿಎ
ಗುಂಪು ‘ಸಿ’ ಸಿಡ್ನಿ)- ಸ್ವಿಜರ್‍ಲೆಂಡ್, ಬೆಲ್ಜಿಯಂ, ಬ್ರಿಟನ್, ಟಿಬಿಎ
ಗುಂಪು ‘ಡಿ’ (ಪರ್ತ್)- ರಷ್ಯಾ ಇಟಲಿ, ಯುಎಸ್‍ಎ, ಟಿಬಿಎ
ಗುಂಪು ‘ಇ’ (ಸಿಡ್ನಿ)- ಆಸ್ಟ್ರೀಯಾ, ಕ್ರೋವೇಷ್ಯಾ, ಅರ್ಜೆಂಟೀನಾ, ಟಿಬಿಎ
ಗುಂಪು ‘ಎಫ್’ (ಬ್ರಿಸ್ಬೇನ್)- ಜರ್ಮನಿ, ಗ್ರೀಸ್, ಕೆನಡಾ, ಟಿಬಿಎ
ಈ ಮೇಲೆ ಸೂಚಿಸಿರುವ ರಾಷ್ಟ್ರಗಳ ಅಗ್ರ ಇಬ್ಬರು ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 24 ದೇಶಗಳಿಂದ ಒಟ್ಟು 100 ಆಟಗಾರರು ಪಾಲ್ಗೊಳ್ಳಲಿದ್ದು, 15 ದಶಲಕ್ಷ ಬಹುಮಾನ ಹಾಗೂ 750 ಎಟಿಪಿ ಶ್ರೇಯಾಂಕ ಅಂಕಗಳನ್ನು ನೀಡಲಾಗುವುದು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.