ಆಡಳಿತಾರೂಢ ಬಿಜೆಪಿಗೆ ‘ಲಕ್ಷ್ಮಿ ಕಟಾಕ್ಷ’….!

Share on facebook
Share on twitter
Share on linkedin
Share on whatsapp
Share on email

ನವದೆಹಲಿ: ಈ ವರ್ಷ ಭಾರತೀಯ ಜನತಾ ಪಕ್ಷಕ್ಕೆ ಅತಿ ಹೆಚ್ಚು ಕಾರ್ಪೊರೇಟ್ ದೇಣಿಗೆ ದೊರೆತಿದೆ ಎಂದು ವರದಿಯೊಂದು ತಿಳಿಸಿದೆ.
2018-19ರ ಅವಧಿಯಲ್ಲಿ ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು ವಿವಿಧ ರಾಷ್ಟ್ರೀಯ ಪಕ್ಷಗಳಿಗೆ ದೇಣಿಗೆಯಾಗಿ 879.10 ಕೋಟಿ ರೂ ನೀಡಿವೆ. ಈ ಪೈಕಿ 698.082 ಕೋಟಿ ರೂ ಹಣ ಬಿಜೆಪಿ ಖಾತೆಗೆ ಜಮಾ ಆಗಿದೆ ಎಂದು ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ವರದಿ ಮಾಡಿದೆ.

ಒಟ್ಟು 1,573 ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಇನ್ನೂ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು , ಕಾಂಗ್ರೆಸ್ ಪಕ್ಷಕ್ಕೆ 122 ಕಾರ್ಪೋರೇಟ್‌ ಕಂಪನಿಗಳು ಕಾಂಗ್ರೆಸ್ ಪಕ್ಷಕ್ಕೆ 122.5 ಕೋಟಿ ರೂ. ದೇಣಿಗೆ ನೀಡಿವೆ. ಈ ನಡುವೆ 17 ಕಾರ್ಪೋರೇಟ್‌ ಸಂಸ್ಥೆಗಳು ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ 11.35 ಕೋಟಿ ರೂ. ದೇಣಿಗೆ ನೀಡಿವೆ. ಬಿಜೆಪಿಗೆ ಶೇ 94 ರಷ್ಟು ದೇಣಿಗೆ ದೊರೆತರೆ, ಕಾಂಗ್ರೆಸ್ ಶೇ 82 ರಷ್ಟು ದೇಣಿಗೆ ಪಡದುಕೊಂಡಿದೆ.

Share on facebook
Share on twitter
Share on linkedin
Share on whatsapp
Share on email

Leave a Reply

Your email address will not be published. Required fields are marked *

Stay Connected

Newsletter