ಚಂದನವನ ಅನಘ್ರ್ಯ ರತ್ನವನ್ನು ಕಳೆದುಕೊಂಡಿದೆ ರಾಜನ್ ನಿಧನಕ್ಕೆ ಕೆಎಫ್‍ಸಿಸಿ ಸಂತಾಪ

Share on facebook
Share on twitter
Share on linkedin
Share on whatsapp
Share on email

ಬೆಗಳೂರು: ಮಹಾನ್ ಸಂಗೀತ ನಿರ್ದೇಶಕ ರಾಜನ್ ಅವರ ನಿಧನದಿಂದಾಗಿ ಕನ್ನಡ ಚಿತ್ರರಂಗವು ಅನಘ್ರ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾ ವ್ಯಕ್ತಪಡಿಸಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಾಣಿಜ್ಯ ಮಂಡಳಿ, ಮಾಧುರ್ಯತೆಗೆ, ಸುಶ್ರಾವ್ಯತೆಗೆ ಮತ್ತೊಂದು ಹೆಸರಾಗಿದ್ದ ರಾಜನ್ ನಾಗೇಂದ್ರ ಜೋಡಿ ಚಿತ್ರ ರಸಿಕರ ಹೃದಯದಲ್ಲಿ ತಮ್ಮ ಸಂಗೀತದ ಮೂಲಕ ನೆಲೆಯೂರಿದ್ದಾರೆ ಎಂದು ತಿಳಿಸಿದೆ.

ಸೌ¨ssÁಗ್ಯ ಲಕ್ಷ್ಮಿ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ರಾಜನ್ ನಾಗೇಂದ್ರ, ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್, ಅನಂತನಾಗ್ ಅವರಿಂದ ಹಿಡಿದು ಶಿವರಾಜ್ ಕುಮಾರ್ ಅವರಂತ ಕಲಾವಿದರ ಚಿತ್ರಗಳಿಗೆ ಸಂಗೀತ ನೀಡಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಸಿಂಹಳಿ, ಹಿಂದಿ ಸೇರಿ 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಎಂದಿಗೂ ಮರೆಯಲಾಗದ ಹಾಡುಗಳನ್ನು ನೀಡಿದ್ದಾರೆ.

ಎರಡು ಕನಸು ಮತ್ತು ಪರಸಂಗದ ಗೆಂಡೆತಿಮ್ಮ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಹಾಗೂ ಆಂಧ್ರಪ್ರದೇಶ ಸರ್ಕಾರದಿಂದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪರವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter