ಜಡತ್ವ ಕ್ರಿಯಾಶೀಲವಾದಾಗ ಮಾತ್ರ ಸಾಧನೆ ಸಾಧ್ಯ

ಜಡತ್ವ ಕ್ರಿಯಾಶೀಲವಾದಾಗ ಮಾತ್ರ ಸಾಧನೆ ಸಾಧ್ಯ

ಹರಪನಹಳ್ಳಿ:  ಈ ನಾಡಿನಲ್ಲಿ ಬುದ್ದ, ಬಸವ, ರೇಣುಕಾ, ಯೋಸು ಸೇರಿದಂತೆ ಅನೇಕ ದಾರ್ಶನಿಕರು ಬಂದರೂ ಸಮಾಜ ಸುಧಾರಣೆ ಕಂಡಿಲ್ಲ. ನಮ್ಮಲ್ಲಿ ಜಡತ್ವ ಮನೆ ಮಾಡಿದ್ದು, ಅದನ್ನು ಕ್ರಿಯಾಶೀಲತೆಯನ್ನಾಗಿ ಬದಲಾಯಿಸಿಕೊಂಡಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಶಾಖಾ ಮಾನಿಹಳ್ಳಿ ಪುರವರ್ಗ ಮಠದ ಪೀಠಾಧ್ಯಕ್ಷ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜ್ಯೋತಿ ದರ್ಶನ ನಿಮಿತ್ಯ 11ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ದೀಪಾರಾಧನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅರ್ಶೀವಚನ  ನೀಡಿದ ಅವರು ಶಿವನಲ್ಲಿ ಇರುವ ಗುಣ ಸ್ವಾಮೀಜಿಗಳಿರುತ್ತವೆ. ಮಾನವ ಮಹದೇವ ಆಗಲು ಸಾಧ್ಯ. ಹುಟ್ಟು ಸಾವಿನ ಬಿಡುಗಡೆಗಾಗಿ ಹೋರಾಟ ನಡೆಸುವುದೇ ಮನುಷ್ಯ ಜೀವನ. ಹುಟ್ಟು ಸಾವಿನಿಂದ ಬಿಡುಗಡೆ ಹೊಂದುವವರು ಮಾತ್ರ ಮಾನವತ್ವದಿಂದ ದೇವತ್ವದ ಕಡೆಗೆ ನಡೆಯುತ್ತಾನೆ ಎಂದರು.

ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಕ್ರಮಣ ಸಮಯದಲ್ಲಿ ಬರುವ ಉತ್ತರಾಯಣ ಪುಣ್ಯ ಕಾಲಕ್ಕೆ ಮಹತ್ವವಿದೆ. ಈ ಸಂದರ್ಭದಲ್ಲಿ ದೇಹ ತ್ಯಾಗ ಮಾಡಿದವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿಯಿದೆ. ಮನುಷ್ಯ ಪೂರ್ವಾರ್ಧದಲ್ಲಿ ಆಸೆ ಆಮಿಷಗಳಲಿಗೆ ಒಳಗಾಗಿರುತ್ತಾನೆ. ನಂತರ ಮುಕ್ತಿ ಮಾರ್ಗಕ್ಕಾಗಿ ದಾರಿ ಹುಡುಕಾಟ ನಡೆಯುತ್ತದೆ ಎಂದ ಅವರು,  ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡುವಲ್ಲಿ ದಾನ ಶೂರ ಕರ್ಣನಂತಿರುವ ಲಲಿತಮ್ಮರ ಸೇವೆ ಅನನ್ಯ ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಮಕರ ಸಂಕ್ರಾಂತಿ ಹಬ್ಬದಿಂದ ಸೂರ್ಯ ದಿಕ್ಕು ಬದಲಿಸುವ ಸಮಯ. ಹಗಲು ಹೆಚ್ಚಾಗುತ್ತದೆ. ಚರ್ಮ ಒಡೆಯಬಾರದು ಎಂಬ ಕಾರಣಕ್ಕೆ ಎಳ್ಳು ಬಳಸಲಾಗುತ್ತದೆ. ಸಂಕ್ರಾಂತಿ ಸಹಬಾಳ್ವೆ, ಸಹಕಾರ ಒಂದುಗೂಡಿಸುವ ಕೆಲಸವಾಗಿದೆ. ಮಕ್ಕಳು ಸಂಸ್ಕೃತಿ ಮರೆಯುತ್ತಿದ್ದಾರೆ. ಸಂಸ್ಕಾರ ಕಲಿಸಿ ಎಂದು ಸಲಹೆ ನೀಡಿದರು.

ದಾನಚಿಂತಾಮಣಿ ಹೆಚ್.ಎಂ.ಲಲಿತಮ್ಮ ಅಧ್ಯಕ್ಷತೆವಹಿಸಿದ್ದರು. ಹಡಗಲಿ ಗವಿಸಿದ್ದೇಶ್ವರ ಮಠದ ಡಾ‌.ಹಿರಿಶಾಂತವೀರ ಸ್ವಾಮೀಜಿ, ಮತ್ತಿಗಿ ಹಾಲಸ್ವಾಮೀಜಿ, ಉಪನ್ಯಾಸಕ ಎಂ.ಪಿ.ಎಂ.ಶಾಂತವೀರಯ್ಯ, ಸಂಸ್ಕಾರ ಭಾರತಿ ಅಧ್ಯಕ್ಷ ಮಹಾವೀರ ಭಂಡಾರಿ, ಸೋಮಶೇಖರ್, ಎಂ.ಪ್ರಕಾಶ್, ಕೆ.ಈರಣ್ಣ, ಎ.ಎಂ.ಗುರುಪ್ರಸಾದ್, ರಾಜಶೇಖರ ಬಣಕಾರ್, ಆರುಂಡಿ ನಾಗರಾಜ್, ಕೌಟಿ ಸುಮ ವಾಗೀಶ್, ಕೆ.ಆರ್.ಗಿರೀಶ್ ಮತ್ತಿತರರು.

administrator

Related Articles

Leave a Reply

Your email address will not be published. Required fields are marked *

Copyright © 2019 Belagayithu | All Rights Reserved.