‘ಯುವರತ್ನ’ ಚಿತ್ರೀಕರಣ ಮುಕ್ತಾಯ

Share on facebook
Share on twitter
Share on linkedin
Share on whatsapp
Share on email

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಚಿತ್ರೀಕರಣ ಮುಗಿಸಿದೆ. ಲಾಕ್‍ಡೌನ್‍ನಿಂದ ಕೊನೆಯ ಹಂತದ ಶೂಟಿಂಗ್ ಸ್ಥಗಿತಗೊಳಿಸಿದ್ದ ಚಿತ್ರತಂಡ ಈಗ ಸಂಪೂರ್ಣವಾಗಿ ಮುಗಿಸಿದೆ.ನಗರದ ಕಂಠೀರವ ಸ್ಟೂಡಿಯೋದ ಅದ್ಧೂರಿ ಸೆಟ್‍ನಲ್ಲಿ ಹಾಡಿನ ಚಿತ್ರೀಕರಣದೊಂದಿಗೆ ಶೂಟಿಂಗ್ ಗೆ ಪೂರ್ಣವಿರಾಮ ನೀಡಿದೆ ಚಿತ್ರತಂಡ. ಕೊನೆಯ ದಿನದ ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಾಯಕಿ ಸಯೇಶಾ ಸೈಗಲ್ ಭಾಗಿಯಾಗಿದ್ದರು. ಈ ವೇಳೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಪಾಲ್ಗೊಂಡಿದ್ದರು. ಈ ಸಂತಸವನ್ನು ನಿರ್ದೇಶಕ ಸಂತೋμï ಆನಂದ್‍ರಾಮ್ ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

‘ಯುವರತ್ನ’ ಚಿತ್ರ ನಿರ್ದೇಶಕ ಸಂತೋμï ಆನಂದ್‍ರಾಮ್ ಅವರು ಟ್ವೀಟ್ ಮಾಡಿದ್ದು, ಚಿತ್ರೀಕರಣ ಅಂತ್ಯಗೊಂಡಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಅಲ್ಲದೇ, ಕೊನೆಯಲ್ಲಿ ಕ್ಲಿಕ್ಕಿಸಿಕೊಂಡ ಸಂತಸದ ಫೆÇೀಟೋಗಳನ್ನು ಹಂಚಿಕೊಂಡಿದ್ದಾರೆ.‘ಯುವರತ್ನ ಚಿತ್ರೀಕರಣ ನಿನ್ನೆ ಮುಕ್ತಾಯವಾಯಿತು. ನನ್ನ ಬೆನ್ನುತಟ್ಟಿ ಸಿನಿಮಾವನ್ನು ಯಶಸ್ವಿ ಆಗಿ ಮುಗಿಸಿಕೊಟ್ಟ ಎಲ್ಲರಿಗೂ, ನನ್ನ ಡೈರೆಕ್ಷನ್ ಟೀಮ್ ಗೆ ಹಾಗೂ ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನನ್ನ ತಂಡ, ನನ್ನ ಶಕ್ತಿ’ ಎಂದು ನಿರ್ದೇಶಕ ಸಂತೋμï ಆನಂದ್‍ರಾಮ್ ಬರೆದುಕೊಂಡಿದ್ದಾರೆ.

ಇನ್ನು, ‘ಯುವರತ್ನ’ನ ಕಡೆಯಿಂದ ಅಪ್ಪು ಅಭಿಮಾನಿಗಳಿಗೆ ನಾಡ ಹಬ್ಬ ದಸರಾದ ಪ್ರಯುಕ್ತ ಉಡೂಗೊರೆಯೊಂದು ದೊರಕಲಿದೆ.‘ಯುವರತ್ನ’ ಚಿತ್ರದ ಹಾಡೊಂದನ್ನು ಸಂತೋμï ಆನಂದ್‍ರಾಮ್ ಅವರು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿದ್ದಾರೆ.‘ಯುವರತ್ನ’ ಚಿತ್ರದ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ಮಾತ್ರ ಬಾಕಿಯಿದ್ದು, ಆದಷ್ಟು ಬೇಗ ಮುಗಿಸಿ ತೆರೆಗೆ ಬರಲು ಸಜ್ಜಾಗಲಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter