ಆಸ್ಟ್ರೇಲಿಯಾದಲ್ಲಿ ಭಾರಿ ಮಳೆ ಸಾಧ್ಯತೆ; ಕಾಡ್ಗಿಚ್ಚಿನಿಂದ ಬಾಧಿತರಿಗೆ ಕೊಂಚ ನಿರಾಳ

Share on facebook
Share on twitter
Share on linkedin
Share on whatsapp
Share on email

ಸಿಡ್ನಿ: ತೀವ್ರ ಕಾಡ್ಗಿಚ್ಚಿನಿಂದ ಬಾಧಿತವಾಗಿರುವ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಕೆಲವೆಡೆ ಮಳೆಯಾಗುವ ಲಕ್ಷಣಗಳು ಕಂಡುಬಂದಿದ್ದು, ಬೆಂಕಿ ನಂದಿಸಲು ಯತ್ನಿಸುತ್ತಿರುವವರಿಗೆ ನಿರಾಳತೆ ತರುವ ಸಾಧ್ಯತೆಯಿದೆ.

ಈ ವಾರಾಂತ್ಯದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಳನಾಡಿನಲ್ಲಿ ಚಂಡಮಾರುತ ಬೀಸಿದೆ. ಆದ್ದರಿಂದ ಗಾಳಿಯಲ್ಲಿನ ತೇವಾಂಶ ನ್ಯೂಸೌತ್ ವೇಲ್ಸ್ ಮತ್ತು ಆಗ್ನೇಯ ಆಸ್ಟ್ರೇಲಿಯಾದತ್ತ ಸಾಗಿದ್ದು, ಸಾಕಷ್ಟು ಮುಂಗಾರು ಚಟುವಟಿಕೆಗಳು ನಡೆಯುತ್ತಿವೆ ಎಂದು ಇಲಾಖೆ ತಿಳಿಸಿದೆ.

ಈ ವರ್ಷದ ದೇಶದಲ್ಲಿರುವ ವಾತಾವರಣದ ಶೈಲಿಯೇ ಒಳನಾಡುಗಳ ಗಾಳಿಯಲ್ಲಿ ತೇವಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದ ಮೋಡಗಳು ಕಟ್ಟಿದ್ದು, ಮಳೆಯ ಲಕ್ಷಣಗಳು ಕಂಡುಬಂದಿದೆ.
ಆದರೆ, ಈ ಮಳೆ, ದೇಶ ಎದುರಿಸುತ್ತಿರುವ ಹಿಂದೆಂದೂ ಕಾಣದ ಕಾಡ್ಗಿಚ್ಚಿನ ಸಮಸ್ಯೆಗೆ ಸಂಪೂರ್ಣ ಪರಿಹಾರ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter